ಹೊಸಕೋಟೆ, (ಸೆ.06); ಸಾಧು ಸಂತರ ಹಾಗೂ ಧರ್ಮ ಗುರುಗಳ ಇತಿಹಾಸವನ್ನ ಆಚರಣೆಗಳ ಮೂಲಕ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಖಾಜಿ ಮೊಹಲ್ಲಾದಲ್ಲಿ ನೆರವೇರಿದ ಹಜರತ್ ಸೈಯದ್ ಷಬ್ಬರ್ ಷಾ ವಲಿ-ವಾ-ಹಜ್ರತ್ ಷಹಜಾದಿ ಬೀ ಅಮ್ಮ ಹಜರತ್ ಖಾಜಿ ಬುಡನ್ ಷಾ (ರಹ) ವಾ ಹಜ್ರತ್ ಮರಿಯಂಬೀರವರ ಗಂಧ ಹಾಗೂ ಉರುಸ್ ಮತ್ತು ಖವಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನದೆ ಹಲವಾರು ಧರ್ಮ ಗುರುಗಳು ತಮ್ಮದೇ ಆದ ಭಕ್ತಿ ಮಾರ್ಗ ಹಾಗೂ ಶಾಂತಿ ಸಮಾನತೆಯ ಸಹಬಾಳ್ವೆಯೊಂದಿಗೆ ಸಮಾಜದ ಉನ್ನತಿಗೆ ಶ್ರಮಿಸಿ ಹೋಗಿದ್ದಾರೆ. ಅಂತಹವರ ಮಹಾನ್ ಧರ್ಮಗುರುಗಳ ಹೆಸರನ್ನು ಆಚರಣೆಗಳ ಮೂಲಕ ಉಳಿಸುವ ಕೆಲಸ ಆಗಬೇಕು. ಹಜರತ್ ಖಾಜಿ ಬುಡನ್ ಶಾ ಹಾಗೂ ಹಜರತ್ ಮರಿಯಂಬಿರವರು ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜದ ಉನ್ನತಿಗೆ ಶ್ರಮಿಸಿದ್ದಾರೆ.
ಒಂದು ಸ್ಮರಣೆಯನ್ನು ದರ್ಗಾದಲ್ಲಿ ಪೂಜೆ ಸಲ್ಲಿಸುವ ಮೂಲಕ ಮಾಡುತ್ತಿದ್ದೇವೆ. ಭಕ್ತಿ ಹಾಗೂ ಭಾವೈಕ್ಯತೆಯಿಂದ ಈ ಉರುಸ್ ಹಾಗೂ ಗಂಧ ಪುಷ್ಪ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿರುವುದು ಪ್ರಶಂಸನಿಯ ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಹೊಸಕೋಟೆ ತಾಲೂಕಿನಲ್ಲಿ ಉರುಸ್ ಹಾಗೂ ಗಂಧ ಪುಷ್ಪ ಕಾರ್ಯಕ್ರಮಗಳನ್ನು ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆ ಸಾಮರಸ್ಯದಿಂದ ಆಚರಣೆ ಮಾಡುತ್ತಿದ್ದೇವೆ. ಇದರಿಂದಲೇ ತಾಲೂಕಿನಲ್ಲಿ ಶಾಂತಿ ನೆಮ್ಮದಿ ಲಭಿಸಿ ನೆಮ್ಮದಿಯ ಜೀವನ ಮಾಡಲು ಸಾಧ್ಯವಾಗಿದೆ.
ಅನೇಕ ದರ್ಶನಿಕರು ಧರ್ಮ ಗುರುಗಳು ಹೊಸಕೋಟೆ ನೆಲದಲ್ಲಿ ತಮ್ಮದೇ ಆದಚಾಪನ್ನು ಮೂಡಿಸಿದ್ದಾರೆ. ಅವರ ಸ್ಮರಣೆ ನಿರಂತರವಾಗಿ ಮಾಡುತ್ತಿದ್ದೇವೆ. ಎಂದರು.
ಈ ವೇಳೆ ಉದ್ಯಮಿ ಬಿವಿ ಬೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಹೆಚ್.ಎಂ.ಸುಬ್ಬರಾಜ್, ನಗರಸಭೆ ಸದಸ್ಯ ಗೌತಮ್, ವಕ್ಸ್ ಬೋರ್ಡ್ ಮಾಜಿ ಅಧ್ಯಕ್ಷ ನಿಸಾರ್‌ಅಹ್ಮದ್ ಮುಖಂಡರಾದ ಸೈಯದ್ ನವಾಜ್, ಅಜು, ಸಾಹಿಲ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….