Site icon ಹರಿತಲೇಖನಿ

ದರ್ಶನ್ ಬಿಟ್ರೆ ನಿಮಗೆ ಹಾಕ್ಲಿಕೆ ಬೇರೆ ಸಬ್ಜೆಕ್ಟ್ ಇಲ್ವಾ..? ಟಿವಿ ಚಾನಲ್ ಬಗ್ಗೆನೇ ಅಸಹ್ಯ ಬರುತ್ತೆ; ಕೆಎಸ್ ಈಶ್ವರಪ್ಪ ಗರಂ402519.jpgದರ್ಶನ್ ಬಿಟ್ರೆ ನಿಮಗೆ ಹಾಕ್ಲಿಕೆ ಬೇರೆ ಸಬ್ಜೆಕ್ಟ್ ಇಲ್ವಾ..? ಟಿವಿ ಚಾನಲ್ ಬಗ್ಗೆನೇ ಅಸಹ್ಯ ಬರುತ್ತೆ; ಕೆಎಸ್ ಈಶ್ವರಪ್ಪ ಗರಂ

ಶಿವಮೊಗ್ಗ, (ಸೆ.16); ಅಶ್ಲೀಲ ಸಂದೇಶ ಕಳಿಸಿದ ಕಾರಣ ವ್ಯಕ್ತಿಯೋರ್ವನ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಖಾಸಗಿ ಸುದ್ದಿವಾಹಿನಿಗಳು ಈ ಪ್ರಕರಣ ಕುರಿತು ಮಾಡುತ್ತಿರುವ ವೈಭವೀಕರಣ, ಅತಿರೇಕದ ವರದಿಗಳು ಸಾರ್ವಜನಿಕರನ್ನು ಕೆರಳಿಸಿದ್ದು, ಸುದ್ದಿವಾಹಿನಿಗಳ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗಿದೆ.

ಅಂತೆಯೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಕೂಡ, ಖಾಸಗಿ ಸುದ್ದಿವಾಹಿನಿಗಳ ನಡೆಯನ್ನು ಸುದ್ದಿಗೋಷ್ಠಿಯಲ್ಲಿಯೇ ಖಂಡಿಸಿದ್ದಾರೆ. ಈ ಕುರಿತು ಆಕ್ರೋಶದಿಂದಲೇ ಮಾತನಾಡಿರುವ ಅವರು, ನಿಮಗೆ ಟಿವಿನಲ್ಲಿ ಹಾಕೋಕೆ ಬೇರೆ ಸಬ್ಜೆಕ್ಟ್ ಇಲ್ವಾ.. ಟಿವಿ ಚಾನಲ್ ಬಗ್ಗೆನೇ ಅಸಹ್ಯ ಬರುತ್ತೆ ಎಂದಿದ್ದಾರೆ.

ಪುಣ್ಯಾತ್ಮ ದರ್ಶನ್ ಸಾಕಪ್ಪೋ ಎನ್ನುವಂತಾಗಿದೆ. ಒಂದು ಟಿವಿಯಲ್ಲಿ ಏನೋ ಇದೆ ಅಂತ ಬೇರೆ ಚಾನಲ್ ಚೇಂಜ್ ಮಾಡುದ್ರೆ.. ಹಣೆ ಬರ ಅಲ್ಲೂ ಅದೇ. ಏನ್ ನಡಿಸ್ತಾ ಇದ್ದೀರಿ.‌? ಕೈ ಮುಗಿತೀನಿ ಕೆಟ್ಟ ವಿಚಾರ ಆಗಿದ್ರೆ ಒಂದ್ ಸರಿ ತೋರಿಸಿ ಅಲ್ಲಿಗೆ ಬಿಟ್ ಬಿಡಿ. ಒಳ್ಳೆಯ ವಿಚಾರವನ್ನು ತೋರಿಸಿ ಎಂದರು.

ಈ ವೇಳೆ ಸುದ್ದಿ ವಾಹಿನಿ ವರದಿಗಾರ ನೀವ್ ಕೈ ಮುಗಿತೀರಿ ಅವರು ಬೆರಳು ತೋರಿಸಿ ಹೋಗ್ತಾ ಇದ್ದಾರೆ ಎಂದರು. ಇದಕ್ಕೆ ಈಶ್ವರಪ್ಪ ಅದನ್ನು ಮತ್ತೆ ತೋರಿಸ್ತೀರಲ್ರಿ.. ಅವರ ಬೆಳ್ ಯಾಕ್ ತೋರಿಸ್ಥಿರಿ ಮತ್ತೆ ಎಂದು ವ್ಯಂಗ್ಯವಾಡಿದರು. 

ನೀವು ಕೂಡ ಸಮಾಜವನ್ನು ತಿದ್ದೋದಕ್ಕೆ ಏನ್ ಏನೂ ಬೇಕು ಟಿವಿ ಚಾನಲ್ ಅವರು ದಯವಿಟ್ಟು ಮಾಡಿ. ಅದೇ ಪ್ರಕರಣವನ್ನು ತೋರಿಸ್ತಾ ಕೂರೋದ್ರಿಂದ ಏನು ಪ್ರಯೋಜನವಿಲ್ಲ. ಮಕ್ಕಳಿಗೆ ಟಿವಿ ಚಾನಲ್ ಬಗ್ಗೆನೇ ಅಸಹ್ಯ ಬರುತ್ತೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version