ಹರಿತಲೇಖನಿ ದಿನಕ್ಕೊಂದು ಕಥೆ: ಕರ್ಣನಿಗಾದ ಅನ್ಯಾಯ

ಧರ್ಮಕ್ಕೆ ಧರ್ಮ ನಂದನ. ಬಲಕ್ಕೆ ಭೀಮ. ಮತ್ತು ಶೌರ್ಯಕ್ಕೆ ಅರ್ಜುನ . ಆದರೆ ಉಳಿದಿಬ್ಬರು ನಕುಲ ಸಹದೇವ !! ಅವರೇನು ಮಾಡಿದರು? ಬರೆ ಕುದುರೆ ಸಾಕಿದ್ದು ಭವಿಷ್ಯ ತಿಳಿದಿದ್ದು ಇಷ್ಟೇನಾ? ಅವರ ಶಕ್ತಿ ಸಾಮರ್ಥ್ಯ ? ಖಂಡಿತಾ ಇಲ್ಲ ಪಂಚಪಾಂಡವರ ಪೈಕಿ ಈ ಇಬ್ಬರಿಗೂ ಕೂಡ ವಿಶೇಷ ದಿವ್ಯ ಶಕ್ತಿಗಳಿದ್ದವು.

ನಕುಲ ಸಹದೇವ ಪಾಂಡವರಲ್ಲಿ ಕಿರಿಯ ಸಹೋದರರು. ಪಾಂಡುವಿನ ಎರಡನೇ ಪತ್ನಿ ಮಾದ್ರ ರಾಜ್ಯದ ಮಾದ್ರಿಯ ಮಕ್ಕಳು. ಮಾದ್ರಿಗೆ ವರ ಪುತ್ರರೇ ಆದರೂ ವರ ಕರುಣಿಸಿದ್ದು ಕುಂತಿಯೇ. ನಮಗೆಲ್ಲಾ ಗೊತ್ತಿರುವಂತೆ ಜಿಂಕೆಯ ರೂಪದಲ್ಲಿ ಏಕಾಂತದಲ್ಲಿದ್ದ ಋಷಿ ಕಿಂದಮ ದಂಪತಿ ಯ ಹತ್ಯಯ ಪರಿಣಾಮವಾಗಿ ಪಾಂಡು ಶಯನ ಸುಖವನ್ನೇ ಕಳೆದುಕೊಂಡು ಬಿಡುತ್ತಾನೆ. 

ಅಪ್ಪಿತಪ್ಪಿಯೂ ಹೆಂಡತಿ ಯರನ್ನು ಸೇರಿದರೆ ಸಾಯುವಂತೆ ಶಪಿಸಿ ಬಿಟ್ಟಿದ್ದರು ಮುನಿ ಕಿಂದಮರು. ಇದೇ ವೈರಾಗ್ಯದಲ್ಲೇ ಹಸ್ತಿನಾಪುರದ ಸಾಮ್ರಾಟ ಸಿಂಹಾಸನವನ್ನು ತೊರೆದು ಅರಣ್ಯವಾಸಿ ಗಳಾಗಿ ಸತ್ತ್ಸಂಗಿ ಗಳಂತೆ ಜೀವನ ನಡೆಸುತ್ತಿದ್ದರು ಮಹಾರಾಜ ಪಾಂಡು, ಮಹಾರಾಣಿ ಕುಂತಿ ಮತ್ತು ರಾಣಿ ಮಾದ್ರಿ.

ಕ್ಷೀರಾದಿ ಭಕ್ಷ್ಯ ಭೋಜ್ಯಗಳ ಜಾಗದಲ್ಲಿ ಸಾದ್ವೀಕ ಆಹಾರ, ಮೋಹೋನ್ಮಾದ ಅಲಂಕಾರದ ಜಾಗದಲ್ಲಿ ನಾರು ಮಡಿ, ಹೊತ್ತು ಕಳೆಯಲು ಜಪತಪ, ಹೀಗೆ ಸಾಧಾರಣವಾಗಿ ಸಾಗಿತ್ತು ಪಾಂಡುವಿನ ದಿನಚರಿ.

