ರಾಯಬಾಗ, (ಆಗಸ್ಟ್.26): ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಲ್ಲಿ ಉಳಿತಾಯ ಮಾಡಿಕೊಂಡ ರಾಯಬಾಗ ತಾಲೂಕಿನ ಸುಟ್ಟಟ್ಟ ಗ್ರಾಮದ ಮಹಿಳೆಯರು ಸಿಎಂ ಸಿದ್ದರಾಮಯ್ಯ ಅವರಿಗೆ ಒಳಿತಾಗಲಿ ಎಂದು ಮುತ್ತೆದೆಯರಿಗೆ ಉಡಿ ತುಂಬಿ ಹೋಳಿಗೆ ಊಟ ಹಾಕಿದ್ದಾರೆ.
ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಯಿಂದ ಮಹಿಳೆಯರ ಬದುಕು ಬದಲಾಗಿದೆ. ರಾಜ್ಯಕ್ಕೆ ಅನ್ನ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಳಿತಾಗಲಿ ಎಂದು ಸುಟ್ಟಟ್ಟಿ ಗ್ರಾಮದ ವೃದ್ಧೆ ಅಕ್ಕಾತಾಯಿ ಲಂಗೋಟಿ ಜತೆ ಸೇರಿದ ಹತ್ತಾರು ಮಹಿಳೆಯರು ಪಂಚ ಮುತೈದೆಯರಿಗೆ ಉಡಿ ತುಂಬಿ ಹೋಳಿಗೆ ಊಟ ಹಾಕಿಸಿದ್ದಾರೆ.
ಈ ಕುರಿತು ವೀಡಿಯೋ ಮೂಲಕ ತನ್ನ ಅಭಿಪ್ರಾಯ ಹಂಚಿ ಕೊಂಡ ಮಹಿಳೆ ಆಕ್ಕಾತಾಯಿ ಲಂಗೋಟಿ ಅವರು, ಗೃಹಲಕ್ಷ್ಮೀ ಯೋಜನೆಯಿಂದ ಈಗಾಗಲೇ 10 ಕಂತುಗಳಲ್ಲಿ ಹಣ ಜಮೆಯಾಗಿದೆ. ಅಷ್ಟೇ ಅಲ್ಲದೆ ಅನ್ನಭಾಗ್ಯದ ಅಕ್ಕಿಯಿಂದ ಮನೆ ನಡೆಸುವುದಕ್ಕೂ ಸಹಕಾರಿಯಾಗಿದೆ. ಸಿದ್ದರಾಮಯ್ಯ ಈ ರಾಜ್ಯಕ್ಕೆ ಒಳ್ಳೆಯದು ಮಾಡಿದ್ದಾರೆ. ಅವರಿಗೆ ಯಾವುದೇ ತೊಂದರೆಯಾಗದೆ ಅಧಿಕಾರ ನಡೆಸಲಿ, ನನಗೆ ದುಂಡವ್ವ ನೂಲಿ, ಲಕ್ಕವ್ವ ಹಟ್ಟಿಹೊಳಿ ಸಹಕಾರ ನೀಡಿದ್ದಾರೆ. ಸಿದ್ದರಾಮಯ್ಯ ನಮಗಾಗಿ ಇಷ್ಟೆಲ್ಲ ಯೋಜನೆ ಕೊಟ್ಟಿದ್ದಾರೆ.
ಅವರ ಹೆಸರಿನಲ್ಲಿ ಊಟ ಹಾಕಿಸುವುದು ನಮ್ಮ ಕರ್ತವ್ಯ ಎಂದು ಆಜ್ಜಿ ತನ್ನ ಸಿದ್ದರಾಮಯ್ಯ ಮೇಲಿನ ಪ್ರೀತಿ ಹಂಚಿಕೊಂಡರು.
ಸನ್ಮಾನ: ಅಜ್ಜಿಗೆ ರೇಷ್ಮೆ ಸೀರೆ ಕಳುಹಿಸಿದ ಹೆಬ್ಬಾಳ್ಳರ್ ಅಕ್ಷಾತಾಯಿ ಲಂಗೋಟಿ ಅವರಿಗೆ ಫೋನ್ ಕರೆ ಮಾಡಿ ಸಂತಸ ವ್ಯಕ್ತಪಡಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ‘ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದಿ, ನಿನ್ನ ಮಗಳಾದ ನನಗೆ ಯಾವಾಗ ಊಟ ಹಾಕಿಸುತ್ತೀ ಎಂದು ಕೇಳಿದರು. ಸಚಿವರ ಪ್ರಶ್ನೆಗೆ, ‘ಜರೂರೇ ಬಾ ನಿನಗೂ ಊಟ ಹಾಕಿಸ್ತೀನಿ, ನೀನೇ ನಮಗೆಲ್ಲ ಗೃಹಲಕ್ಷ್ಮೀ ಹಣ ಕೊಡುವ ಮನೆ ಮಗಳು.. ನಿನಗೆ ಇಲ್ಲ ಎನ್ನಲಾಗುವುದೇ’ ಎಂದು ಅಜ್ಜಿ ಹೇಳಿದ್ದಾರೆ. ಅಜ್ಜಿ ಮಾತುಗಳಿಂದ ಸಂತೋಷಗೊಂಡ ಸಚಿವೆ ಅಧಿಕಾರಿಗಳ ಮೂಲಕ ಅಜ್ಜಿಗೆ ರೇಷ್ಮೆ ಸೀರೆ ಕಳುಹಿಸಿಕೊಟ್ಟಿದ್ದು, ಶಾಲು ಹೊದಿಸಿ ಸನ್ಮಾನ ಮಾಡಿಸಿದ್ದಾರೆ..
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಹಣ ಕೂಡಿಟ್ಟು ಸಿದ್ದರಾಮಯ್ಯನವರ ಶ್ರೇಯಸ್ಸಿಗಾಗಿ ಅಕ್ಕಾತಾಯಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿ, ಐದು ಜನ ಮುತ್ತೈದೆಯರಿಗೆ ಉಡಿ ತುಂಬಿರುವುದು ಗೃಹಲಕ್ಷ್ಮಿ ಯೋಜನೆಯ ಸಾರ್ಥಕ ಕ್ಷಣಕ್ಕೆ ಮತ್ತೊಂದು ಉದಾಹರಣೆ. ತಾಯಿಯ ಜತೆ ಮಾತನಾಡಿ, ಅವರನ್ನು ಅಭಿನಂದಿಸಿ, ಗೌರವಿಸಿದ್ದೇನೆ. ಗೃಹಲಕ್ಷ್ಮೀ ಜಾರಿಗೆ ತಂದಿದ್ದು ಸಾರ್ಥಕವಾಯಿತು ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….