ಲಖನೌ, (ಸೆ.10): ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಂದೇ ಭಾರತ ಎಕ್ಸ್ ಪ್ರೆಸ್ ರೈಲು ಉತ್ತರ ಪ್ರದೇಶದ ಎಟಾ ಜಿಲ್ಲೆಯಲ್ಲಿ ನಿಲುಗಡೆ ಆಗಿದ್ದು, ಅದನ್ನು ಗೂಡ್ಸ್ ರೈಲಿನ ಎಂಜಿನ್ ಸಹಾಯದಿಂದ ಎಳೆಸಿದ ವಿಚಿತ್ರ ಪ್ರಸಂಗ ಸೋಮವಾರ ನಡೆದಿದೆ.
ದಿಲ್ಲಿಯಿಂದ ವಾರಾಣಸಿಗೆ ತೆರಳುತ್ತಿದ್ದ ವಂದೇ ಭಾರತ್ ಎಂಜಿನ್ ನಲ್ಲಿ ಬೆಳಿಗ್ಗೆ 9.15ಕಕ್ಕೆ ತಾಂತ್ರಿಕ ದೋಷ ಕಂಡುಬಂದಿದೆ. ಎಂಜಿನಿಯರ್‌ಗಳು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಆದ್ದರಿಂದ 10.24ಕ್ಕೆ ಗೂಡ್ಸ್ ರೈಲಿನ ಎಂಜಿನ್ ಮುಖಾಂತರ ಭರ್ತಾನಾ ನಿಲ್ದಾಣದವರೆಗೆ ಎಳೆದುಕೊಂಡು ಬರಲಾಗಿದೆ. ನಂತರ ಅನ್ಯ ರೈಲಲ್ಲಿ ಪ್ರಯಾಣಿಕರನ್ನು ಕಳಿಸಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsapp, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–