ದಿನ ಭವಿಷ್ಯ: ಸೋಮವಾರ, ಸೆಪ್ಟೆಂಬರ್ 02, 2024, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ: ಈ ರಾಶಿಯವರ ಎಲ್ಲಾ ಕೆಲಸಗಳು ಯಶಸ್ವಿ ಯಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಉದ್ಯೋಗದ ಸಂದರ್ಭದಲ್ಲಿ ಕೆಲಸಗಳ ಮೇಲೆ ಗಮನ ಹೆಚ್ಚಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. (ಭಕ್ತಿಯಿಂದ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಷಭ ರಾಶಿ: ಕಚೇರಿ ಕೆಲಸವನ್ನು ಸಾಮರಸ್ಯದಿಂದ ಇತ್ಯರ್ಥಪಡಿಸಲು ಪ್ರಯತ್ನಿಸಿ. ಚಿನ್ನ,ಬೆಳ್ಳಿ ಕೆಲಸ ಮಾಡುವ ವ್ಯಾಪಾರಸ್ಥರಿಗೆ ಕೆಲಸ ಸಿಗಬಹುದು ಇಲ್ಲವೇ ಬೆಲೆ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಾಹನ ಚಾಲನೆ ಮಾಡುವಾಗ ಅಥವಾ ನಡೆಯುವಾಗ ನೀವು ಜಾಗರೂಕರಾಗಿರಬೇಕು. (ಭಕ್ತಿಯಿಂದ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ಈ ರಾಶಿಯ ಜನರು ಸದಾ ಸೇವಾ ಮನೋಭಾವನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಇತರರ ಸೇವೆಯಿಂದ ಆಧ್ಯಾತ್ಮಿಕ ಸಂತೋಷವನ್ನು ಪಡೆಯಲಾಗು ತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ನೀವು ದೊಡ್ಡ ಯಶಸ್ಸು ಗಳಿಸುವಿರಿ. (ಭಕ್ತಿಯಿಂದ ಶ್ರೀ ಶಕ್ತಿಗಣಪತಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ಈ ರಾಶಿಯ ಜನರು ಅನಗತ್ಯ ಕೋಪವನ್ನು ತಪ್ಪಿಸಬೇಕು. ಅನಗತ್ಯ ಕೋಪದಿಂದ ನಿಮ್ಮ ಆರೋಗ್ಯವು ಹದಗೆಡುತ್ತದೆ. ವ್ಯಾಪಾರಿಗಳಿಗೆ ಲಾಭದ ಪರಿಸ್ಥಿತಿ ಇರುತ್ತದೆ. ವಿದ್ಯಾರ್ಥಿಗಳು ಕಷ್ಟಕರವಾದ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಕು. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಸಿಂಹ ರಾಶಿ: ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಬಟ್ಟೆ ವ್ಯಾಪಾರಿಗಳು ಉತ್ತಮ ಲಾಭಗಳಿಸಬಹುದು. ಸಾಮಾಜಿಕ ವಲಯದಲ್ಲಿ ಗುರು ಅಥವಾ ಶಿಕ್ಷಕರ ಮಾರ್ಗದರ್ಶನ ಸಿಗಲಿದೆ. (ಭಕ್ತಿಯಿಂದ ಶ್ರೀ ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು)

