ವೇದ ಜ್ಯೋತಿಷ್ಯದ ಆಧಾರದ ಮೇಲೆ ತುಲಾ ರಾಶಿಯ ಜಾತಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಫಲಿತಾಂಶಗಳು ಹೀಗಿದೆ.
ರಾಶಿ ಚಕ್ರದಲ್ಲಿ ಏಳನೇ ಜ್ಯೋತಿಷ್ಯ ರಾಶಿಯಾಗಿದ್ದು, ಆಕಾಶ ರೇಖಾಂಶದ 180-210 ಡಿಗ್ರಿಗಳನ್ನು ವ್ಯಾಪಿಸಿದೆ.
ತುಲಾ ರಾಶಿ: ಬಹಳ ದಿನಗಳಿಂದ ಕಾಯುತ್ತಿದ್ದ ನಿಮ್ಮ ಒಂದು ಯೋಜನೆ ಈಗ ಕಾರ್ಯಗತ ವಾಗುತ್ತದೆ. ಹೊಸ ಹೊಸ ಅವಕಾಶ ಅರಸಿ ಬರುತ್ತದೆ. ಹೊಸ ನೌಕರಿಯ ಹುಡುಕಾಟದಲ್ಲಿ ಇರುವವರಿಗೆ ಶುಭ ಸುದ್ದಿ ಇದೆ.
ಅವಿವಾಹಿತರಿಗೆ ವಿವಾಹ ಯೋಗ ಇದೆ. ಮನೆಯಲ್ಲಿ ಶುಭ ಕಾರ್ಯ ಗಳ ಸಡಗರ ಇರುತ್ತದೆ. ವಿದ್ಯಾರ್ಥಿಗಳಿಗೆ ಶುಭ ಫಲಗಳು ಇವೆ. ವಿದೇಶ ಪ್ರಯಾಣ ಯೋಗ ಇದೆ. ನಿಮ್ಮ ಕೆಲಸಗಳಿಗೆ ತಕ್ಕ ಗೌರವ, ಸನ್ಮಾನ ದೊರೆತು ಮನಸ್ಸಿಗೆ ಸಂತಸ ಸಿಗುತ್ತದೆ.
ರಾಹು ನಿಮ್ಮ ಪರಾಕ್ರಮವನ್ನು ಹೆಚ್ಚಿಸುತ್ತಾನೆ. ಶತ್ರುಗಳ ವಿರುದ್ದ ವಿಜಯ ಸಾಧಿಸುತ್ತೀರಿ. ವೈದ್ಯ ವೃತ್ತಿ ಹಾಗೂ ರಾಸಾಯನಿಕ ವಸ್ತುಗಳ ವೃತ್ತಿ ಮಾಡುವವರಿಗೆ ಲಾಭ ಇದೆ. ಕಲಾವಿದರಿಗೆ ಬಹಳ ಶುಭ ಫಲಗಳು ದೊರೆಯುತ್ತದೆ.
ಶುಕ್ರ ನಿಮಗೆ ಹೊಸ ಚೈತನ್ಯವನ್ನು ಕೊಡುತ್ತಾನೆ. 16 ರ ನಂತರ ಸೂರ್ಯನು ಇನ್ನೂ ಹೆಚ್ಚಿನ ಶುಭ ಫಲ ನೀಡುತ್ತಾನೆ. ವೃತ್ತಿಯಲ್ಲಿ ಯಶಸ್ಸು ಇದೆ. ವೃತ್ತಿಯಲ್ಲಿನ ಕಿರಿಕಿರಿಗಳು ಮಾಯವಾಗುತ್ತದೆ. ಬೆಳವಣಿಗೆಗೆ ಹೇರಳ ಅವಕಾಶಗಳು ಸಿಗುತ್ತದೆ. ಪಂಚಮ ಶನಿಯ ಕಿರಿಕಿರಿ ಇದ್ದರೂ ಗುರುಬಲ ಅವೆಲ್ಲವನ್ನೂ ತೊಡೆದು ಹಾಕುತ್ತದೆ.
ತುಲಾ ರಾಶಿ: ಚಿತ್ತಾ ನಕ್ಷತ್ರ (3,4 ಪಾದ), ಸ್ವಾತಿ ನಕ್ಷತ್ರ (4), ವಿಶಾಖ ನಕ್ಷತ್ರ (1, 2, 3 ಪಾದ) ಅಡಿಯಲ್ಲಿ ಜನಿಸಿದವರು ತುಲಾ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿಯ ಅಧಿಪತಿ ಶುಕ್ರ.
ತುಲಾ ರಾಶಿಗೆ ಸೂಚಿಸಲಾದ ಅಕ್ಷರಗಳು: ರ, ರಿ, ರು, ರೆ, ರೊ, ತ, ತಿ, ತು, ತೆ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….