ದೊಡ್ಡಬಳ್ಳಾಪುರ, (ಸೆ.12); ತೀವ್ರ ಕುತೂಹಲ ಕೆರಳಿಸಿರುವ ನಗರಸಭೆ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ದಿನಾಂಕ ಘೋಷಿಸಲಾಗಿದೆ.
ಈ ಕುರಿತು ಚುನಾವಣೆ ಅಧಿಕಾರಿ ದುರ್ಗ ಶ್ರೀ ಎನ್ ಅವರು ಸೂಚನಾ ಪತ್ರ ಹೊರಡಿಸಿದ್ದು, ಇದರನ್ವಯ ಸೆಪ್ಟೆಂಬರ್ 23 ರಂದು ಮಧ್ಯಾಹ್ನ ಎರಡು ಗಂಟೆಗೆ ಚುನಾವಣೆ ನಡೆಯಲಿದೆ.
ಸೆ.23 ರಂದು ನಾಮಪತ್ರ ಸಲ್ಲಿಸಲು ಬೆಳಗ್ಗೆ 09 ರಿಂದ 11 ಗಂಟೆವರೆಗೆ ಸಮಯ ನಿಗದಿಯಾಗಿದ್ದು, ಚುನಾವಣೆ ಸಭೆ ಆರಂಭ 01 ಗಂಟೆಗೆ ಆಗಲಿದೆ, 1-15 ರಿಂದ 1-30ರ ವರೆಗೆ ನಾಮಪತ್ರ ಪರಿಶೀಲನೆ, 1-30ರಿಂದ 2 ಗಂಟೆಯ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಹಾಗೂ ಚುನಾವಣೆ ಅಗತ್ಯವೆನಿಸಿದಲ್ಲಿ 2 ಗಂಟೆಯಿಂದ ಆರಂಭವಾಗಲಿದೆ.
ಈ ಮುಂಚೆ ಅಧ್ಯಕ್ಷರಾಗಿದ್ದ ಸುಧಾರಾಣಿ ಲಕ್ಷ್ಮೀ ನಾರಾಯಣ್, ಉಪಾಧ್ಯಕ್ಷೆ ಫರ್ಹಾನ ತಾಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಯಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತುತ ಪ್ರಭಾ ನಾಗರಾಜ್, ನಾಗರತ್ನಮ್ಮ ಕೃಷ್ಣಮೂರ್ತಿ, ರೂಪಿಣಿ ಮಂಜುನಾಥ್, ನಾಗವೇಣಿ ಶ್ರೀನಿವಾಸ್, ರಜನಿ ಸುಬ್ರಮಣಿ, ವತ್ಸಲ ಸತ್ಯನಾರಾಯಣ, ನಾಗರತ್ನಮ್ಮ ಕೃಷ್ಣಮೂರ್ತಿ, ಸುಮಿತ್ರಮ್ಮ ಆನಂದ್, ಹಂಸಪ್ರಿಯ ದೇವರಾಜ್ ಹಾಗೂ ಮತ್ತೊಂದು ಪ್ರಯತ್ನದಲ್ಲಿ ಸುಧಾರಾಣಿ ಲಕ್ಷ್ಮೀನಾರಾಯಣ್ ಅವರ ಹೆಸರು ಕೂಡ ಕೇಳಿಬರುತ್ತಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಶ್, ತನ ಪ್ರಭುದೇವ್, ವಡ್ಡರಹಳ್ಳಿ ರವಿಕುಮಾರ್, ಆನಂದ್ ಅವರ ಹೆಸರು ಮುಂಚೂಣಿಯಲ್ಲಿದೆ.
ಕಮಲ-ದಳ ಮೈತ್ರಿ ಆಡಳಿತ ನಡೆಸುತ್ತಿದ್ದ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಮೊದಲ ಅವಧಿಯಲ್ಲಿ ಬಿಜೆಪಿ ಸದಸ್ಯರು ಅಧ್ಯಕ್ಷರಾಗಿದ್ದ ಕಾರಣ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಟ್ಟು ಹಡಿದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….