ಮೈಸೂರು, (ಆಗಸ್ಟ್.23); ಪ್ರೀತಿಯ ವೈಫಲ್ಯದಿಂದ ಬೇಸತ್ತ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಡಜನ ಗ್ರಾಮದಲ್ಲಿ ನಡೆದಿದೆ.
ಮೃತನನ್ನು 28 ವರ್ಷದ ಮಧುಸೂಧನ್ ಎಂದು ಗುರುತಿಸಲಾಗಿದೆ.
ಕಳೆದ ಕೆಲ ತಿಂಗಳಿಂದ ಮಧುಸೂಧನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆದರೆ ಈ ವಿಚಾರ ಯುವತಿಯ ಮನೆಯಲ್ಲಿ ತಿಳಿದು ಆಕೆಗೆ ಬುದ್ಧಿವಾದ ಹೇಳಿದ್ದಾರೆ.
ಮನೆಯವರ ಮಾತಿಗೆ ಕಟ್ಟುಬಿದ್ದು, ಯುವತಿ ಮಧುಸೂಧನ್ ನೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದಾಳೆ. ಇದರಿಂದ ಮನನೊಂದ ಯುವಕ ಇಲಿ ಔಷಧಿಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆದರೆ ಅದರಿಂದ ಏನು ಆಗದ ಹಿನ್ನೆಲೆ ಮತ್ತೆ ಮೂರು ಇಲಿ ಔಷಧಿಯನ್ನು ತಂದು ಆರೇಂಜ್ ಜ್ಯೂಸ್ ಗೆ ಮಿಶ್ರಣ ಮಾಡಿ ಕುಡಿದಿದ್ದಾನೆ.
ಅಲ್ಲದೆ ಇದೆಲ್ಲವನ್ನೂ ಮಧುಸೂಧನ್ ವಿಡಿಯೋವನ್ನು ಕೂಡ ಮಾಡಿದ್ದಾನೆ. ವಿಡಿಯೋದಲ್ಲಿ ತನ್ನ ಸಾವಿಗೆ ಯುವತಿ ಹಾಗೂ ಆಕೆಯ ಮನೆಯವರೇ ಕಾರಣ ಎಂದು ಹೇಳಿದ್ದಾನೆ.
ವಿಷಯ ತಿಳಿದ ಕೂಡಲೇ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಧುಸೂಧನ್ ಸಾವನಪ್ಪಿದ್ದಾನೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….