ಆ ಕಾಲಕ್ಕೆ ರಾಜರೀಗೇನು ಎಷ್ಟು ಮದುವೆ ಯಾದರೂ ಕೇಳುತ್ತಿರಲಿಲ್ಲ. ಸೋತ ರಾಜರುಗಳು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಾಣಿಕೆ ರೂಪದಲ್ಲಿ ಕೊಡುತ್ತಿದ್ದರು. ಇದೇ ರೀತಿಯಲ್ಲಿ ಹಸ್ತಿನಾಪುರವನ್ನು ಪ್ರವೇಶ ಮಾಡಿದ್ದಳು ಮಾದ್ರಿ. 

ಬಹು ಸುಂದರ ಹೆಣ್ಣು ಮಾದ್ರಿ. ಕುಂತಿಗಿಂತಲೂ ತುಸು ಹೆಚ್ಚೇ ಸೌಂದರ್ಯ ವತಿ ಆಗಿದ್ದ ಮಾದ್ರಿ ಪಾಂಡುವಿಗೆ ಮೆಚ್ಚಿನವಳಾಗಿದ್ದಳು. ಮಾದ್ರಿ ಮೇಲೆ ತುಂಬಾ ಮೋಹ ವಿತ್ತು ಪಾಂಡುವಿಗೆ.

ಮುಂದೆ ಇದೇ ಮೋಹ ಪಾಂಡುವಿನ ಪುರುಷಾರ್ಥಕ್ಕೆ ಕೊಳ್ಳಿ ಇಟ್ಟಿದ್ದು. ಮಾದ್ರಿಯ ಆಸೆಯಿಂದಲೇ ಜಿಂಕೆ ರೂಪದಲ್ಲಿ ಇದ್ದ ಮುನಿ ದಂಪತಿಕೊಂದು ಶಾಪಗ್ರಸ್ತನಾಗಿದ್ದು. ಈ ಶಾಪದ ಫಲವಾಗಿ ಇಬ್ಬರೂ ಪತ್ನಿಯರಿದ್ದರೂ ಮುಟ್ಟುವಂತೆ ಇರ್ಲಿಲ್ಲ ಮಹಾರಾಜಾ ಪಾಂಡುವಿಗೆ.

ಮಾನವ ಸಹಜವಾದ ಸಂತಾನದ ಆಸೆಯಾಗಿತ್ತು. ತನ್ನ ವಂಶ ಬೆಳೆಸುವ ಆಸೆ ದಿನೇ ದಿನೇ ಉತ್ಕಟವಾಗುತ್ತಾ ಹೋಯ್ತು. ಆದರೆ ತಾನೀಗ ಶಾಪಗ್ರಸ್ತ ಮಡದಿಯರನ್ನು ಸೇರುವಂತಿಲ್ಲ. ಸೇರಿದರೆ ಅಂದೆ ಮರಣ ವಿಧಿಯನ್ನು ಹಳಿದುಕೊಂಡು ಸುಮ್ಮನಾಗುತಿದ್ದ ಪಾಂಡು.

ಪತಿಯ ಈ ಸಂಕಟ ಅರಿತ ಕುಂತಿ ನನಗೆ ಮಹಾ ತಪಸ್ವಿ ದೂರ್ವಾಸರು ನೀಡಿರುವ ವರದ ಬಗ್ಗೆ ತಿಳಿಸುತ್ತಾಳೆ.‌ ವಿಶೇಷ ಮಂತ್ರೋಚ್ಚಾರದ ವರ ನೀಡಿದ್ದಾರೆ. ನಾನು ಆ ಮಂತ್ರ ಹೇಳಿ ಯಾವ ದೇವರನ್ನು ಕರೆಯುತ್ತೀನೊ ಆ ದೇವರು ಪ್ರತ್ಯಕ್ಷ ವಾಗಿ ವರ ಕೊಡುತ್ತಾನೆ ಎಂದಳು.

ಇದರಿಂದ ಪಾಂಡುವಿಗೆ ಮರು ಜನ್ಮ ಬಂದಂತಾಯಿತು. ಯಾರಿಗೆ ಆದರೂ ತಮ್ಮ ಸಂತಾನ ಎಂದರೆ ಮರು ಜನ್ಮವೇ ಅಲ್ಲವೇ?

