ಚಿಕ್ಕಮಗಳೂರು, (ಆಗಸ್ಟ್.27): ಮನೆಯ ಶೆಡ್‌ನಲ್ಲಿದ್ದ ಗನ್ ಅನ್ನು ಕ್ಲೀನ್ ಮಾಡುವಾಗ ಮಿಸ್ ಫೈರ್ ಆಗಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕಳವಾಸೆ ಗ್ರಾಮದಲ್ಲಿ ನಡೆದಿದೆ.
ಮೃತನನ್ನು 47 ವರ್ಷದ ಅರುಣ್ ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಶೆಡ್ ತೆರಳಿದ್ದ ಅರುಣ್, ತನ್ನ ಗನ್ ಅನ್ನು ಒರೆಸಲು ಮುಂದಾದಾಗ ಈ ಗನ್ ಮಿಸ್ ಫೈರ್ ಆಗಿ ಬಲಗಣ್ಣಿಗೆ ಗುಂಡು ಹೊಕ್ಕಿದೆ. ಆಗ ಸ್ಥಳದಲ್ಲೇ ಬಿದ್ದು ಅರುಣ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆದರೆ ಇದು ಆತ್ಮಹತ್ಯೆಯೋ ಇಲ್ಲ ಅಕಸ್ಮಾತ್ ಆಗಿರುವ ಘಟನೆಯೋ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಳನ್ನು ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….