![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಬೆಂಗಳೂರು, (ಸೆ.07): ಇತ್ತೀಚೆಗಷ್ಟೇ ಓಲಾ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ಆಗಿತ್ತು. ನಂತರ ಆಟೋ ಚಾಲಕನ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಕೇಳಿಬಂದಿತ್ತು. ಅದರಂತೆ ಚಾಲಕನ ವಿರುದ್ಧ ಪೊಲೀಸರ ಕ್ರಮ ತೆಗೆದುಕೊಂಡಿದ್ದರು.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಈ ಘಟನೆಯ ಖಂಡಿಸುವ ಆವೇಶದಲ್ಲಿ ಬೆಂಗಳೂರಿನ ಸ್ಥಳೀಯರ ವಿರುದ್ಧ ಉತ್ತರ ಭಾರತದ ಯುವತಿಯೊಬ್ಬಳು ನಾಲಿಗೆ ಹರಿಬಿಟ್ಟಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂತವರಿಂದಲೇ ಇಡೀ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ನಾವೆಲ್ಲಾ ತೆರಿಗೆ ಕಟ್ಟುತ್ತಿದ್ದೇವೆ. ಇವರಿಗೆ ನಾವು ಬಾಡಿಗೆ ಕಟ್ಟುತ್ತಿದ್ದೇವೆ. ಇಡೀ ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ. ಕರ್ಮ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕನ್ನಡಿಗರನ್ನು ಬಾಯಿಗೆ ಬಂದಂತೆ ಮಾತನಾಡಿದ್ದಾಳೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಸದ್ಯ ಉತ್ತರ ಭಾರತೀಯ ಮೂಲದ ಯುವತಿ ಬೆಂಗಳೂರಿನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಯುವತಿ ಮೇಲೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲೇ ಇದ್ದುಕೊಂಡು ನಮ್ಮ ರಾಜ್ಯದ ಬಗ್ಗೆ ಮಾತಾಡಿದ್ದ ಯುವತಿ ಸದ್ಯ ವಿಡಿಯೋ ಡಿಲೀಟ್ ಮಾಡಿ ಯುವತಿ ಕ್ಷಮೆ ಕೇಳಿದ್ದಾಳೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….