ತಿರುವನಂತಪುರ, (ಸೆ.03); ದೇಶದಲ್ಲಿನ ಜಾತಿಗಳ ಬಗ್ಗೆ ದತ್ತಾಂಶ ಸಂಗ್ರಹಿಸಿ ಅದನ್ನು ಸಮುದಾಯದ ಕಲ್ಯಾಣ ಯೋಜನೆಗಳಿಗೆ ಬಳಸಿಕೊಳ್ಳುವುದಾದರೆ ಸ್ವಾಗತಾರ್ಹ. ಆದರೆ ರಾಜಕೀಯ ಕಾರಣಕ್ಕಾಗಿ ಯೇ ಜಾತಿಗಣತಿ ನಡೆಸು ವುದು ಸಮ್ಮತವಲ್ಲ ಎಂ ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ಎಸ್) ಸೋಮವಾರ ಹೇಳಿದೆ.
ಜಾತಿ ಎಂಬುದು ಭಾರತದಲ್ಲಿ ಬಲು ಸೂಕ್ಷ್ಮ ವಿಚಾರ. ಅದರ ಅಂಕಿ ಅಂಶ ಗಳನ್ನು ಒಳ್ಳೆಯ ಕಾರಣಗಳಿಗೆ ಬಳಸಬಹುದು. ಆದರೆ, ರಾಜಕೀಯ ದುರುದ್ದೇಶಕ್ಕಾಗಿ ಗಣತಿ ನಡೆಸುವುದು ಸರಿಯಲ್ಲ ಎಂದು ಆರ್‌ಎಸ್‌ಎಸ್ ಮುಖ್ಯ ವಕ್ತಾರ ಸುನೀಲ್ ಅಂಬೇಕರ್ ಹೇಳಿದ್ದಾರೆ.
ಕೇರಳದ ಪಾಲಕ್ಕಾಡ್ ನಲ್ಲಿ 3 ದಿನಗಳ ಅಖಲಿ ಭಾರತ ಸಮನ್ವಯ ಬೈಠಕ್‌ನಲ್ಲಿ ಮಾತನಾಡಿದ ಅವರು, ದೇಶದಲ್ಲೀಗ ಜಾತಿ ಗಣತಿ ಎಂಬುದು ಪ್ರಮುಖ ರಾಜಕೀಯ ವಿಚಾರವಾಗಿದೆ. ಪ್ರತಿಪಕ್ಷಗಳಿಂದ ಒತ್ತಾಯ, ಅಧಿಕ ಬೇಡಿಕೆ ಇರುವ ಜಾತಿ ಗಣತಿಯನ್ನು ಆರ್ ಎಎಸ್ ಬೆಂಬಲಿಸುತ್ತದೆ.
ಸಮಾಜ ಕಲ್ಯಾಣ ಯೋಜನೆಗಾಗಿ ಸಮುದಾಯದ ಮಕ್ಕಳು, ಮಹಿಳೆ ಯರು, ಪುರುಷರ ಅಂಕಿ ಅಂಶಗಳನ್ನು ಅರಿಯಲು ಜಾತಿ ಗಣತಿ ನಡೆಸಿದರೆ ಸಂಘದ ಬೆಂಬಲವಿದೆ. ಆದರೆ ರಾಜಕೀಯ ಸಲಕರಣೆಯಾಗಿ ಉಪ ಯೋಗ ಮಾಡುವುದಾದರೆ ಗಣತಿಯೇ ಬೇಡ. ಸಂಘ 2 ಅಂಶಗಳನ್ನು ಪ್ರತ್ಯೇಕವಾಗಿ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಈ ನಿಲುವಿನಿಂದಾಗಿ ಜಾತಿಗಣತಿ ಕುರಿತು ದನಿ ಎತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬೆಂಬಲ ದೊರೆತಂತಾಗಿದ್ದು, ಬಿಜೆಪಿಗೆ ಹಿನ್ನಡೆ ಎನ್ನಲಾಗುತ್ತಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….