ಹೈದರಾಬಾದ್, (ಆಗಸ್ಟ್.30): ಮಟನ್ ಕರಿ ವಿಚಾರವಾಗಿ ಮದುವೆ ಮನೆಯಲ್ಲಿ ನಡೆದ ಗಲಾಟೆಯಲ್ಲಿ 10 ಮಂದಿ ಗಾಯಗೊಂಡ ಘಟನೆಯೊಂದು ತೆಲಂಗಾಣದ ನಿಜಾಮಾಬಾದ್ನ ನವಿಪೇಟ್ನಲ್ಲಿ ನಡೆದಿದೆ.
ವಧು ನವಿಪೇಟೆಯ ವಧುವಿಗೂ ನಂದಿಪೇಟ್ ಮಂಡಲದ ಬಡಗುಣ ಗ್ರಾಮದ ವರನಿಗೂ ಮದುವೆ ನಿಶ್ಚಯ ಮಾಡಲಾಗಿತ್ತು. ಅಂತೆಯೇ ಬುಧವಾರ ನಡೆದ ಮದುವೆ ಸಮಾರಂಭದಲ್ಲಿ ಊಟದಲ್ಲಿ ಮಟನ್ ಕರಿ ವಿಚಾರವಾಗಿ ವಧು ಹಾಗೂ ವರನ ಸಂಬಂಧಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಪ್ಲೇಟ್ಗಳು, ಗ್ಲಾಸ್ಗಳು, ಕುರ್ಚಿಗಳು ಮತ್ತು ಇತರ ವಸ್ತುಗಳ ಮೂಲಕ ದೈಹಿಕ ಹಲ್ಲೆ ನಡೆದಿದೆ.
ವರನ ಕಡೆಯ ಕೆಲವು ಯುವಕರು, ಕಡಿಮೆ ಮಟನ್ ಬಡಿಸಿದ್ದಾರೆ ಎಂದು ಅತೃಪ್ತಗೊಂದು ಅಡುಗೆ ಸಿಬ್ಬಂದಿಯನ್ನು ಪ್ರಶ್ನಿಸುತ್ತಾ ಗಲಾಟೆ ಶರು ಮಾಡಿದ್ದಾರೆ. ಈ ವೇಳೆ ಎರಡೂ ಕಡೆಯ ಸಂಬಂಧಿಕರ ನಡುವೆ ಮಾತಿಗೆ ಮಾತು ಬೆಳೆದಿದೆ. ಅಲ್ಲದೇ ಕಲ್ಲು ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ.
ವಧು ಹಾಗೂ ವರನ ಕಡೆಯವರು ಹೊಡೆದಾಡಿಕೊಳ್ಳುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕೆಲ ಪುರುಷರು ಮತ್ತು ಮಹಿಳೆಯರು ಗಾಯಗೊಂಡಿದ್ದು, ಇತರರು ಅವರಿಗೆ ಸಹಾಯ ಮಾಡುತ್ತಿರುವುದನ್ನು ಕಾಣಬಹುದು. ಸ್ಥಳಕ್ಕಾಗಮಿಸಿದ ಸ್ಥಳೀಯರು ಪೊಲೀಸರು ಎರಡೂ ಕಡೆಯವರನ್ನು ಕೂರಿಸಿ ಮಾತನಾಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಗಲಾಟೆಯಲ್ಲಿ ಗಾಯಗೊಂಡ 10 ಮಂದಿಯನ್ನು ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಒಂದು ಗುಂಪಿನ 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….