ಸಾಗರ, (ಆಗಸ್ಟ್.24): ಕೊಳದಲ್ಲಿ ಈಜಲು ನೀರಿಗಿಳಿದಿದ್ದ ಯುವಕ ನೀರುಪಾಲಾಗಿರುವ ಘಟನೆ ಶುಕ್ರವಾರ ಸಾಗರ ತಾಲೂಕು ಆನಂದಪುರದಲ್ಲಿ ನಡೆದಿದೆ.
ಮೃತ ಯುವಕನನ್ನು ಬೆಂಗಳೂರು ಮೂಲದ ಎಂಜಿನಿಯರ್ 22 ವರ್ಷದ ಕುಶಾಲ್ ಎಂದು ಗುರುತಿಸಲಾಗಿದೆ.
ಸಾಗರ ತಾಲೂಕಿನ ಆನಂದಪುರ ಸಮೀಪದ ಮಹಾತಿನ ಮಠದ ಚಂಪಕ ಸರಸು ಕೊಳದಲ್ಲಿ ಈಜಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ.
ಬೆಂಗಳೂರಿನಿಂದ ಸಾಯಿ ರಾಮ್, ಯಶ್ವಂತ್ ಎಂಬ ಸ್ನೇಹಿತರೊಂದಿಗೆ ಕುಶಾಲ್ ಪಿಕ್ನಿಕ್‌ಗೆ ಬಂದಿದ್ದ. ತೀರ್ಥಹಳ್ಳಿಯಲ್ಲಿ ಸುತ್ತಾಡಿದ ಬಳಿಕ ಆನಂದಪುರ ಸಮೀಪದ ಚಂಪಕ ಸರಸು ಪ್ರವಾಸಿ ಸ್ಥಳಕ್ಕೆ ಬಂದಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಯುವಕರು ಕೊಳದಲ್ಲಿ ಈಜಾಡುತ್ತಿರುವುದನ್ನು ಕಂಡು ಕುಶಾಲ್ ಕೂಡ ನೀರಿಗೆ ಇಳಿದಿದ್ದಾನೆ. ನೀರಿನಲ್ಲಿ ಮುಳುಗಿದ ಆತ ಕೆಲ ಸಮಯವಾದರೂ ಮೇಲೆ ಬಾರದಿದ್ದನ್ನು ಕಂಡು ಸ್ನೇಹಿತರು ಆನಂದಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಅಗ್ನಿಶಾಮದಳದ ಸಿಬ್ಬಂದಿ ಯೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ.
ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….