Site icon ಹರಿತಲೇಖನಿ

ವಾಟ್ಸಪ್‌ನಲ್ಲಿ ಪ್ರೇಮಾಂಕುರ: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಪಾಲಾದ ಪ್ರೇಮಿಗಳು..!

ಚಿಕ್ಕಬಳ್ಳಾಪುರ, (ಆಗಸ್ಟ್.28); ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನ್ನು ತಿಳಿದ ಪ್ರಿಯಕರನೂ ಸಹಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಜಿಲ್ಲೆಯ ಶಿಡ್ಲಘಟ್ಟದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ತಿಮ್ಮಣ್ಣ ರಾಮಪ್ಪ ಬುಸರರೆಡ್ಡಿ( 28) ಮತ್ತು ಜಿಲ್ಲೆಯ ಗುಡಿಬಂಡೆ ತಾಲ್ಲೂಕು, ಸೋಮೇನಹಳ್ಳಿ ನಿವಾಸಿ ಶಿರೀಷಾ (23) ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಪಾಲಾಗಿರುವ ಪ್ರೇಮಿಗಳು.

ಮೂಲತಃ ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲ್ಲೂಕು, ಸೊಣ್ಣ ಗ್ರಾಮದ ತಿಮ್ಮಣ್ಣ ರಾಮಪ್ಪ ಬುಸರರೆಡ್ಡಿ ಪೊಲೀಸ್‌ ಪೇದೆಯಾಗಿ ಶಿಡ್ಲಘಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗುಡಿಬಂಡೆ ತಾಲ್ಲೂಕು, ಸೋಮೇನಹಳ್ಳಿ ನಿವಾಸಿ ಶಿರೀಷಾ ಬಿ.ಎ ಓದುತ್ತಿರುವ ವಿದ್ಯಾರ್ಥಿನಿ, ವಾಟ್ಸಾಪ್ ಗ್ರೂಪ್ ಮೂಲಕ ಪರಿಚಯವಾಗಿ ಪ್ರೇಮಿಗಳಾಗಿದ್ದಾರೆ.

ಈ ಜೋಡಿ ಇನ್ನೇನು ಆಗಸ್ಟ್ 7 ರಂದು ದೇವಸ್ಥಾನವೊಂದರಲ್ಲಿ ಮದುವೆ ಮಂಟಪಕ್ಕೆ ಹೋಗಿ ಮದುವೆ ಮಾಡಿಕೊಳ್ಳಬೇಕಿತ್ತು. ಅಷ್ಟರಲ್ಲಿ ಯೂಟರ್ನ್ ಹೊಡೆದ ಪೊಲೀಸ್‌ ಪೇದೆ ಮದುವೆ ಬೇಡಾ ಅಂದುಬಿಟ್ಟಿದ್ದಾನೆ. ಇದರಿಂದ ನೊಂದ ಆತನ ಪ್ರಿಯತಮೆ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದಕ್ಕೆ ಬೆದರಿದ ಪೊಲೀಸ್ ಪೇದೆ ಮಹಾಶಯ ಸಹಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸಿ, ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸೀಂ, ಡಿ.ವೈ.ಎಸ್ಪಿ ಮುರಳಿಧರ್‌ಸೇರಿದಂತೆ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಇಬ್ಬರಿಗೂ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version