ಝಾನ್ಸಿ, (ಆಗಸ್ಟ್.26): ರೈಲ್ವೇ ಇಲಾಖೆಯ ಟಿಟಿಇ ಎಂದು ಹೇಳಿಕೊಂಡು ಟಿಕೆಟ್ ಪರಿಶೀಲಿಸಿ ಜೊತೆಗೆ ಪ್ರಯಾಣಿಕರಿಂದ ದಂಡ ವಸೂಲಿ ಮಾಡುತ್ತಿದ್ದ ಮಹಿಳೆಯನ್ನು ಆರ್‌ಪಿಎಫ್ ಪೊಲೀಸರು ಬಂಧಿಸಿರುವ ಘಟನೆ ಫಿರೋಜ್‌ಪುರ ಚಿಂದ್ವಾರ ಪಟಾಲ್‌ಕೋಟ್ ಎಕ್ಸ್‌ಪ್ರೆಸ್‌ನ ಸಾಮಾನ್ಯ ಬೋಗಿಯಲ್ಲಿ ನಡೆದಿದೆ.
ಶರ್ಟ್, ಪ್ಯಾಂಟ್, ಕೊರಳಲ್ಲಿ ರೈಲ್ವೆ ಗುರುತಿನ ಚೀಟಿ ಮತ್ತು ಗುಲಾಬಿ ಬಣ್ಣದ ಜಾಕೆಟ್‌ನೊಂದಿಗೆ ಮಹಿಳೆಯ ವರ್ತನೆ ಕೆಲವು ಪ್ರಯಾಣಿಕರಲ್ಲಿ ಅನುಮಾನ ಹುಟ್ಟಿಸಿದ್ದು, ನಕಲಿ ಟಿಟಿಇಗೆ ಗುರುತಿನ ಚೀಟಿ ಮತ್ತು ಜಾಬ್ ನಂಬರ್ ತೋರಿಸುವಂತೆ ಕೇಳಿದ್ದಾರೆ. ಆಗ ಆಕೆ ನಿರಾಕರಿಸಿದ್ದಾಳೆ. ಇದನ್ನೆಲ್ಲ ಪ್ರಯಾಣಿಕರು ವೀಡಿಯೊ ರೆಕಾರ್ಡ್ ಕೂಡ ಮಾಡಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಯಾಣಿಕರು ಈ ಬಗ್ಗೆ ಮಾಹಿತಿ ನೀಡಿದ್ದು, ರೈಲು ಝಾನ್ಸಿ ಸ್ಟೇಷನ್ ತಲುಪುವ ವೇಳೆಗೆ ರೈಲ್ವೆ ರಕ್ಷಣಾ ಪಡೆಯ ಪೊಲೀಸರು ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಘಟನೆಯ ವೀಡಿಯೊ ವೈರಲ್ ಆಗಿದ್ದು, ಈ ಉರಿಯುತ್ತಿರುವ ಸೆಕೆಯಲ್ಲಿ ಯಾರು ಇಂಥ ಜಾಕೆಟ್ ಧರಿಸುತ್ತಾರೆ, ಮೋಸ ಮಾಡುವವರಿಗೆ ಸ್ವಲ್ಪವಾದರೂ ಬುದ್ದಿ ಇರಬೇಕು ಎಂಬ ಪ್ರತಿಕ್ರಿಯೆಗಳು ಬಂದಿವೆ.
ಇನ್ನು ಮುಂದೆ ರೈಲಿನಲ್ಲಿ ಟಿಟಿಇಗಳನ್ನು ಕೂಡ ಪ್ರಯಾಣಿಕರು ಅನುಮಾನದಿಂದಲೇ ನೋಡುವಂತಾಗಿದೆ, ಯಾವ ಅಸಲಿ, ನಕಲಿ ಎಂದು ತಿಳಿದುಕೊಂಡೇ ವ್ಯವಹರಿಸಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….