ವೇದ ಜ್ಯೋತಿಷ್ಯದ ಆಧಾರದ ಮೇಲೆ ಸಿಂಹ ರಾಶಿಯ ಜಾತಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಫಲಿತಾಂಶಗಳು ಹೀಗಿದೆ.
ರಾಶಿ ಚಕ್ರದಲ್ಲಿ ಐದನೇ ಜ್ಯೋತಿಷ್ಯ ರಾಶಿಯಾಗಿದ್ದು, ಆಕಾಶ ರೇಖಾಂಶದ 120-150 ಡಿಗ್ರಿಗಳನ್ನು ವ್ಯಾಪಿಸಿದೆ.
ಸಿಂಹ ರಾಶಿ: ಅಲರ್ಜಿಗಳು ಕಾಡಿಸುತ್ತದೆ. ಚರ್ಮದ ಅಲರ್ಜಿ, ಸೈನಸ್ ಅಲರ್ಜಿ, ಕಣ್ಣು- ಕಿವಿ ಗಳ ಅಲರ್ಜಿ ಆಗಬಹುದು. ರಾಹು ದೃಷ್ಠಿ ಇರುವುದರಿಂದ ಈ ರೀತಿ ತೊಂದರೆಗಳು ಇವೆ. ಹೆಣ್ಣು ಮಕ್ಕಳಲ್ಲಿ ಋತುಸ್ರಾವದ ತೊಂದರೆ ಆಗಬಹುದು. ಸಿಂಹರಾಶಿಯ ವಿವಾಹಿತರು ಮಕ್ಕಳಿಗಾಗಿ ಈಗ ಪ್ರಯತ್ನ ಮಾಡದಿರುವುದು ಲೇಸು.
ಗರ್ಭಪಾತ ಆಗುವಂಥ ಸಂಭವ ಇರುತ್ತದೆ. ಗರ್ಭ ಧರಿಸಿದರೂ ವೈದ್ಯರ ನಿಗಾದಲ್ಲಿ ಇರಬೇಕು. ಹಣದ ಹರಿವು ಉತ್ತಮವಾಗಿದೆ. ಮನೆಯಲ್ಲಿಯೇ ಶತ್ರುಗಳು ಇರುವುದರಿಂದ ನಿಮ್ಮ ಕುಟುಂಬದಲ್ಲಿ ಮನಸ್ತಾಪ ಆಂತರಿಕ ಸಮಸ್ಯೆಗಳು ಆಗಬಹುದು. ಇವೆಲ್ಲವನ್ನೂ ನೀವು ಬುದ್ಧಿವಂತಿಕೆ ಯಿಂದ ನಿಭಾಯಿಸಬೇಕು.
ಮನಸ್ಸಿಗೆ ಕೊಂಚ ಕಳವಳ ಬೇಸರ ಆಗುವಂತಹ ಸಮಯ. ಅಂಥ ಘಟನೆಗಳು ನಡೆಯು ತ್ತದೆ, ಧೈರ್ಯಗೆಡದಿರಿ. ಭಾಗ್ಯ ಸ್ಥಾನದ ಲ್ಲಿ ಗುರು ಇರುವುದರಿಂದ ಸಮಸ್ಯೆಗಳಿ ಗೆ ತಂತಾನೆ ಪರಿಹಾರವೂ ದೊರೆಯುತ್ತ ದೆ. ವೃತ್ತಿಯಲ್ಲಿ ಯಶಸ್ಸು ಇದೆ. ಧರ್ಮ ಕಾರ್ಯಗಳಲ್ಲಿ ಕೈಜೋಡಿಸುತ್ತೀರಿ. ಶುಕ್ರ ಅನುಗ್ರಹ ಇರುವುದರಿಂದ ಸಹೋದರಿ ಯರ ಬೆಂಬಲ ಸಹಾಯ ಸಿಗುತ್ತದೆ. ಶನಿ ನಿಮ್ಮ ರಾಶಿಯನ್ನು ನೇರವಾಗಿ ನೋಡುವುದರಿಂದ ನಿಮಗೆ ಹಠ ಮತ್ತು ಕೋಪ ಹೆಚ್ಚಾಗುತ್ತದೆ. ಇದರಿಂದ ಸಂಬಂಧಗಳು ಕೆಡಬಹುದು. ಜಾಗ್ರತೆ ವಹಿಸಿ.
ಸಿಂಹ ರಾಶಿ: ಮಖಾ (4), ಪೂರ್ವ ಫಲ್ಘುಣಿ (ಪುಬ್ಬ) (4), ಉತ್ತರ ಫಲ್ಘುಣಿ (1ನೇ ಪಾದ) ಅಡಿಯಲ್ಲಿ ಜನಿಸಿದವರು ಸಿಂಹ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿಯ ಅಧಿಪತಿ ಸೂರ್ಯ.
ಸಿಂಹ ರಾಶಿಗೆ ಸೂಚಿಸಲಾದ ಅಕ್ಷರಗಳು: ಮ, ಮಿ, ಮು, ಮೆ, ಮೋ, ಟ, ಟಿ, ಟು, ಟೆ
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….