ಬೆಂಗಳೂರು, (ಸೆ.11); ಕನ್ನಡ ಚಿತ್ರರಂಗದ ಡಿಂಪಲ್ ಕ್ಲೀನ್ ರಚಿತಾ ರಾಮ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಪೋಸ್ಟ್ ತೀವ್ರ ಕುತೂಹಲ ಕೆರಳಿಸಿದ್ದು, ಹಲವು ರೀತಿಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
Fake people have an image to maintain Real people just don’t care (ಫೇಕ್ ಜನರು ನಾಟಕ ಮಾಡಿಕೊಂಡು ಇಮೇಜ್ ಮೇಂಟೈನ್ ಮಾಡುತ್ತಾರೆ. ಆದ್ರೆ ರಿಯಲ್ ವ್ಯಕ್ತಿತ್ವ ಉಳ್ಳವರು ಯಾರಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ) ಎಂಬ ಅರ್ಥದಲ್ಲಿ ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಗೆಲುವಿನ (ವಿಕ್ಟರಿ) ಸಿಂಬಲ್ ತೋರಿಸಿದ್ದಾರೆ.
ಇದು ನಟ ದರ್ಶನ್ ವಿರುದ್ಧ ಬೆಂಕಿ ಉಗುಳುತ್ತಿರುವ ಕೆಲ ಖಾಸಗಿ ಸುದ್ದಿ ವಾಹಿನಿಗಳ ಕಣ್ಣಿಗೆ ದರ್ಶನ್ ಪರವಾಗಿಯೇ ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ ಎಂಬಂತೆ ಅರ್ಥಗಳನ್ನು ಕಲ್ಪಿಸುವಂತೆ ಭಾಸವಾಗುತ್ತಿದೆ ಎಂದು ವರದಿ ಮಾಡುತ್ತಿವೆ.
ಈ ಹಿಂದೆ ನ್ಯಾಯಾಂಗ ಬಂಧನದ ಕಾರಣ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಇತರೆ ಮಿತ್ರರಂತೆ ನಟಿ ರಚಿತಾ ರಾಮ್ ಅವರು ಕೂಡ ದರ್ಶನ್ ರನ್ನ ಭೇಟಿ ಮಾಡಿ ಬಂದಿದ್ದರು. ಆ ಸಂದರ್ಭದಲ್ಲಿ ಕೂಡ ದರ್ಶನ್ ಸ್ಥಿತಿ ಕುರಿತು, ಅವರಿಂದಾದ ನೆರವಿನ ಕುರಿತು ರಚಿತಾ ರಾಮ್ ಮಾತನಾಡಿದ್ದರು.
ವ್ಯಕ್ತಿಯೋರ್ವನ ಕೊಲೆ ಆರೋಪದಲ್ಲಿ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು A2 ಆರೋಪಿ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸುವ ಸಿದ್ಧತೆಯಲ್ಲಿದ್ದಾರೆ.
ಈ ನಡುವೆ ದರ್ಶನ್ ಪ್ರಕರಣದ ಜಾರ್ಜ್ ಶೀಟ್ ಕುರಿತು ಖಾಸಗಿ ಸುದ್ದಿವಾಹಿನಿಗಳ ರೋಚಕ, ಬೇಕಾಬಿಟ್ಟಿ ವರದಿಗೆ ನ್ಯಾಯಾಲಯ ತಡೆ ನೀಡಿದ್ದು, ಕೆಲ ಸುದ್ದಿ ವಾಹಿನಿ ನಿರೂಪಕರ ತಳಮಳಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ ರಚಿತಾ ರಾಮ್ ಈ ರೀತಿ ಪೋಸ್ಟ್ ಮಾಡಿರುವುದು ಕೆಲ ಸುದ್ದಿವಾಹಿನಿಗಳಲ್ಲಿ ಬಗೆ ಬಗೆಯ ಚರ್ಚೆಗೆ ಕಾರಣವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….