ಅದರಂತೆ ಕುಂತಿ ಯಮಧರ್ಮ ರಾಯನಿಂದ, ಯುಧೀಷ್ಟರ ನನ್ನು ವಾಯುದೇವನಿಂದ, ಭೀಮನನ್ನು ಮತ್ತು ಇಂದ್ರ ದೇವನಿಂದ ಅರ್ಜುನನನ್ನು ಪಡೆದಳು. 

ವರ ಪುತ್ರರನ್ನು ಕಂಡು ಮಾದ್ರಿ ಮರುಗಿದಳು. ಅಕ್ಕ ನೀಮಗೇನು ಮಕ್ಕಳಾದವು ಇನ್ನು ಮಹಾರಾಜರು ನಿಮ್ಮನ್ನೇ ಜಾಸ್ತಿ ಪ್ರೀತಿಸುತ್ತಾರೆ, ನನ್ನ ಕರ್ಮ ನೋಡಿ ನಾನೊಬ್ಬಳು ಬಂಜೆ ಎಂದು ರೋದಿಸಲಾರಂಬಿಸಿದಳು. ಮಾದ್ರಿ ಎಷ್ಟೇ ಕಿರಿ ಕಿರಿ ಮಾಡಿದ್ದರೂ… ಅದನ್ನೇಲ್ಲಾ ಮರೆತು ಕುಂತಿ ಮಾದ್ರಿಗು ಸಂತಾನದ ಫಲ ಕೊಟ್ಟಳು .ಇದರ ಫಲವಾಗಿಯೇ ಅಶ್ವಿನಿ ದೇವತೆಗಳ ವರ ಪ್ರಸಾದ ವಾಗಿ ನಕುಲ ಸಹದೇವರು ಜನಿಸಿದರು.

ಮುಂದೆ ಮಕ್ಕಳಾದ ಮೇಲೂ ಶಾಪದ ಅರಿವಿದ್ದರೂ ಮಾದ್ರಿ ಕಾಮದ ಬಲೆಯಲ್ಲಿ ವಿಲ ವಿಲ ಒದ್ದಾಡುವ ಮೂಲಕ ಪಾಂಡುವಿನ ಉಸಿರನ್ನೇ ನಿಲ್ಲಿಸಿದಳು. ನಂತರ ಪಶ್ಚಾತ್ತಾಪದಿಂದ ತಾನೂ ದೇಹ ತ್ಯಾಗ ಮಾಡಿದಳು. ಇದರಿಂದಾಗಿ ಉಳಿದ ಮೂವರು ಪಾಂಡವರೊಂದಗೆ ನಕುಲ ಸಹದೇವರು ಕುಂತಿಯ ಮಕ್ಕಳಾಗಿಯೆ ಬೇಳೆದರು. 

ಇವರಲ್ಲಿ ನಕುಲ ಆ ಕಾಲಕ್ಕೆ ಬಹಳ ಸುಂದರನಾಗಿದ್ದ. ಆ ಕಾಲದ ಕಾಮದೇವ ಎಂದೇ ಕರೆಯುತ್ತಿದ್ದರು. ಕುದುರೆಗಳನ್ನು ಪಳಗಿಸುವಲ್ಲಿ ನಕುಲ ಮಹಾನ್ ಕುಶಲಕರ್ಮಿ.. ಎಂತಹದ್ದೇ ಭೀಕರ ಮಳೆಯಲ್ಲಿಯೂ ಕುದುರೆ ಸವಾರಿ ಮಾಡಬಲ್ಲ ಏಕೈಕ ವೀರನಾಗಿದ್ದ. ಕುದುರೆಗಳ ಯಾವುದೇ ರೋಗವನ್ನು ಕ್ಷಣ ಮಾತ್ರದಲ್ಲಿ ವಾಸಿಮಾಡುತ್ತಿದ್ದ ನಕುಲ.

