ಚಿಕ್ಕಬಳ್ಳಾಪುರ, (ಆಗಸ್ಟ್ 31): ರಾಜ್ಯ ರಾಜಕಾರಣದಲ್ಲಿ ಕೆಲವರನ್ನು ನಾನು ಡ್ಯಾನ್ಸ್ ಮಾಡಿಸಿದ್ದೇನೆ. ಆದರೆ ನನ್ನ ನೆಚ್ಚಿನ ನಾಯಕ ಮೆಗಾಸ್ಟಾರ್ ಚಿರಂಜೀವಿ ಜತೆಗೆ ಡ್ಯಾನ್ಸ್ ಮಾಡಬೇಕು ಎಂಬುದು ಬಹುಕಾಲದ ನನ್ನ ಹೆಬ್ಬಯಕೆಯಾಗಿದೆ. ಇಂತಹ ಅವಕಾಶ ದೊರೆತರೆ ನನ್ನ ಜೀವನದ ಬಹುದೊಡ್ಡ ಸೌಭಾಗ್ಯವಾಗಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರವಾಹನ ವಿತರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಚಿರಂಜೀವಿ ಚಿತ್ರದಲ್ಲಿ ಅಭಿನಯ: ತೆಲುಗು ಚಿತ್ರರಂಗದ ಹೆಸರಾಂತ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಸದ್ಯ ವಿಶ್ವಂಬರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದಾದ ನಂತರ ಸೆಟ್ಟೇರಲಿರುವ ಅವರ ಮುಂದಿನ ಚಿತ್ರದಲ್ಲಿ ತಾವು ನಟಿಸುವ ಅವಕಾಶದ ಬಗ್ಗೆ ಚರ್ಚೆ ನಡೆದಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ನಾನು ಮೆಗಾಸ್ಟಾರ್ ಚಿರಂಜೀವಿ ಅವರ ಬಹು ದೊಡ್ಡ ಅಭಿಮಾನಿ ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿ ಇದೆ. ಕಾರಣ ನಾನು ಅವರ ಸಮುದಾಯದ ಹುಡುಗ ಎಂಬುದೇ ಆಗಿದೆ.ನಾನು ಶಾಸಕನಾದಾಗಲೂ ಹೈದರಾಬಾದ್‌ನ ಮನೆಗೆ ಕರೆಸಿದ್ದರು. ಅವರ ಸಹೋದರ ಪವನ್ ಕಲ್ಯಾಣ್ ಅವರು ಗೆದ್ದಾಗ ನಾನು ಕೂಡ ಫೋನ್ ಮಾಡಿ ಶುಭಾಶಯ ಹೇಳಿದ್ದೆ. ಅವರ ತೆಲುಗು ಸಿನಿಮಾದಲ್ಲಿ ನಟನೆಯ ಅವಕಾಶದ ಬಗ್ಗೆ ಚರ್ಚೆ ನಡೆದಿರುವುದು ನಿಜ ಎಂದರು.
ನನಗೆ ಚಿರಂಜೀವಿ ಅವರ ಜೊತೆ ಡ್ಯಾನ್ಸ್ ಮಾಡಬೇಕು ಎಂಬುದು ಆಸೆ. ಒಂದು ಸಣ್ಣ ಸ್ಟೆಪ್ ಹಾಕಲು ಅವಕಾಶ ಸಿಕ್ರೂ ಅದು ನನ್ನ ಸೌಭಾಗ್ಯ. ನಾನು ರಾಜಕಾರಣದಲ್ಲಿ ಕೆಲವರನ್ನ ಡ್ಯಾನ್ಸ್ ಮಾಡಿಸಿದ್ದೀನಿ. ಆದರೆ ಚಿರಂಜೀವಿ ಅವರ ಜೊತೆ ‘ಡ್ಯಾನ್ಸ್ ಮಾಡಿದ್ರೆ ಅದ ಅದು ನನಗೆ ಖುಷಿ ಅಂತಾ ಪರೋಕ್ಷವಾಗಿ ಸಂಸದ ಸುಧಾಕರ್‌ಗೆ ಟಾಂಗ್ ಕೊಟ್ಟರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….