ಅಸ್ಸಾಂ, (ಆಗಸ್ಟ್.25): ಮುಖ್ಯ ಶಿಕ್ಷಕನೋರ್ವ ಶಾಲಾ ಸಮಯದಲ್ಲಿ ಕುಡಿದು ಫುಲ್ ಟೈಟ್ ಆಗಿ ತರಗತಿಯಲ್ಲಿ ನಿದ್ದೆಗೆ ಜಾರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಸ್ಸಾಂನ ಕಾಮಾಖ್ಯ ನಗರದಲ್ಲಿನ ಸರ್ಕಾರ ಶಾಲೆಯಲ್ಲಿ ನಡೆದಿರುವ ಘಟನೆ ಎನ್ನಲಾಗಿದ್ದು, ವಿಡಿಯೋದಲ್ಲಿ ಶಿಕ್ಷಕರ ಕುರ್ಚಿ ಮೇಲೆ ಮಲಗಿದ್ದಾರೆ.
ಆತನ ಸುತ್ತ ವಿದ್ಯಾರ್ಥಿಗಳು ಸೇರಿದ್ದು, ಪಾಠ ಮಾಡಿ ಎದ್ದೇಳಿ ಸರ್ ಎಂದು ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳು ಎಷ್ಟು ತಳ್ಳಾಡಿದರೂ ಕೂಡ ಆತನು ಎದ್ದೇಳುತ್ತಿಲ್ಲ. ಇತ್ತ ಅಧ್ಯಾಪಕರು ಕೂಡ ಪ್ರಯತ್ನಿಸಿದ್ದು ಶಿಕ್ಷಕನು ಕುಡಿದ ನಶೆಯಲ್ಲಿ ನಿದ್ರೆಗೆ ಜಾರಿದುದನ್ನು ಕಾಣಲಿಲ್ಲ.
ನೆಟ್ಟಿಗರು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಸ್ಥಿತಿ ಕಳಪೆಯಾಗಿದೆ. ಇಂತಹ ಶಿಕ್ಷಕರ ಬೇಜವಾಬ್ದಾರಿ ವರ್ತನೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು, ಬಹಿರಂಗವಾಗಿ ಇಂತಹ ಕೃತ್ಯಗಳಲ್ಲಿ ತೊಡಗುವ ಧೈರ್ಯ ಶಿಕ್ಷಕನಿಗೆ ಹೇಗೆ ಬಂತು ಎಂದು, ಇದು ಸರ್ಕಾರಗಳ ಬೇಜವಬ್ದಾರಿ ಎಂದು ಕಾಮೆಂಟ್‌ನಲ್ಲಿ ಬರೆದರೆ. ಇನ್ನು ಕೆಲವರು ಈ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….