ಕುರುಕ್ಷೇತ್ರ ಯುದ್ದದಲ್ಲಿ ತಮ್ಮ ಸೈನ್ಯದ ಲಕ್ಷಾಂತರ ಕುದುರೆಗಳ ಔಷಧೋಪಚಾರ ವನ್ನು ಮಾಂತ್ರಿಕನಂತೆ ಮಾಡಿದ್ದ ನಕುಲ. ಅಜ್ಞಾತವಾಸ ದ ವೇಳೆ ಗ್ರಂಥಿಕ ಅನ್ನೊ ಹೆಸರಲ್ಲಿ ವಿರಾಟ ಸಾಮ್ರಾಟನಲ್ಲಿ ಕುದುರೆಗಳನ್ನು ನೋಡಿಕೊಂಡಿದ್ದ. ನಕುಲ ಒಬ್ಬ ಉತ್ತಮ ಸಾರಥಿ ಕೂಡ ಆಗಿದ್ದ. 

ಈತನ ಶಕ್ತಿಯನ್ನು ಬರೆ ಕುದುರೆಗಳಿಗೆ ಸೀಮಿತವಾಗಿರಿಸಿದರೆ ತಪ್ಪಾಗುತ್ತದೆ. ನಕುಲ ಒಬ್ಬ ಪರಾಕ್ರಮಿಯು ಹೌದು. ರಾಜಾಸೂಯಗ ಯಾಗದ ವೇಳೆ ಪಶ್ಚಿಮದ ರಾಜ್ಯಗಳನ್ನು ಗೆದ್ದು ಅಣ್ಣ ಯುಧಿಷ್ಠಿರನಿಗೆ ಸಮರ್ಪಿಸಿದ್ದ ನಕುಲ.

ಕುರುಕ್ಷೇತ್ರ ಯುದ್ದದ ಮೊದಲ ದಿನವೇ ದುಶ್ಯಾಸನ ನನ್ನು ಪರಾಭವ ಗೊಳಿಸಿದ್ದರು ಕೊಲ್ಲದೆ ಅಣ್ಣ ಭೀಮನ ಪ್ರತಿಜ್ಞೆಗಾಗಿ ಬಿಟ್ಟಿದ್ದ. ಯುದ್ದದ ಹನ್ನೊಂದನೇ ದಿನ ತನ್ನ ಸೋದರ ಮಾವ ಶಲ್ಯನನ್ನು ಸೋಲಿಸಿದ್ದ. ಆದರೆ ಶಲ್ಯ ತನ್ನ ವಧೆಯನ್ನು ಯುಧೀಷ್ಟರ ಮಾಡಬೇಕೆಂದು ಕೇಳಿದ್ದರಿಂದ,

ಶಲ್ಯ ಧರ್ಮನಂದನ ನಿಂದ ಹತನಾದ. ಯುದ್ದದ ಹದಿನಾಲ್ಕನೇ ದಿನ ಶಕುನಿ ಮತ್ತು ಅವನ ಮಗ ಉಲೂಕನನ್ನು ಸೋಲಿಸಿದ್ದ.

ಹದಿನಾರು ಮತ್ತು ಹದಿನೇಳನೇ ದಿನ ಕರ್ಣನ ಮುಂದೆ ಖಡ್ಗ ಜಳಪಿಸಿದ್ದ. ಆದರೆ, ಕರ್ಣ ಕುಂತಿಗೆ ನೀಡಿದ ವಚನದಿಂದ ಬದುಕುಳಿದ ನಕುಲ. ಮುಂದೆ ಕರ್ಣನ ಮೂವರು ಮಕ್ಕಳಾದ ಸುಶೇನಾ, ಟಚಿತ್ರಸೇನಾ, ಮತ್ತು ಸತ್ಯಸೇನರನ್ನು ಹತ್ಯೆ ಮಾಡಿದ.

