ಬೆಂಗಳೂರು, (ಆಗಸ್ಟ್.27); ಕೆಲ ವರ್ಷಗಳಿಂದ ಡಿಜಿಟಲ್ ಮಾಧ್ಯಮಗಳು ಇತರ ಮಾಧ್ಯಮಗಳನ್ನು ಹಿಂದಿಕ್ಕಿ ದೊಡ್ಡ ಅಲೆ ಎಬ್ಬಿಸುತ್ತಿರುವುದನ್ನು ಗಮನಿಸಿರುವ ಸರ್ಕಾರ ಕರ್ನಾಟಕದಲ್ಲಿ ಡಿಜಿಟಲ್ ಮೀಡಿಯಾಗಳಿಗೂ ಜಾಹೀರಾತು ನೀಡಲು ಮುಂದಾಗಿದೆ.
ಇಲ್ಲಿಯವರೆಗೆ ಸರ್ಕಾರಿ ಜಾಹೀರಾತುಗಳನ್ನು ಕೇವಲ ಸಾಂಪ್ರದಾಯಿಕ ಮಾಧ್ಯಮಗಳಾದ ಪೇಪರ್, ಟಿವಿಗಳಿಗೆ ನೀಡಲಾಗುತ್ತಿತ್ತು. ಆದರೆ ಈಗ ಡಿಜಿಟಲ್ ಮೀಡಿಯಾಗಳ ಕ್ರಾಂತಿಕಾರಿ ನಡೆಗೆ ಮನ್ನಣೆ ನೀಡಿದ್ದು, ಜಾಹೀರಾತು ನೀಡಲು ಮುಂದಾಗಿದೆ.
ರಾಜ್ಯ ಸರ್ಕಾರದಿಂದ ಕರ್ನಾಟಕ ಡಿಜಿಟಲ್ ಮೀಡಿಯಾ ಜಾಹೀರಾತು ಮಾರ್ಗಸೂಚಿ-2024 ಪ್ರಕಟಿಸಿದ್ದು ಅದರಲ್ಲಿ ಮಾನದಂಡಗಳನ್ನು ಪೂರೈಸಿದವರಿಗೆ ಶೀಘ್ರವೇ ಸರ್ಕಾರಿ ಜಾಹೀರಾತು ನೀಡಲಿದೆ.
ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂಜೆ ಸಿಂತ ಅವರು ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ-2024 ಅನ್ನು ಪ್ರಕಟಿಸಿದ್ದಾರೆ.
ಡಿಜಿಟಲ್ ಮೀಡಿಯಾಗಳು ಸರ್ಕಾರಿ ಜಾಹೀರಾತು ಪಡೆಯಲು ಅರ್ಹತೆ, ಮಾನದಂಡಗಳು ಏನು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವ ಸಾಧ್ಯತೆಯಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….