ಬೆಂಗಳೂರು, (ಆಗಸ್ಟ್ 30); ಅಶ್ಲೀಲ ಸಂದೇಶ ಕಳಿಸಿದ ಕಾರಣ ನಟ ದರ್ಶನ್ ತೂಗುದೀಪ್ ಅವರು ವ್ಯಕ್ತಿಯೋರ್ವನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ, ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ಸಮಯದಲ್ಲಿ ಇಡೀ ಕರ್ನಾಟಕದ ಥಿಯೇಟರ್ಸ್ ಶೇಕ್ ಆಗುವಂತೆ ‘ಕರಿಯ’ ಭರ್ಜರಿಯಾಗಿ ರೀ ರಿಲೀಸ್ ಕಂಡಿದೆ.
ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಇದೀಗ ಹೊಸ ಹಬ್ಬ ಶುರುವಾಗಿದೆ. ಯಾಕೆ ಅಂದ್ರೆ ಕನ್ನಡ ಸಿನಿಮಾ ರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದು, ಕನ್ನಡ ಮನಸ್ಸುಗಳ ಎದೆಯಲ್ಲಿ ಎಂದೆಂದಿಗೂ ಹಸಿರಾಗಿ ಉಳಿದಿರುವ ‘ಕರಿಯ’ ಸಿನಿಮಾ ಇದೀಗ ಅದ್ಧೂರಿಯಾಗಿ ರೀ-ರಿಲೀಸ್ ಆಗಿದೆ.
ದರ್ಶನ್ ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೂ ಅಭಿಮಾನಿಗಳ ಕ್ರೇಸ್ ಮಾತ್ರ ಕಡಿಮೆಯಾಗಿಲ್ಲ. ಚಿತ್ರಮಂದಿರಗಳ ಬಳಿ ದರ್ಶನ್ ಕಟೌಟ್ ನಿಲ್ಲಿಸಿ, ಹಾರ, ಪಟಾಕಿ ಸಿಡಿಸಿ ಕರಿಯನಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.
2003ರ ಜನವರಿ ತಿಂಗಳಲ್ಲಿ ಕರಿಯ ಸಿನಿಮಾ ಮೊದಲ ಬಾರಿ ಬಿಡುಗಡೆ ಆಗಿತ್ತು. ಖ್ಯಾತ ನಿರ್ದೇಶಕ ಪ್ರೇಮ್ ಅವರ ಮೊದಲ ಸಿನಿಮಾ ಇದಾಗಿತ್ತು. ದರ್ಶನ್ ಅವರಿಗೆ ನಾಯಕನಾಗಿ ಇದು ಐದನೇ ಸಿನಿಮಾ ಹಾಗೂ ಮೊದಲ ಬಲು ದೊಡ್ಡ ವಿಜಯ ತಂದುಕೊಟ್ಟ ಸಿನಿಮಾ ಆಗಿತ್ತು.
ಆಗಿನ ಕಾಲಕ್ಕೆ ಈ ಸಿನಿಮಾ 700 ದಿನಗಳ ಪ್ರದರ್ಶನ ಕಂಡಿತ್ತು. ಮೆಜೆಸ್ಟಿಕ್ ಚಿತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ದರ್ಶನ್ ಅವರಿಗೆ ಕರಿಯ ರೌಡಿಸಂ ಸಿನಿಮಾಗಳ ಬ್ರ್ಯಾಂಡ್ ಅಂಬಾಸಿಡರ್ ಮಾಡಿಬಿಟ್ಟಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….