ದ್ರೌಪದಿಯ ದೃಷ್ಟಿಯಲ್ಲಿ ನಕುಲನೆಂದರೆ ಪ್ರಪಂಚದ ತುಂಬಾ ಸುಂದರ ವ್ಯಕ್ತಿ.  ಶಾಸ್ತ್ರಗಳನ್ನು ಚೆನ್ನಾಗಿ ತಿಳಿದು ಕೊಂಡಿದ್ದ ಜ್ಞಾನಿ.‌ ಸೋದರರಿಗೆ ತನ್ನನ್ನು ತಾನು ಸಮರ್ಪಿಸಿ ಕೊಂಡಿದ್ದ ನಿಷ್ಟ. ಪ್ರೀತಿಯ ಬುಗ್ಗೆ, ಆರೋಗ್ಯ ಗೌರವ, ಬುದ್ದಿವಂತಿಕೆ. ಕಠಿಣ ಪರಿಶ್ರಮ ದಂತಹ ಸದ್ಗುಣಗಳನ್ನು ಹೊಂದಿರುವ ಗುಣ ಸಂಪನ್ನನಾಗಿದ್ದ. ಈ ಕಾರಣಗಳಿಂದಲೇ ಹಿಂದೆ ನಿನಗೆ ಯಾವ ಸಹೋದರ ನನ್ನು ಬದುಕಿಸ ಬೇಕು ಎಂದು ಯಕ್ಷ ಯುಧಿಷ್ಠಿರನನ್ನು ಕೇಳಿದಾಗ ನಕುಲ ಎಂದಿದ್ದ.

ಇನ್ನು ಸಹದೇವ ಮಾದ್ರಿಯ ಎರಡನೇ ಮಗ. ಪಾಂಡು ಕುಂತಿಯ ಐದನೇ ಮಗ. ಸಹದೇವ ಎಂದರೆ ದೇವರಜೊತೆ  ವಾಸಿಸುವ ವ ಎಂದರ್ಥ. ಇವನು ಹೆಸರಿಗೆ ತಕ್ಕಂತೆ ದೈವಜ್ಞ ಆಗಿದ್ದ. ಸಹದೇವ ತ್ರಿಕಾಲದರ್ಶಿ ಆಗಿದ್ದ. ಅರ್ಥಾತ್ ಭೂತ, ವರ್ತಮಾನ, ಭವಿಷ್ಯ, ತಿಳಿಯ ಬಲ್ಲವನಾಗಿದ್ದ. ಮಹಾನ್ ಜ್ಞಾನಿಯಾಗಿದ್ದ. ಭವಿಷ್ಯದ ಯಾವುದೇ ವಿಚಾರಗಳು ಅವನಿಗೆ ಗೊತ್ತಾಗುತ್ತಿತ್ತು. 

ಹಾಗಿದ್ದ ಮೇಲೆ ರಕ್ತದ ನದಿಯೆ ಹರಿದ ಕುರುಕ್ಷೇತ್ರ ಯುದ್ದವನ್ನು ಯಾಕೆ ತಡೆಯಲಿಲ್ಲ ಎನ್ನುವ ಪ್ರಶ್ನೆ ಕಾಡುತ್ತದೆ. ಇದಕ್ಕು ಕಾರಣವಿದೆ ಸಹದೇವನಿಗೆ ಈ ವರದ ಹಾಗೆ ಶಾಪವು ಇತ್ತು. ಭವಿಷ್ಯತ್ತಿನ ದರ್ಶನವಾದರು ಸಹದೇವ ಅದನ್ನು ಯಾರಲ್ಲಿಯೂ ಹೇಳುವಂತಿರಲಿಲ್ಲ. 

ಒಂದೊಮ್ಮೆ ಹೇಳಿದರೆ ಆ ಕ್ಷಣದಲ್ಲಿಯೇ ಸಾಯುತ್ತಿದ್ದ. ಈ ಕಾರಣದಿಂದಾಗಿ ಭವಿಷ್ಯತ್ತಿನ ಆಪತ್ತುಗಳ ಬಗ್ಗೆ ಅರಿವಾದರೂ ಸಹ ಪಾಂಡವರಿಗೆ ಇದರ ಬಗ್ಗೆ ಹೇಳುತ್ತಿರಲಿಲ್ಲ ಸಹದೇವ.

