ವೇದ ಜ್ಯೋತಿಷ್ಯದ ಆಧಾರದ ಮೇಲೆ ಮೀನ ರಾಶಿಯ ಜಾತಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಫಲಿತಾಂಶಗಳು ಹೀಗಿದೆ.
ರಾಶಿ ಚಕ್ರದಲ್ಲಿ ಹನ್ನೆರಡನೇ ಜ್ಯೋತಿಷ್ಯ ರಾಶಿಯಾಗಿದ್ದು, ಆಕಾಶ ರೇಖಾಂಶದ 330-360 ಡಿಗ್ರಿಗಳನ್ನು ವ್ಯಾಪಿಸಿದೆ.
ಮೀನ ರಾಶಿ: ರಾಹು ನಿಮ್ಮ ರಾಶಿಗೆ ಬಂದಿರುವುದರಿಂದ ಆರೋಗ್ಯದ ಕಡೆ ಗಮನ ಹರಿಸಿಬೇಕಿದೆ. ಏಳನೇ ಮನೆಯಲ್ಲಿ ಕೇತು ಇರುವುದರಿಂದ ಸಂಗಾತಿಯೊಂದಿಗಿನ ಬಾಂಧವ್ಯದಲ್ಲಿ ಚಿಕ್ಕಪುಟ್ಟ ಘರ್ಷಣೆಗಳಾಗಬಹುದು. ಯಾವುದೇ ಕಿರಿಕಿರಿಗೆ ಅವಕಾಶ ಕೊಡಬೇಡಿ. ವಾದಗಳಿಂದ ದೂರವಿರಿ. 24ರ ನಂತರ ಶುಕ್ರ ಭಾಗ್ಯಸ್ಥಾನಕ್ಕೆ ಬರುವುದು ನಿಮಗೆ ಲಾಭವನ್ನು ತಂದುಕೊಡುತ್ತದೆ.
ದೇವಿ ಕೃಪೆ ಸಿಗುತ್ತದೆ. ಪ್ರವಾಸ ಅಥವಾ ವಿಹಾರಕ್ಕೆ ಹೋಗುವ ಅವಕಾಶ ಒದಗಿ ಬರುತ್ತದೆ. ಸುಖ ಭೋಜನ, ಸಮಾರಂಭಗಳಿಗೆ ಭೇಟಿಯಾಗುವುದು, ಬಂಧು ಬಾಂಧವರ ಜೊತೆ ಉಲ್ಲಾಸದಿಂದ ಬೆರೆಯುವುದು ಮುಂತಾದ ಮನಸ್ಸಿಗೆ ಮುದ ಕೊಡುವ ಸಂಗತಿಗಳು ಇವೆ. ಒಡವೆ ಖರೀದಿ ಮಾಡುತ್ತೀರಿ.
ಖರ್ಚುಗಳು ಹೆಚ್ಚು ಇದ್ದರೂ ಜಾಣ್ಮೆಯಿಂದ ನಿಭಾಯಿಸುತ್ತೀರಿ. ವೃತ್ತಿಯಲ್ಲಿ ಯಶಸ್ಸು ಗಳಿಸುತ್ತೀರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸುತ್ತೀರಿ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಜನರು ನಿಮ್ಮ ಸಲಹೆಗಳನ್ನು ಪಾಲಿಸುತ್ತಾರೆ. ನಿಮ್ಮ ಮಾತಿಗೆ ಬೆಲೆ ಇದೆ.
ಮೀನ ರಾಶಿ: ಪೂರ್ವಾಭಾದ್ರ ನಕ್ಷತ್ರ (4 ನೇ ಪಾದ), ಉತ್ತರಾಭಾದ್ರ ನಕ್ಷತ್ರ(4), ರೇವತಿ ನಕ್ಷತ್ರ (4) ಅಡಿಯಲ್ಲಿ ಜನಿಸಿದ ಜನರು ಮೀನ ರಾಶಿ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಗುರು.
ಮೀನ ರಾಶಿಗೆ ಸೂಚಿಸಲಾದ ಅಕ್ಷರಗಳು: ದಿ, ದು, ದೆ, ದೊ, ಚ, ಚಿ
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….