ವೇದ ಜ್ಯೋತಿಷ್ಯದ ಆಧಾರದ ಮೇಲೆ ಕನ್ಯಾ ರಾಶಿಯ ಜಾತಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಫಲಿತಾಂಶಗಳು ಹೀಗಿದೆ.
ರಾಶಿ ಚಕ್ರದಲ್ಲಿ ಆರನೇ ಜ್ಯೋತಿಷ್ಯ ರಾಶಿ ಯಾಗಿದ್ದು, ಆಕಾಶ ರೇಖಾಂಶದ 150-180 ಡಿಗ್ರಿಗಳನ್ನು ವ್ಯಾಪಿಸಿದೆ.
ಕನ್ಯಾ ರಾಶಿ: ಶನಿ ಆರನೇ ಮನೆಯಲ್ಲಿ ಇರುವುದು ನಿಮಗೆ ಬಹುದೊಡ್ಡ ಗುಣಾತ್ಮಕ ಅಂಶ. ಶತ್ರುಗಳ ಮೇಲೆ ವಿಜಯ ಸಾದಿಸುವುದು, ಮಾಡುವ ಕೆಲಸ ಕಾರ್ಯಗಳಲ್ಲಿ ಜಯ ಸಿಗುವುದು, ಹಣದ ಹರಿವು ಸರಾಗ ಆಗುವುದು, ಅಡೆ-ತಡೆಗಳನ್ನು ನಿವಾರಿಸಿಕೊಂಡು ಮುನ್ನುಗ್ಗುವುದು ಮುಂತಾದ ಒಳ್ಳೆಯ ಸಂಗತಿಗಳನ್ನು ಶನಿಯ ಅನುಗ್ರಹದಿಂದ ಪಡೆಯುತ್ತೀರಿ.
ಕೆಲಸ ಕಾರ್ಯಗಳು ಅಲ್ಲಿಲ್ಲಿ ನಿಂತು ನಿಂತು ಸಾಗುತ್ತದೆ. ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳಿಂದ ಬಳಲುತ್ತೀರಿ. ರಾಹು ಗ್ರಹವು ಹಾಗೂ ನಿಮ್ಮ ರಾಶಿಯಲ್ಲೇ ಕೇತು ಇರುವುದು ಕೊಂಚ ಕಿರಿಕಿರಿಗೆ ಕಾರಣವಾಗುತ್ತದೆ.
ವಿನಾಕಾರಣ ಕೋಪ, ಹಠ ಎದುರು ಇರುವವರ ಮನಸ್ಸಿಗೆ ನೋವಾಗುವಂತಹ ಘಟನೆಗಳು ಆಗಿಬಿಡಬಹುದು. ಜಾಗರೂಕತೆಯಿಂದ ಇರಿ. ಎರಡನೇ ಮನೆಯಲ್ಲಿ ಶುಕ್ರ ಸ್ವಂತ ಮನೆಯಲ್ಲಿ ಇದ್ದಾನೆ. ಇದು ನಿಮಗೆ ಸಂಪತ್ತನ್ನು ಕೊಡುತ್ತದೆ. ಮಕ್ಕಳಿಂದ ಮನಸ್ಸಿಗೆ ಹರ್ಷ ಇದೆ.
ವಿದೇಶ ಪ್ರಯಾಣ ಮಾಡುವ ಯೋಜನೆ ಇರುವವರಿಗೆ ವೀಸಾ ದೊರೆತು ಅಡೆತಡೆ ನಿವಾರಣೆ ಆಗುತ್ತದೆ. ವಿದೇಶ ವ್ಯವಹಾರಗಳಲ್ಲಿ ಧನಲಾಭ ಇದೆ.16ರ ವರೆಗೂ ಸೂರ್ಯ ಮೂರನೇ ಮನೆಯಲ್ಲಿ ಇದ್ದು ಸರ್ಕಾರಿ ಕೆಲಸ ಕಾರ್ಯಗಳನ್ನು ಸುಲಭ ಮಾಡಿಸುತ್ತಾನೆ.
ಕನ್ಯಾ ರಾಶಿ: ಉತ್ತರ (2, 3, 4 ಪಾದ), ಹಸ್ತಾ (4 ಪಾದ), ಚಿತ್ತ (1, 2 ಪಾದ) ಕನ್ಯಾ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಬುಧ.
ಕನ್ಯಾ ರಾಶಿಗೆ ಸೂಚಿಸಲಾದ ಅಕ್ಷರಗಳು: ಪ, ಪಿ, ಪು, ಪೆ, ಪೊ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….