ದೊಡ್ಡಬಳ್ಳಾಪುರ, (ಆಗಸ್ಟ್ 31); ಇಲ್ಲಿನ ಅಬಾಕಸ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪಡೆದ ಪ್ರಶಸ್ತಿಗಳನ್ನು ನಗರದ ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ವಿತರಿಸಲಾಯಿತು.
ಪ್ರಶಸ್ತಿ ವಿತರಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಧನಂಜಯ ಅವರು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕಿದೆ. ಅಬಾಕಸ್ ನಿಂದಾಗಿ ನೆನಪಿನ ಶಕ್ತಿ ಹೆಚ್ಚುವುದಲ್ಲದೆ, ಗಣಿತ ಪಠ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಅತಿ ಹೆಚ್ಚು ಪ್ರಶಸ್ತಿ, ಪುರಸ್ಕಾರ ಪಡೆದಿರುವುದು ಪ್ರಶಂಸನೀಯ ಎಂದರು.
ಈ ವೇಳೆ ದೊಡ್ಡಬಳ್ಳಾಪುರ ಅಬಾಕಸ್ ಕೇಂದ್ರದ ತರಬೇತುದಾರರಾದ ವಿಎ ಪುಪ್ಷ, ಶಾಲೆಯ ಶಿಕ್ಷಕರಾದ ಮಧು, ಲಿಂಗರಾಜು, ಸಾಗರ್, ಆನಂದ್, ಸತೀಶ್ ಮತ್ತಿತರರಿದ್ದರು.
ಸಾಧಕ ವಿದ್ಯಾರ್ಥಿಗಳ ವಿವರ
ಚಾಂಪಿಯನ್ ಟ್ರೋಪಿ: ನೇಹಿತ, ಮನಿಷಾ, ವಿಪುಲ್, ಸಂಪ್ರೀತ್ ರಾಜ್, ಆದಿತ್ಯ ಕುಮಾರ್, ಪೂನಂ ಸಾಯಿ ರಾಮ್, ನವ್ಯ.ಜೆ., ಚಂದುಶ್ರೀ ಜಿ, ರಾಯನ್ ಗೌಡ, ತಸ್ಮೀಯಾ ಖಾನಂ, ಪ್ರಿತಾ ಆರ್ ಗೌಡ, ಪ್ರಜ್ವಲ್ ಆರ್ ಗೌಡ, ಹಿತೈಷಿ ಜಿ ಗೌಡ, ದೃವನ್.ಎಂ., ಧಕ್ಷಾ.ಪಿ., ಪುನಿತ್ ಜೆ.ಹೆಚ್., ಗೋಕುಲ್, ಐಶ್ವರ್ಯ ಆರ್.
ಚಿನ್ನದ ಪದಕ; ಪೂರ್ವಿತಾ ಹೆಚ್,ಸೋನಮ್, ಪ್ರಾರ್ಥನ ಎಂ, ರುಚಿತ ಯು, ಜೈನ್ ಖಾನ್, ಹಿತೈಷಿ ಜೆ ನವೀನ್, ಸುಪ್ರೀಯ ಕುಮಾರಿ, ದಕ್ಷಿತಾ ಸಿ ಎಸ್, ಸೌಜನ್ಯ , ಸಂಹಿತಾ ರಾಜ್ ಕೆ.ಎಸ್, ಸೃಜನ್ ಪಿ
ಬೆಳ್ಳಿ ಪದಕ: ಇಂಚರ ಪಿ, ಪೂರ್ವಿಕಾ ಎನ್ ಐ, ಗಮನ ಜಿ ಗೌಡ, ಶ್ರೇಯ ಎನ್, ಪ್ರಣಿತ್ ರಾಜ್.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….