ದೊಡ್ಡಬಳ್ಳಾಪುರ, (ಆಗಸ್ಟ್.29); ಉಪನ್ಯಾಸಕ ಡಾ.ಎಂ. ಚಿಕ್ಕಣ್ಣ ಅವರ ಬಹು ನಿರೀಕ್ಷಿತ “ಹೊಸ ಚಿಗುರು” ಸಂಶೋಧನಾ ಲೇಖನಗಳ ಸಂಕಲನ ಬಿಡುಗಡೆ ಮಾಡಲಾಗಿದೆ.
ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಎಂ ಚಿಕ್ಕಣ್ಣ ಅವರ “ಹೊಸ ಚಿಗುರು” ಸಂಶೋಧನಾ ಲೇಖನಗಳ ಸಂಕಲನ ಹಾಗೂ ಡಾ.ಆರ್.ನಾಗರಾಜು ಅವರ ಪ್ರಿನ್ಸಿಪಲ್ಸ್ ಆಫ್ ಇಂಟರ್ನೆಟ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ರಾಜೇಂದ್ರ ಸಮಾಜದಲ್ಲಿ ಯಾರಲ್ಲಿ ವಿವೇಕ, ವಿದ್ವತ್ತು ಇದೆಯೋ ಅವರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಸಾಗಬೇಕು, ಸಾಹಿತಿಗಳನ್ನು ಪ್ರೀತಿಸಬೇಕು ಅವರ ಕೃತಿಗಳನ್ನು ಇಷ್ಟಪಡಬೇಕು ಆಗ ಮಾತ್ರ ಸಾಹಿತಿ ಬೆಳೆಯುತ್ತಾನೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನೃಪತುಂಗ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಸಿ.ಪುಟ್ಟೇಶ್ “ಹೊಸ ಚಿಗುರು” ಕೃತಿ ಕುರಿತು ಮಾತನಾಡಿದ ಅವರು ಸಂಶೋಧನಾ ಸಂಕಲನದ ಲೇಖನಗಳು ಕನ್ನಡ ಅಧ್ಯಾಪಕರು, ಯುವ ಸಂಶೋಧನಾರ್ಥಿಗಳು ಸಮಕಾಲೀನ ಸಂದರ್ಭದಲ್ಲಿ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತಿರುವ ರೀತಿಯನ್ನೂ ಹಾಗೂ ಈ ಕೃತಿಯಲ್ಲಿ ಕ್ಷೇತ್ರಕಾರ್ಯ, ಮಾಹಿತಿ ಸಂಗ್ರಹ, ವಿಶ್ಲೇಷಣೆಗಳು ಗಮನ ಸೆಳೆಯುತ್ತವೆ.
ವಿವಿಧ ಜ್ಞಾನಶಿಸ್ತುಗಳ ಆಕರಗಳನ್ನು ಇಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ, ಸಾಹಿತ್ಯ ಕೃಷಿ, ಸಂಶೋಧನೆಯು ನಿರಂತರವಾಗಿ ಸಾಗಬೇಕಾದುದು, ಸಾಹಿತ್ಯ ಶೋಧವು ಚಲನಶೀಲ ಪ್ರಕ್ರಿಯೆ ಎಂಬುದು ಇಲ್ಲಿನ ಪ್ರಧಾನ ದೃಷ್ಟಿಕೋನವಾಗಿದೆ,ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ರೀತಿಯನ್ನು ಸಹ ಇಲ್ಲಿನ ವಿಶ್ಲೇಷಣೆಗಳಲ್ಲಿ ಕಾಣಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್. ಎಲ್ ಜಾಲಪ್ಪ ಕ್ಯಾಂಪಸ್ ನ ಅಧ್ಯಕ್ಷರಾದ ಜೆ. ಆರ್ ರಾಕೇಶ್, ಮಾನವ ಸಂಪನ್ಮೂಲ ನಿರ್ದೇಶಕರಾದ ಬಾಬುರೆಡ್ಡಿ, ಉಪ ಪ್ರಾಂಶುಪಾಲರಾದ ಕೆ. ದಕ್ಷಿಣ ಮೂರ್ತಿ, ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಪಿ. ಚೈತ್ರ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಕಾಶ್ ಸಿ.ಪಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್, ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಬಾಬುಸಾಬಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್ ಬಿ ಮತ್ತಿತರರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….