ಹರಿತಲೇಖನಿ ದಿನಕ್ಕೊಂದು ಕಥೆ: ಜಾಣ ನಾಯಿ

ಒಬ್ಬ ಶ್ರೀಮಂತ ತನ್ನ ನಾಯಿಯನ್ನು ಕರೆದುಕೊಂಡು ಆಫ್ರಿಕಾದಲ್ಲಿ ಸಫಾರಿಗೆ ಹೋಗಿದ್ದ. ಒಂದು ದಿನ ಆ ನಾಯಿ ಚಿಟ್ಟೆಗಳನ್ನು ಅಟ್ಟಿಸಿಕೊಂಡು ಹೋಗುತ್ತ ಯಜಮಾನನನ್ನು ಬಿಟ್ಟು ಬಹುದೂರ ಹೋಗಿ ಬಿಟ್ಟಿತ್ತು.

ದಾರಿ ತಪ್ಪಿದ ನಾಯಿ ಅಲ್ಲಿಲ್ಲಿ ಅಲೆಯುತ್ತಿರುವಾಗ ಚಿರತೆಯೊಂದು ತನ್ನ ಕಡೆ ವೇಗವಾಗಿ ಬರುತ್ತಿರುವುದನ್ನು ಕಂಡಿತು. ನಾಯಿಗೆ ತಾನು ದೊಡ್ಡ ಅಪಾಯಕ್ಕೆ ಸಿಕ್ಕಿರುವುದು ಅರಿವಾಯಿತು. ಚಿರತೆಗೆ ಇವತ್ತಿನ ಲಂಚ್‌ ನಾನೇ. ಇದರ ಕೈಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಅದು ಯೋಚಿಸಿತು.

ನಾಯಿ ಅಲ್ಲಿಯೇ ಬಿದ್ದಿದ್ದ ಎಲುಬಿನ ರಾಶಿ ನೋಡಿತು. ತಕ್ಷ ಣ ಅದಕ್ಕೊಂದು ಉಪಾಯ ಹೊಳೆಯಿತು. ಕೂಡಲೇ ಚಿರತೆಯ ಕಡೆಗೆ ಬೆನ್ನು ಮಾಡಿ ಕುಳಿತುಕೊಂಡು ಒಂದು ಎಲುಬಿನ ಚೂರನ್ನು ಜಗಿಯಲಾರಂಭಿಸಿತು. ಚಿರತೆ ಹತ್ತಿರಕ್ಕೆ ಬಂದು ನಾಯಿಯ ಮೇಲೆ ಹಾಯಲು ತಯಾರಾದಾಗ, ನಾಯಿ ಗಟ್ಟಿ ಧ್ವನಿಯಲ್ಲಿ, ಆಹಾ! ಎಂಥಾ ರುಚಿ ಈ ಚಿರತೆಯ ಮಾಂಸ. ಈ ಕಾಡಿನಲ್ಲಿ ಇನ್ನೂ ಚಿರತೆಗಳಿವೆಯಾ ಎಂದು ನೋಡಬೇಕು ಎಂದು ತನಗೆ ತಾನೇ ಹೇಳಿಕೊಂಡಿತು.

ಇದನ್ನು ಕೇಳಿಕೊಂಡ ಚಿರತೆ ಹೆದರಿ ಕಂಗಾಲಾಗಿ, ಬದುಕಿದೆಯಾ, ಬಡ ಜೀವವೇ ಎಂದು ಕಾಡಿನೊಳಗೆ ಓಡಿ ಹೋಯಿತು. ಆ ನಾಯಿ ಇನ್ನೇನು ನನ್ನನ್ನು ತಿಂದೇ ಬಿಡುತ್ತಿತ್ತು. ಕೂದಲೆಳೆಯಲ್ಲಿ ತಪ್ಪಿಸಿಕೊಂಡೆ ಎಂದು ಅದು ನೆಮ್ಮದಿಯ ಉಸಿರೆಳೆಯಿತು. ಇದನ್ನೆಲ್ಲ ಒಂದು ಕೋತಿ ಮರದ ಮೇಲೆ ಕುಳಿತುಕೊಂಡು ನೋಡುತ್ತಿತ್ತು. ಈ ನಾಯಿಯ ಉಪಾಯ ಬಳಸಿಕೊಂಡು ಚಿರತೆಯಿಂದ ನಾನು ರಕ್ಷ ಣೆ ಪಡೆಯಬಹುದು ಎಂದು ಯೋಚಿಸಿ ಚಿರತೆಯನ್ನು ಹುಡುಕಿಕೊಂಡು ವೇಗವಾಗಿ ಕಾಡಿನೊಳಗೆ ಹೋಯಿತು.