ಕನ್ಯಾ ರಾಶಿ: ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವವರು ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕು. ಬದಲಾಗುತ್ತಿ ರುವ ಕಾಲಕ್ಕೆ ತಕ್ಕಂತೆ ಮುಂದುವರಿಯಿ ರಿ. ಜಾಗತಿಕ ಸಾಂಕ್ರಾಮಿಕ ರೋಗವು ಮತ್ತೆ ಹೆಚ್ಚಾಗಲಾರಂಭಿಸಿದೆ, ಅದರ ಬಗ್ಗೆ ಎಚ್ಚರದಿಂದಿರಿ ಮತ್ತು ಸಂಪೂರ್ಣ ರಕ್ಷಣೆ ತೆಗೆದುಕೊಳ್ಳಿ. (ಭಕ್ತಿಯಿಂದ ಶ್ರೀ ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ: ಈ ರಾಶಿಯ ಜನರ ಕೆಲಸದ ಸ್ಥಳಾಂತರ ಸಾಧ್ಯತೆಗಳಿವೆ. ವ್ಯಾಪಾರ ಮತ್ತು ಹಣದ ವ್ಯವಹಾರ ವನ್ನು ಬಹಳ ಎಚ್ಚರಿಕೆಯಿಂದ ಮಾಡಿ. ನಿಮ್ಮ ಕುಟುಂಬದಲ್ಲಿ ಕೆಲವು ದುಃಖದ ಸುದ್ದಿಗಳನ್ನು ಸಹ ಕಾಣಬಹುದು. (ಭಕ್ತಿಯಿಂದ ಶ್ರೀ ಗಾಯತ್ರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಸರಕಾರಿ ಉದ್ಯೋಗಗಳಲ್ಲಿ ಸಫ‌ಲತೆ. ಗುರು ಹಿರಿಯರಿಂದ ಪ್ರೋತ್ಸಾಹ ಆಶೀರ್ವಾದ. ಉನ್ನತ ಅಧಿಕಾರಿ ಯೊಂದಿಗೆ ಒಳ್ಳೆಯ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದೀರಿ. ನಿಮ್ಮ ಸಲಹೆಯನ್ನು ಅಧಿಕಾರಿ ಗಳು ಅಳವಡಿಸಿಕೊಳ್ಳುತ್ತಾರೆ. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಧನಸ್ಸು ರಾಶಿ: ಸೌಮ್ಯತೆಯನ್ನು ತರಲು ಪ್ರಯತ್ನಿಸಿ. ಈ ದಿನ ನಿಮ್ಮ ಅಧಿಕೃತ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿ ಸಲು ಸಾಧ್ಯವಾಗುತ್ತದೆ. ಕುಟುಂಬ ವಿಷಯಗಳಲ್ಲಿ ಪ್ರೀತಿಪಾತ್ರರ ಸಲಹೆಯ ಅಗತ್ಯವಿರುತ್ತದೆ. (ಭಕ್ತಿಯಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ: ನೀವು ನಿಮ್ಮ ಗುರಿಯತ್ತ ಗಮನ ಹರಿಸಬೇಕು. ಮನೆಯ ದೊಡ್ಡ ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೆ ಬೀಳಬಹುದು. ಇದಕ್ಕಾಗಿ ನೀವು ಸಿದ್ಧರಾಗಿರಬೇಕು. (ಭಕ್ತಿಯಿಂದ ಶ್ರೀ ಸವಿತೃ ಸೂರ್ಯನಾರಾಯಣ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ: ಈ ರಾಶಿಯ ಜನರು ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ರಾಜಕೀಯದಲ್ಲಿ ಆಸಕ್ತಿ ಹೊಂದಿರುವವರಿಗೆ ಈಗ ಅವಕಾಶಗಳು ಸಿಗುವ ಸಾಧ್ಯತೆ ಇದೆ, ಅವರು ಪ್ರಯತ್ನಿಸಬೇಕು. ನೀವು ಅಧೀನ ಅಧಿಕಾರಿಗಳ ಬಗ್ಗೆ ಉತ್ತಮ ನಡವಳಿಕೆಯನ್ನು ಹೊಂದಿರಬೇಕು. ನೀವು ಆರೋಗ್ಯದ ಬಗ್ಗೆ ಜಾಗೃತ ರಾಗಿರಬೇಕು. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಮೀನ ರಾಶಿ: ಇತರರಿಗೆ ಸಲಹೆ ನೀಡ ಬೇಕಾದರೆ ಬುದ್ಧಿವಂತಿಕೆ ಯಿಂದ ಮಾಡ ಬೇಕು. ಹೋಟೆಲ್- ರೆಸ್ಟೋರೆಂಟ್ ವ್ಯಾಪಾರಿಗಳು ಉತ್ತಮ ಲಾಭಗಳಿಸ ಬಹುದು.ಯಾವುದಕ್ಕೂ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. (ಭಕ್ತಿಯಿಂದ ಸಾಲಿಗ್ರಾಮ ಸ್ವರೂಪ ಶ್ರೀ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ಅಮಾವಾಸ್ಯೆ.

