ರಾಜನೊಬ್ಬ ಯಾರು ಚೆನ್ನಾಗಿ ಬೆಕ್ಕು ಸಾಕುತ್ತಾರೆ ಅವರಿಗೆ ವಿಶೇಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರಂತೆ. ರಾಜನ ಮಾತು ಕೇಳಿ ಎಲ್ಲರೂ ಕೈಯಲ್ಲಿದ್ದ ಹಣವನ್ನು ಖರ್ಚು ಮಾಡಿ ಕುದುರೆಗಳ ರೀತಿಯಲ್ಲಿ ಬೆಕ್ಕು ಸಾಕಿದ್ದರಂತೆ. ಚೆನ್ನಾಗಿ ಸಾಕಿದ ಬೆಕ್ಕುಗಳನ್ನು ರಾಜನ ಮುಂದೆ ಪ್ರದರ್ಶನ ಏರ್ಪಡಿಸಲಾಗಿತ್ತು.
ತೆನಾಲಿ ರಾಮ ಮಾತ್ರ ಬಡಪಾಯಿ ಬೆಕ್ಕು ಕಂಕಳಲ್ಲಿ ಇಟ್ಟುಕೊಂಡು ಬಂದಿದ್ದನಂತೆ. ಎಲ್ಲರೂ ಬಹುಮಾನ ನಮಗೆ ಸಿಗಬಹುದು ಎಂದೇ ಕಾತರದಿಂದ ಕಾಯುತ್ತಿದ್ದರಂತೆ. ಆದರೆ, ರಾಜ ಎಲ್ಲಾ ಬೆಕ್ಕು ನೋಡಿ ಖುಷಿಯಾದರು. ನನ್ನ ಆಜ್ಞೆಯನ್ನು ಎಷ್ಟು ಚೆನ್ನಾಗಿ ಪ್ರಜೆಗಳು ಪಾಲಿಸಿದ್ದಾರೆ ಎಂದು ಖಷಿಯಾದರು. ಆದರೆ ತೆನಾಲಿ ರಾಮನ ಬೆಕ್ಕು ನೋಡಿ ಬೇಸರಗೊಂಡರು.
ಯಾಕೋ ಸಾಯುವ ತರ ಬೆಕ್ಕು ತಂದು ಪ್ರದರ್ಶನ ಮಾಡಿದ್ದೀಯ ಎಂದು ಕೇಳಿದರು. ಸ್ವಾಮಿ ನೀವು ಕೊಟ್ಟ ಬೆಕ್ಕು, ಹಾಲು ಕುಡಿಯುವುದಿಲ್ಲ. ಅದು ಹಾಲು ಕುಡಿಯುತ್ತಿದ್ದಲ್ಲಿ ಎಲ್ಲರಿಗಿಂತಲೂ ನಾನೇ ಚೆನ್ನಾಗಿ ಸಾಕುತ್ತಿದ್ದೆ. ದಯವಿಟ್ಟು ಹಾಲು ಕುಡಿಯದ ಬೆಕ್ಕು ಕೊಟ್ಟು ನನಗೆ ಅನ್ಯಾಯ ಮಾಡಿದ್ದೀರಿ.
ಬಹುಮಾನ ಆದ್ರೂ ಕೊಟ್ಟು ಸರಿ ಪಡಿಸಿ ಎಂದು ತೆನಾಲಿ ರಾಮ ಕೇಳಿಕೊಂಡಿದ್ದ. ನಾನು ಹೇಳುವುದು ಸುಳ್ಳು ಅಂತಿದ್ದರೆ, ಮಹಾ ಸ್ವಾಮಿಗಳೇ ನೀವೇ ಪರಿಶೀಲಿಸಿ ಎಂದು ತೆನಾಲಿ ರಾಮ ಕೇಳಿಕೊಂಡಿದ್ದ.
ರಾಜನ ಆಜ್ಞೆಯಂತೆ ತೆನಾಲಿ ರಾಮನ ಬೆಕ್ಕಿನ ಮುಂದೆ ಹಾಲು ಇಟ್ಟರೆ ಅದು ಕುಡಿಯಲಿಲ್ಲ. ಯಾಕೆಂದರೆ ಅದಕ್ಕೆ ತೆನಾಲಿರಾಮ ಯಾವಾಗಲು ಬಿಸಿ ಬಿಸಿ ಹಾಲು ಇಟ್ಟಿದ್ದನಂತೆ. ಮೂತಿ ಸುಟ್ಟುಕೊಂಡಿದ್ದ ಬೆಕ್ಕು ಹಾಲು ನೋಡಿದ ಕೂಡಲೇ ಓಡಿ ಹೋಗುತ್ತಿತ್ತು.
ವಿಧಿಯಿಲ್ಲದೇ ಬೆಕ್ಕು ಸಾಕದ ತೆನಾಲಿ ರಾಮನಿಗೆ ರಾಜ ಅನಿವಾರ್ಯವಾಗಿ ಬಹುಮಾನ ನೀಡಿದಂತೆ. ಪಾಪ, ಹಗಳಿರುಳು ಬೆಕ್ಕು ಸಾಕಿದವರು ಪೆಚ್ಚು ಮೊರೆ ಹಾಕಿಕೊಂಡು ವಾಪಸು ತೆರಳಿದರಂತೆ.
ಬಹುಮಾನ ಪಡೆಯಲು ತೆನಾಲಿ ರಾಮನ ಉಪಾಯ ಇದಾಗಿತ್ತು.
ಕೃಪೆ: ಸಾಮಾಜಿಕ ಜಾಲತಾಣ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….