ದೊಡ್ಡಬಳ್ಳಾಪುರ, (ಸೆ.14): ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಕರ್ನಾಟಕ ರಾಜ್ಯ ಸಮಿತಿ 2024-27ನೇ ಸಾಲಿನ ಸರ್ವ ಸದಸ್ಯರ ಸಭೆ ಮತ್ತು ಹೊಸ ತಂಡದ ರಚನೆಗಾಗಿ ಚುನಾವಣೆ ಪ್ರಕ್ರಿಯೆ ನಗರದ ಡಿ.ಪಿ.ವಿ ಕಲ್ಯಾಣ ಮಂದಿರದಲ್ಲಿ ನಡೆಯಿತು.
ಚುನಾವಣಾ ಅಧಿಕಾರಿಯಾಗಿ ಗ್ವಾನವರ ಗಾಡಿಲಿಂಗಪ್ಪ ನೇಮಕಗೊಂಡಿದ್ದರು. ತೀವ್ರ ಕುತೂಹಲ ಹಾಗೂ ಹಣಾಹಣಿಯನ್ನು ನಿರೀಕ್ಷಿಸಿದ್ದ ಚುನಾವಣೆ ಯಾವುದೇ ಗದ್ದಲವಿಲ್ಲದೆ ಅವಿರೋಧ ಆಯ್ಕೆಯಾಯಿತು.
ಚುನಾವಣಾ ಮತ್ತು ಸರ್ವ ಸದಸ್ಯರ ಸಭೆಯ ವೀಕ್ಷಕರಾಗಿ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಕೇಂದ್ರ ಕಚೇರಿಯ ಅಧ್ಯಕ್ಷ ಡಾ.ಅಯ್ಯಪ್ಪನ್ ಗೌರವ ಕಾರ್ಯದರ್ಶಿ ಕೆ ವಿಜಯಕುಮಾರ್, ಉಪಾಧ್ಯಕ್ಷ ಹರೀಂದ್ರನಾಥ್ , ಹಿರಿಯ ಸದಸ್ಯ ವಿಜಯೇಂದ್ರ ನಾಯರ್ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್‌ನ ಟಿ.ಎಸ್.ಮಹದೇವಯ್ಯ ಮತ್ತು ಬಿ.ವಿ.ಬಸವರಾಜ್ ರವರನ್ನು ಗೌರವಿಸಲಾಯಿತು.
ಪದಾಧಿಕಾರಿಗಳ ಆಯ್ಕೆ : ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾಗಿ ಕೆ. ರಮೇಶ್, ಉಪಾಧ್ಯಕ್ಷರುಗಳಾಗಿ ಪಿ.ಬಿ. ಸುಬ್ರಹ್ಮಣ್ಯಂ, (ಮುಳಬಾಗಿಲು), ರೇವಪ್ಪ ರೆಡ್ಡಿ (ಬೀದರ್) ಜಿ ಬಾಲಮುರುಗನ್ (ಬೆಂಗಳೂರು), ಹೆಚ್ ವೀರೇಂದ್ರ ಪ್ರಸಾದ್ (ಸಿರುಗುಪ್ಪ) ಹಾಗೂ ವಿರೂಪಣ್ಣ ಗುಡಿ (ಸಿಂಧನೂರು) ಮತ್ತು ವೀರೇಶ್ ಎಂ ಕಲಬುರ್ಗಿ (ಬಾಗಲಕೋಟೆ).
ಕಾರ್ಯದರ್ಶಿಯಾಗಿ ಪಿಪಿ ಮುರಳಿಧರನ್ (ತೆಕ್ಕಲಕೋಟೆ), ಜಂಟಿ ಕಾರ್ಯದರ್ಶಿಗಳಾಗಿ ಮಹಾಂತೇಶ್ ಪಿ ಗೊನ್ನಾಗರ್ (ಧಾರವಾಡ) ಕೆ.ಟಿ ಗಿರೀಶ್ (ಚಿಕ್ಕಬಳ್ಳಾಪುರ) ಎಂ ಸುಬ್ರಮಣಿ (ಮದ್ದೂರು) ಕೆ ಎಂ ಗೋಪಿ (ಬೆಂಗಳೂರು) ಎಂ ರಾಘವೇಂದ್ರ (ಶಿವಮೊಗ್ಗ) ಡಿ.ಎನ್. ಮುರಳಿಮೋಹನ್ (ದೊಡ್ಡಬಳ್ಳಾಪುರ) ಖಜಾಂಚಿಯಾಗಿ ಕೆ.ನಾರಾಯಣ್ (ಧಾರವಾಡ).
ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅವಿರೋಧ ಆಯ್ಕೆಯಾದರು. ಇದರೊಂದಿಗೆ ವಿವಿಧ ಜಿಲ್ಲೆಯ 40 ಜನರು ಆಡಳಿತ ಮಂಡಳಿಯ ಪ್ರತಿನಿಧಿಗಳಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ ಕೆ.ರಮೇಶ್ ಮಾತನಾಡಿ, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಕರ್ನಾಟಕ ರಾಜ್ಯದ ಸದಸ್ಯರುಗಳ ಪ್ರೀತಿ ಅಭಿಮಾನ ನಂಬಿಕೆಯಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಈ ಮೂಲಕ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ. ಸಂಘವು ಅಯ್ಯಪ್ಪ ಭಕ್ತರ ಶ್ರೇಯೋಭಿವೃದ್ದಿಗಾಗಿ ಕೆಲಸ ಮಾಡಲಿದ್ದು, ಸದಸ್ಯರ ನಂಬಿಕೆ ಉಳಿಸಿಕೊಳ್ಳುವುದಾಗಿ ತಿಳಿಸಿದರು.
ಬೆಂಗಳೂರಿನ ಹೃದಯ ಭಾಗದಲ್ಲಿ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಕರ್ನಾಟಕ ವಿಭಾಗಕ್ಕೆ ಕಛೇರಿಗಾಗಿ ಜಾಗವನ್ನು ನೀಡುವುದಾಗಿ ತಿಳಿಸಿರುವ ಜಿ ಬಾಲಮುರುಗನ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….