ನಕ್ಷತ್ರ: ಮಖಾ ನಕ್ಷತ್ರ.

ರಾಹುಕಾಲ: 07:30AM ರಿಂದ 09:00AM 

ಗುಳಿಕಕಾಲ: 01:30PM ರಿಂದ 03:00PM

ಯಮಗಂಡಕಾಲ: 10:30AM ರಿಂದ 12:00PM

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಚನ್ನಪಟ್ಟಣ ಟಿಕೆಟ್ ಮಹತ್ವದ ಬೆಳವಣಿಗೆ ನಡೆಯಲಿದೆ: ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣ ಟಿಕೆಟ್ ಮಹತ್ವದ ಬೆಳವಣಿಗೆ ನಡೆಯಲಿದೆ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಉಪಚುನಾವಣೆಗೆ ಈಗಾಗಲೇ ಶಿಗ್ಗಾಂವಿ ಮತ್ತು ಸಂಡೂರು ಟಿಕೆಟ್ ಘೋಷಣೆ ಆಗಿದೆ..ಆದರೆ ಚನ್ನಪಟ್ಟಣ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ..ಕೊನೆ ಹಂತದಲ್ಲಿ ಏನ್ ಆಗುತ್ತೆ ಅನ್ನೋ ಕುತೂಹಲ ಎಲ್ಲಿರಿಗೂ ಇದೆ ಎಂದು ತಿಳಿಸಿದರು. ಚನ್ನಪಟ್ಟಣದಲ್ಲಿ ನಮ್ಮದೇ

[ccc_my_favorite_select_button post_id="94693"]
Doddaballapura: ಕೋಡಿ ಬಿದ್ದ ಗೌಡನಕೆರೆ..!| Video

Doddaballapura: ಕೋಡಿ ಬಿದ್ದ ಗೌಡನಕೆರೆ..!| Video

ದೊಡ್ಡಬಳ್ಳಾಪುರ: ತಾಲ್ಲೂಕಿನ ಪಂಚಗಿರಿ ಶ್ರೇಣಿಗಳಲ್ಲಿ ಒಂದಾದ ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿನ ಗೌಡನಕೆರೆ ಸೋಮವಾರ ರಾತ್ರಿ ಸುರಿದ ಮಳೆಗೆ ಕೋಡಿ ಬಿದ್ದಿದೆ. doddaballapura rain ಈ ಕೆರೆಗೆ ಹೆಚ್ಚಿನ ನೀರು ಹರಿದು ಬರುವುದೇ ಬೆಟ್ಟದ ಮೇಲೆ

[ccc_my_favorite_select_button post_id="94701"]
ಅರುಣ್ ಶಬರಿಮಲೆ ಮುಖ್ಯ ಅರ್ಚಕ

ಅರುಣ್ ಶಬರಿಮಲೆ ಮುಖ್ಯ ಅರ್ಚಕ

ಪತ್ತನಂತಿಟ್ಟ: ಅರುಣ ಕುಮಾರ ನಂಬೂದಿರಿ ಅವರು ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕವಾಗಿದ್ದಾರೆ. ಅರ್ಚಕರ ನೇಮಕಕ್ಕಾಗಿ ಉಷಾ ಪೂಜೆಯ ನಂತರ, ಬೆಳಿಗ್ಗೆ 7.30ರ ಸುಮಾರಿಗೆ ಸಾಂಪ್ರದಾಯಿಕ ಡ್ರಾ ಮೂಲಕ ಆಯ್ಕೆ

[ccc_my_favorite_select_button post_id="94370"]
ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್ ಕ್ರೀಡಾ ಶಾಲೆ ಸ್ಥಾಪನೆ: ಸಚಿವ ಸತೀಶ್ ಜಾರಕಿಹೊಳಿ

ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್

ಬೆಳಗಾವಿ, (ಸೆ.9): ರೊವಾಂಡಾ ದೇಶದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಗಣಿಗಾರಿಕೆ, ಇಂಧನ ಹಾಗೂ ಮೂಲಸೌಕರ್ಯಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತಹ ಉದ್ಯಮಸ್ನೇಹಿ ವಾತಾವರಣ ಹೊಂದಿದ್ದು, ಇಲ್ಲಿನ ಹೂಡಿಕೆದಾರರಿಗೆ ಮುಕ್ತ ಸ್ವಾಗತವಿದೆ ಎಂದು ಪೂರ್ವ

[ccc_my_favorite_select_button post_id="89581"]

ಕ್ರೀಡೆ

Doddaballapura: ರಾಜ್ಯಮಟ್ಟದ ಯೋಗ ಪಂದ್ಯಾವಳಿಯಲ್ಲಿ 14 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ..

Doddaballapura: ರಾಜ್ಯಮಟ್ಟದ ಯೋಗ ಪಂದ್ಯಾವಳಿಯಲ್ಲಿ 14 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ..

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ನಗರದ ದೇವರಾಜ ಅರಸು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಯೋಗ ಪಂದ್ಯಾವಳಿಯ ಸಮಾರೋಪ ಸಮಾರಂಭ

[ccc_my_favorite_select_button post_id="94463"]
News update: ಅಣ್ಣ ತಂಗಿಯ ಮೃತ ದೇಹಗಳು ಪತ್ತೆ.. ಮುಗಿಲು ಮುಟ್ಟಿದ ಹೆತ್ತಮ್ಮನ ರೋಧನೆ

News update: ಅಣ್ಣ ತಂಗಿಯ ಮೃತ ದೇಹಗಳು ಪತ್ತೆ.. ಮುಗಿಲು ಮುಟ್ಟಿದ ಹೆತ್ತಮ್ಮನ

ಬೆಂಗಳೂರು: ನೀರು ತರಲು ಹೋಗಿದ್ದ ವೇಳೆ ಆಯತಪ್ಪಿ ಕೆಂಗೇರಿ (Kengeri) ಕೆರೆಗೆ ಬಿದ್ದು ನಾಪತ್ತೆಯಾಗಿದ್ದ ಅಣ್ಣ-ತಂಗಿಯ ಮೃತದೇಹಗಳು ಪತ್ತೆಯಾಗಿವೆ. ಮೊದಲಿಗೆ ಅಣ್ಣ ಜಾನ್ಸನ್ ಮೃತದೇಹ ಸಿಕ್ಕಿದೆ. ಇದೀಗ ಮಹಾಲಕ್ಷ್ಮೀ ಮೃತದೇಹ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ ಸಂಜೆ 6 ಗಂಟೆ

[ccc_my_favorite_select_button post_id="94698"]
ಮದುವೆಗೆ ಹೊರಟಿದ್ದ ಬಸ್ ಉರುಳಿ ಹಲವರಿಗೆ ಗಾಯ

ಮದುವೆಗೆ ಹೊರಟಿದ್ದ ಬಸ್ ಉರುಳಿ ಹಲವರಿಗೆ ಗಾಯ

ಕನಕಪುರ: ಮದುವೆಗೆ ಹೊರಟ್ಟಿದ್ದ ಖಾಸಗಿ ಬಸ್ಸೋಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವಘಟನೆ ತಾಲೂಕಿನ ಸಂಗಮದ ಮಡಿವಾಳ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ತಗಡೇಗೌಡನದೊಡ್ಡಿ ಗ್ರಾಮದ ವಧು

[ccc_my_favorite_select_button post_id="94562"]

ಆರೋಗ್ಯ

ಸಿನಿಮಾ

ಜಾಮೀನಿಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್ ಪರ ವಕೀಲರು

ಜಾಮೀನಿಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್ ಪರ ವಕೀಲರು

ಬೆಂಗಳೂರು: ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಜಾಮೀನು ನೀಡಲು ಬೆಂಗಳೂರಿನ 57ನೇ ಸಿಸಿ ಹೆಚ್ ನ್ಯಾಯಾಲಯ ನಿರಾಕರಿಸಿದ ಹಿನ್ನಲೆಯಲ್ಲಿ ನಟ ದರ್ಶನ್ ಪರವಾಗಿ

[ccc_my_favorite_select_button post_id="94198"]
error: Content is protected !!