ವ್ಯಾಟಿಕನ್, (ಸೆ.15): ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳಿಬ್ಬರ ವಿರುದ್ಧವೂ ಅಸಮಾಧಾನ ಹೊರಹಾ ಕಿರುವ ಪೋಪ್ ಫ್ರಾನ್ಸಿಸ್, ಒಬ್ಬರು ಗರ್ಭಪಾತ ಬೆಂಬಲಿಸುವವರು, ಮತ್ತೊಬ್ಬರು ವಲಸೆ ವಿರೋಧಿ ನಿಲುವು ತಳೆದಿರುವವರು. ಹಾಗಾಗಿ, ಅಮೆರಿಕದ ಕ್ಯಾಥೋಲಿಕ್ಸ್ ಜನರು, ಇವರಿಬ್ಬ ರಲ್ಲಿ ಯಾರು ಕಡಿಮೆ ದುಷ್ಟರೋ ಅವರನ್ನು ಆಯ್ಕೆ ಮಾಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ನಾನು ಅಮೆರಿಕನ್ ಪ್ರಜೆ ಅಲ್ಲ. ಹೀಗಾಗಿ ನಾನು ಮತ ಚಲಾಯಿಸುವ ಪ್ರಶ್ನೆ ಇಲ್ಲ ಎಂದು ಪೋಪ್ ಹೇಳಿದರು. ಅಮೆರಿಕನ್ ಕ್ಯಾಥೋಲಿಕರು ಯಾರಿಗೆ ಮತ ಚಲಾಯಿಸಬೇಕು? ನಿಮ್ಮ ಸಲಹೆಯೇನು ಎಂಬ ಮಾಧ್ಯಮದವರ ಪ್ರಶ್ನೆಗೆ ಪೋಪ್, ಇಬ್ಬರೂ ಅಭ್ಯರ್ಥಿಗಳು ಜೀವ ವಿರೋಧಿಗಳಾಗಿದ್ದಾರೆ.
ಒಬ್ಬರು ವಲಸಿಗರ ಹೊರಗಟ್ಟುವುದಾಗಿ ಹೇಳಿದರೆ, ಮತ್ತೊಬ್ಬರು ಹುಟ್ಟಲಿರುವ ಶಿಶುವನ್ನು ಕೊಲ್ಲುವುದನ್ನು ಬೆಂಬಲಿಸುವ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ ಚಲಾವಣೆ ಕರ್ತವ್ಯ. ಆದರೆ ಯಾರು ಕಡಿಮೆ ಜೀವ ವಿರೋಧಿ ಎಂಬುದನ್ನು ತರ್ಕ ಮಾಡಿ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….