ಬೆಂಗಳೂರು, (ಸೆ.03); ಜಿಂದಾಲ್ ಭೂಮಿ ಪರಭಾರೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ‘ಅವರಪ್ಪನ ಮನೆಯ ಆಸ್ತಿನಾ’ ಎಂಬ ಆಕ್ಷೇಪಾರ್ಹ ಪದ ಬಳಸಿದ್ದರು. ಆದರೆ ಈಗ ಕ್ಷಮೆ ಕೇಳಿದ್ದಾರೆ.
ಆ ರೀತಿ ಮಾತನಾಡಿದ್ದು ತಪ್ಪು ಎಂದಿರುವ ಬೆಲ್ಲದ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಕ್ಷಮೆಯನ್ನು ಯಾಚಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರೂ ಆಗಿರುವ ಬೆಲ್ಲದ್, 24-8- 2024ರಂದು ಬೆಂಗಳೂರಿನ ಪ್ಯಾಲೆನ್ ಗೌಂಡ್ನಲ್ಲಿ ಜಿಂದಾಲ್ ವಿಚಾರವಾಗಿ ಮಾತನಾಡಿದ್ದಾಗ, ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಆದರೆ ಈಗ ಮುಖ್ಯಮಂತ್ರಿ ವಿರುದ್ಧ ಆ ರೀತಿ ತಾವು ಪದ ಬಳಕೆ ಮಾಡಿದ್ದು, ತಮಗೆ ಶೋಭೆ ತನಗೆ ತರುವಂಥದ್ದಲ್ಲ. ಹೀಗಾಗಿ ಕ್ಷಮೆ ಇರಲಿ ಎಂದು ಬೆಲ್ಲದ್ ಸಿಎಂ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಿಂದಾಲ್ ಅವರಿಗೆ ಕಡಿಮೆ ದರದಲ್ಲಿ ಭೂಮಿ ಕುಡುವುದ್ದಕ್ಕೆ ಜಿಂದಾಲ್ ಏನು ಅವರಪ್ಪನ ಆಸ್ತಿನಾ ಎಂದು ಬೆಲ್ಲದ್ ಆಕ್ಷೇಪಾರ್ಹ ಪದ ಬಳಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….