ಬೆಂಗಳೂರು, (ಆಗಸ್ಟ್.26): ಟ್ರಾಫಿಕ್ ನಿಯಮ ಪಾಲಿಸದೇ ಧಿಮಾಕು ತೋರಿದ ಸ್ಕೂಟರ್ ಸವಾರನಿಗೆ ರಾಂಗ್ ರೂಟಲ್ಲಿ ಬರೋದಲ್ದೇ ಅಟಿಟ್ಯೂಡ್ ಬೇರೆ ತೋರಿಸ್ತೀಯಾ ಎಂದು ಸೈನಿಕ ಒಬ್ಬರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತ ಪೋಸ್ಟ್ ಒಂದನ್ನು ಯಶ್ ಗೌಡ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಗಂಗಮ್ಮ ಗುಡಿ ಸರ್ಕಲ್ ಸಿಗ್ನಲ್ ಬಳಿ ಸೈನಿಕನಿಂದ ಬಿತ್ತು ಪೆಟ್ಟು ಎಂದು ಬರೆದಿದ್ದಾರೆ.
ವೈರಲ್ ವಿಡಿಯೋದಲ್ಲಿ ಸ್ಕೂಟರ್ ಸವಾರ ರಾಂಗ್ ರೂಟಲ್ಲಿ ಬರೋದಿದ್ದಾನೆ. ಹೀಗೆ ಬಂದವನು ಕಾರ್ ಚಾಲಕನ ಮುಂದೆ ದಾರಿ ಬಿಡದೆ ಬಿಲ್ಡಪ್ ತೋರಿಸಿದ್ದಾನೆ.
ಇದನ್ನು ಗಮನಿಸಿದ ಯೋಧ ತಮ್ಮ ವಾಹನದಿಂದ ತಕ್ಷಣ ಇಳಿದು ಬಂದಿದ್ದು, ಬಿಲ್ಡಪ್ ಕೊಡ್ತಾ ಇದ್ದ ಬೈಕ್ ಸವಾರನ ತಲೆಗೊಂದು ಬಿಟ್ಟು “ರಾಂಗ್ ರೂಟಲ್ಲಿ ಬರೋದಲ್ದೇ ಅಟಿಟ್ಯೂಡ್ ಬೇರೆ ತೋರಿಸ್ತೀಯಾ….” ಎಂದು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವೇಳೆ ಸಂಚಾರಿ ಪೊಲೀಸ್ ಒಬ್ಬರು ಸ್ಥಳಕ್ಕೆ ಬಂದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….