ಹುಬ್ಬಳ್ಳಿ, (ಸೆ.04): ಪುಟಾಣಿ ಮಕ್ಕಳಿಗೆ ಮೊಬೈಲ್ ವ್ಯಾಮೋಹ ಮಿತಿಮೀರುತ್ತಿದೆ. ಮುದ್ದಾಗಿ ಬೆಳಸುವ ಕಾರಣ, ಊಟ ಮಾಡಿಸುವ ಕಾರಣ ಮಕ್ಕಳಿಗೆ ಮೊಬೈಲ್ ಗೀಳನ್ನು ಅಂಟಿಸುತ್ತಿರುವ ಪೋಷಕರು ಈ ವರದಿ ನೋಡಬೇಕಿದೆ.
ಕಾರಣ ಪೋಷಕರು ಮೊಬೈಲ್ ಬಳಕೆ ಮಾಡಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಮನನೊಂದು ಬಾಲಕನೋರ್ವ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಭೈರಿದೇವರ ಕೊಪ್ಪದಲ್ಲಿ ನಡೆದಿದೆ.
ಮೃತ ಬಾಲಕನನ್ನು 13 ವರ್ಷದ ಸಮೃದ್ಧ ಎಂದು ಗುರುತಿಸಲಾಗಿದೆ.
ಸರಿಯಾಗಿ ವಿದ್ಯಾಭ್ಯಾಸ ಮಾಡು. ಮೊಬೈಲ್ ಬಳಕೆ ಬಿಡು ಎಂದು ಪಾಲಕರು ಬುದ್ದಿ ಹೇಳಿದ್ದಾರೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಬಾಲಕ ನೇಣಿಗೆ ಶರಣಾಗಿದ್ದಾನೆ.
ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….