ಅರಗಿನ ಮನೆಗೆ ಬೆಂಕಿ ಬೀಳುವುದು ದ್ರೌಪದಿಯ ವಸ್ತ್ರಾಪಹರಣ, ಕುರುಕ್ಷೇತ್ರ ಯುದ್ದದ ಮಹಾ ವಿನಾಶಗಳ ಕುರಿತು ಮುಂಚೆಯೇ ದುಶ್ಯಕುನಗಳು ದೊರೆತಿದ್ದರು. ಏನೂ ಹೇಳಲಾಗಲಿಲ್ಲ ಸಹದೇವನಿಗೆ. ಈತ ಎಂತಹಾ ಜ್ಯೋತಿರ್ಜ್ಞಾನಿ ಆಗಿದ್ದನೆಂದರೆ, ಖುದ್ದು ದುರ್ಯೋಧನ ನೆ ಸಹದೇವನ ಬಳಿ ಬಂದು ಕುರುಕ್ಷೇತ್ರ ಯುದ್ಧಕ್ಕೆ ಮುಹೂರ್ತ ಕೇಳಿದ್ದ.

ಯುದ್ದದ ತೀವ್ರತೆಯ ಅರಿವಿದ್ದರೂ ಕೇಳುತ್ತಾ ಇರುವುದು ಶತ್ರು ಎಂದು ಗೊತ್ತಿದ್ದರೂ ಬೇಡ ವೆಂದು ಹೇಳಬೇಕೆನಿಸಿದರು ಏನನ್ನು ಹೇಳಲಾಗದೆ ಮುಹೂರ್ತ ಕೊಟ್ಟು ಕಳಿಸಿದ್ದ.

ಸಹದೇವನಿಗೆ ಈ ಜ್ಯೋತಿಷ್ಯ ದೊರೆತಿದ್ದೆ ವಿಶೇಷ. ತಂದೆ ಪಾಂಡು ಸಾಯುವ ಮುನ್ನ ತನ್ನ ಕೊನೆ ಆಸೆ ಯನ್ನು ತಿಳಿಸಿದ್ದ. ಸ್ವತಹ ಶಾಸ್ತ್ರ ಪಂಡಿತ ಜ್ಞಾನಿ ಆಗಿದ್ದ ಪಾಂಡು ,ತನ್ನ ಮಕ್ಕಳು ತನ್ನ ಮೆದುಳನ್ನು ತಿನ್ನ ಬೇಕೆಂದು ಬಯಸಿದ್ದ . ನಾಲ್ವರು ಸಹೋದರರು ಇದನ್ನು ಮಾಡಲಾಗಲಿಲ್ಲ. ಸಹದೇವ ತಂದೆಯ ಮೆದುಳನ್ನು ತಿಂದು ಮುಗಿಸಿದ್ದ.

ತಿಂದ ಮೊದಲಂಶದಲ್ಲಿ ಭೂತಕಾಲವು ಎರಡನೇ ಅಂಶದಲ್ಲಿ ವರ್ತಮಾನವು , ಹಾಗೂ ಮೂರನೇ ಅಂಶದಲ್ಲಿ ಭವಿಷ್ಯತ್ ಕಾಲವು ಅವನಿಗೆ ಗೋಚರವಾಯಿತು. ಇದರೊಂದಿಗೆ ಸಹದೇವ ತ್ರಿಕಾಲ ಜ್ಞಾನಿಯಾದ. ಆದರೆ ತನಗಿದ್ದ ಶಾಪದ ಪರಿಣಾಮವಾಗಿ ಯಾರೊಂದಿಗೂ ಏನನ್ನು ಹೇಳಲಾರದಂತಾದ ಸಹದೆವ. ಈತ ನಕುಲನಂತೆ ಮಹಾನ್ ವೈದ್ಯ ಪಂಡಿತ ಇಂದ್ರ ದೇವನಿಗೆ ಕವಚ ಕುಂಡಲ ಧಾನ ಕೊಟ್ಟು  ಅಸ್ವಸ್ಥ ನಾಗಿದ್ದ ಕರ್ಣನನ್ನು ಕೂಡಾ  ಉಪಚರಿಸಿದ್ದರು ಇಬ್ಬರು ಸಹೋದರರು.

