ಬೆಂಗಳೂರು, (ಸೆ.02); ಮುಡಾ ಹಗರಣದಲ್ಲಿ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ ನಡೆದಿದ್ದು, ಈ ಸಂಬಂಧ ಶನಿವಾರ ನಡೆದ ಕಲಾಪದ ವಿಡಿಯೋ ಒಂದು ವೈರಲ್ ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ನ್ಯಾಯವರ್ತಿ ನಾಗಪ್ರಸನ್ನ ಅವರು, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದ ಖಾಸಗಿ ವ್ಯಕ್ತಿಗಳ ಪರವಾದ ವಕೀಲರನ್ನು ಒಂದು ಪ್ರಶ್ನೆ ಕೇಳುತ್ತಾರೆ. ನೀವೆಲ್ಲ ಇಷ್ಟು ವಾದ ಮಾಡುತ್ತಿದ್ದೀರಿ. ಆದರೆ, ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ನೀವು ಯಾಕೆ ಏನೂ ಹೇಳಲಿಲ್ಲ. ಆ ಪ್ರಶ್ನೆಗೆ ನಿಮ್ಮ ಉತ್ತರ ಯಾಕೆ ಇಲ್ಲ? ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕೇಳಿದ್ದಾರೆ.
ಇದಕ್ಕೆ ಉತ್ತರಿಸುವ ವಕೀಲರು ಉತ್ತರ ಏನೂ ಇಲ್ಲ ಎನ್ನುತ್ತಾರೆ. ನ್ಯಾಯಮೂರ್ತಿಗಳು ಆಶ್ಚರ್ಯದಿಂದ ಏನೂ ಇಲ್ಲ ಎಂದು ಪ್ರಶ್ನಿಸುತ್ತಾರೆ.
ಆಗ ವಕೀಲರು ಹೌದು ಸ್ವಾಮಿ, ಆ ಪ್ರಶ್ನೆಗೆ ಉತ್ತರ ಏನೂ ಇಲ್ಲ. ಯಾಕೆ ಎಂಬುದಕ್ಕೆ ನಾವು ಸಮಜಾಯಿಷಿ ಕೊಡುತ್ತೇವೆ ಎನ್ನುತ್ತಾರೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….