ಕೋತಿ ವೇಗವಾಗಿ ಹೋಗುವುದನ್ನು ನೋಡಿ ನಾಯಿಗೆ ಸಂಶಯ ಬಂತು. ಚಿರತೆಯನ್ನು ಕಂಡು ಕೋತಿ ನಡೆದದ್ದೆಲ್ಲವನ್ನೂ ಹೇಳಿತು. ಚಿರತೆಗೆ ಕೋಪ ನೆತ್ತಿಗೇರಿತು. ಕೇವಲ ಒಂದು ನಾಯಿ ನನ್ನನ್ನು ಮುಟ್ಠಾಳನನ್ನಾಗಿಸಿತು ಎಂದು ಅವಮಾನದಲ್ಲಿ ಅದರ ರಕ್ತ ಕುದಿಯಿತು. ಅದು ಕೋತಿಗೆ, ಗೆಳೆಯ ನನ್ನ ಬೆನ್ನ ಮೇಲೆ ಕುಳಿತುಕೋ. ಈಗ ನೋಡು, ಏನಾಗುತ್ತೆಯೆಂದು ಎಂದು ಸವಾಲು ಹಾಕಿತು.

ಕೋತಿಯೊಂದಿಗೆ ಬರುತ್ತಿರುವ ಚಿರತೆಯನ್ನು ಕಂಡು ನಾಯಿ, ಈಗೇನು ಮಾಡುವುದು? ಎಂದು ಯೋಚಿಸಿತು. ಓಡಿ ಹೋಗುವುದರಿಂದ ಪ್ರಯೋಜನವಿಲ್ಲ. ಉಪಾಯದಿಂದಲೇ ಪಾರಾಗಬೇಕು ಎಂದು ಯೋಚಿಸಿ ಚಿರತೆಯನ್ನು ಗಮನಿಸದಂತೆ ಅವುಗಳ ಕಡೆಗೆ ಬೆನ್ನು ಮಾಡಿ ಕುಳಿತುಕೊಂಡಿತು.

ಎಲ್ಲಿ ಹೋಯಿತು ಈ ಕೋತಿ? ಇನ್ನೊಂದು ಚಿರತೆಯನ್ನು ಹಿಡಿದು ತರುವುದಾಗಿ ಹೇಳಿ ಹೋದದ್ದು ಗಂಟೆ ಒಂದಾದರೂ ಬರಲಿಲ್ಲವಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿಕೊಂಡಿತು. ಚಿರತೆ ಮತ್ತು ಕೋತಿ, ಬಂದ ದಾರಿಗೆ ಸುಂಕವಿಲ್ಲ ಎಂದು ಓಡಿ ಹೋದವು.

ಕೃಪೆ: ಕೆ.ನಿರುಪಮಾ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ವಕ್ಫ್ ಮಸೂದೆ ಅಂಗಿಕಾರಕ್ಕೆ ವೆಲ್ಫೇರ್ ಪಾರ್ಟಿ ತೀವ್ರ ವಿರೋಧ.. ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ವಕ್ಫ್ ಮಸೂದೆ ಅಂಗಿಕಾರಕ್ಕೆ ವೆಲ್ಫೇರ್ ಪಾರ್ಟಿ ತೀವ್ರ ವಿರೋಧ.. ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ (Wakf Bill) ಅಂಗಿಕಾರವಾಗಿದ್ದು ಇದು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ Harithalekhani

[ccc_my_favorite_select_button post_id="105525"]
ಏ.28 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭೇಟಿ

ಏ.28 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭೇಟಿ

ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ಸೌಲಭ್ಯ ವಿತರಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ Cmsiddaramaiah

[ccc_my_favorite_select_button post_id="105544"]
ಟೈಟು ಟೈಟು ಫುಲ್ ಟೈಟು.. ಪೊಲೀಸ್ ಪೇದೆಯ ಸ್ಥಿತಿ ನೋಡಿ| Video

ಟೈಟು ಟೈಟು ಫುಲ್ ಟೈಟು.. ಪೊಲೀಸ್ ಪೇದೆಯ ಸ್ಥಿತಿ ನೋಡಿ| Video

ಕರ್ತವ್ಯದಲ್ಲಿದ್ದ ಪೊಲೀಸ್ (Police) ಪೇದೆಯೊಬ್ಬ ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿದ ಘಟನೆ ಉತ್ತರ ಪ್ರದೇಶದ (UP) ಬಿಜೋರ್‌ನಲ್ಲಿ ನಡೆದಿದೆ.

[ccc_my_favorite_select_button post_id="105530"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಬೆಂಗಳೂರು (Harithalekhani): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅತಿಥೇಯ ರಾಯಲ್ ಚಾಲೆಂಜರ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ ತಂಡವನ್ನು ಎದುರಿಸಲಿದೆ. ತಾನು ಆಡಿದ ಒಟ್ಟು 6 ಪಂದ್ಯಗಳ ಪೈಕಿ ಆರ್‌ಸಿಬಿ

[ccc_my_favorite_select_button post_id="105462"]
ದುಷ್ಕರ್ಮಿಗಳಿಂದ ಹೇಯ ಕೃತ್ಯ.. ದ್ರಾಕ್ಷಿ ತೋಟ ನಾಶ

ದುಷ್ಕರ್ಮಿಗಳಿಂದ ಹೇಯ ಕೃತ್ಯ.. ದ್ರಾಕ್ಷಿ ತೋಟ ನಾಶ

ಚಿಕ್ಕಬಳ್ಳಾಪುರ (Harithalekhani): ಕಟಾವಿಗೆ ಸಿದ್ದವಾಗಿದ್ದ ಫಸಲುಯುಕ್ತ ದ್ರಾಕ್ಷಿ (grape) ತೋಟವನ್ನು ಅಪರಿಚಿತ ದುಷ್ಕರ್ಮಿಗಳು ನಾಶ ಪಡಿಸಿರುವ ಘಟನೆ ತಾಲ್ಲೂಕಿನ ಕೊಂಡೇನಹಳ್ಳಿ- ಕಡಶೀಗನಹಳ್ಳಿ ನಡುವಿನ ದ್ರಾಕ್ಷಿ ತೋಟದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಕೊಂಡೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬುವವರಿಗೆ ಕೊಂಡೇನಹಳ್ಳಿ- ಕಡಶೀಗನಹಳ್ಳಿ ಮದ್ಯೆ ಎರಡು ಎಕರೆ

[ccc_my_favorite_select_button post_id="105512"]
NH 44ರಲ್ಲಿ ಭೀಕರ ಅಪಘಾತ‌: ತಂದೆ ಮಗಳ ದುರ್ಮರಣ.. ತಾಯಿಯ ಸ್ಥಿತಿ ಚಿಂತಾಜನಕ

NH 44ರಲ್ಲಿ ಭೀಕರ ಅಪಘಾತ‌: ತಂದೆ ಮಗಳ ದುರ್ಮರಣ.. ತಾಯಿಯ ಸ್ಥಿತಿ ಚಿಂತಾಜನಕ

ಕ್ಯಾಂಟರ್ ಪಲ್ಟಿಯಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್ ನಲ್ಲಿದ್ದ ತಂದೆ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿ, ಗೃಹಿಣಿ ಸ್ಥಿತಿ ರಾಷ್ಟ್ರೀಯ ಹೆದ್ದಾರಿ 44ರ (NH 44)

[ccc_my_favorite_select_button post_id="105548"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!