ಅಜ್ಞಾತವಾಸದ ವೇಳೆ ವಿರಾಟ ರಾಜನ ಗೋಶಾಲೆಯಲ್ಲಿ ಗೋಪಾಲಕನಾಗಿ ಕೆಲಸ ಮಾಡಿದ್ದ ಸಹದೇವ. ಇದರಂತೆ ಸಹದೇವ ಖಡ್ಗ ಜಳಪಿಸುವುದರಲ್ಲೂ ನಿಪುಣ ನಾಗಿದ್ದ.ದ್ಯೂತ ಸಭೆಯಲ್ಲಿ ದ್ರೌಪದಿ ಗೆ ಅವಮಾನ ಆದಾಗ ಈ ಅನಾಚಾರಕ್ಕೆಲ್ಲ ಕಾರಣರಾದ ಮಾಮಾಶ್ರೀ ಶಕುನಿಯನ್ನು ಹತ್ಯೆ ಮಾಡುವೆನೆಂದು ಪ್ರತಿಜ್ಞೆ ಮಾಡಿದ್ದ. ಅದರಂತೆಯೆ ಯುದ್ದದಲ್ಲಿ ಶಕುನಿಯನ್ನು ಹತ್ಯೆ ಮಾಡಿದ್ದ.

ಮುಂದೆ ಯುಧೀಷ್ಟರನ ಆಡಳಿತ ದಲ್ಲಿ ನಕುಲ ಸೈನ್ಯದ ದಂಡನಾಯಕ ನಾದ ಮತ್ತು ಉತ್ತರ ಮಾದ್ರದ ರಾಜನಾದ. ನಕುಲ ನನ್ನು ದಕ್ಷಿಣ ಮಾದ್ರದ ರಾಜನನ್ನಾಗಿ ಮಾಡಿದ ಧರ್ಮರಾಯ ಯುಧೀಷ್ಟರ.

ಕೃಪೆ: ಅವನಿಕಾ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಮೋದಿ ಬೆಲೆ ಏರಿಕೆ ವಿರುದ್ಧ ರಾಜ್ಯ ಬಿಜೆಪಿ ಪ್ರತಿಭಟನೆ; ಸಂತೋಷ್ ಲಾಡ್ ತಿರುಗೇಟು

ಮೋದಿ ಬೆಲೆ ಏರಿಕೆ ವಿರುದ್ಧ ರಾಜ್ಯ ಬಿಜೆಪಿ ಪ್ರತಿಭಟನೆ; ಸಂತೋಷ್ ಲಾಡ್ ತಿರುಗೇಟು

ಧಾರವಾಡ: ರಾಜ್ಯ ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ರಾಜ್ಯ ಬಿಜೆಪಿ (BJP) ಇದೀಗ ಸರಣಿ ಹೋರಾಟಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಇಂದಿನಿಂದ ಮೈಸೂರಿನಲ್ಲಿ ‘ಜನಾಕ್ರೋಶ ಯಾತ್ರೆ’ಗೆ ಚಾಲನೆ

[ccc_my_favorite_select_button post_id="105043"]
ದೊಡ್ಡಬಳ್ಳಾಪುರಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ: ಎಸಿ, ತಹಶಿಲ್ದಾರ್‌ಗೆ ತರಾಟೆ| Video

ದೊಡ್ಡಬಳ್ಳಾಪುರಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ: ಎಸಿ, ತಹಶಿಲ್ದಾರ್‌ಗೆ ತರಾಟೆ| Video

ದೊಡ್ಡಬಳ್ಳಾಪುರ (Doddaballapura): ಉಪಲೋಕಾಯುಕ್ತ ಬಿ.ವೀರಪ್ಪ ಅವರು ಇಂದು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ರಾಗಿ ಖರೀದಿ ಕೇಂದ್ರದ ಬಳಿ ಇದ್ದ

[ccc_my_favorite_select_button post_id="105045"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
Doddaballapura: ದೇವಾಲಯದ ಬಳಿ ಇಸ್ಪೀಟ್ ಜೂಜಾಟ.. ಪೊಲೀಸರ ದಾಳಿ

Doddaballapura: ದೇವಾಲಯದ ಬಳಿ ಇಸ್ಪೀಟ್ ಜೂಜಾಟ.. ಪೊಲೀಸರ ದಾಳಿ

ದೊಡ್ಡಬಳ್ಳಾಪುರ (Doddaballapura): ದೇವಾಲಯದ ಮುಂಭಾಗ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿರುವ ದೊಡ್ಡಬೆಳವಂಗಲ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.

[ccc_my_favorite_select_button post_id="105020"]
ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. Video

[ccc_my_favorite_select_button post_id="104851"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!