ಚತ್ತೀಸ್ ಗಢ, (ಆಗಸ್ಟ್.21): ರಾಯ್ ಪುರದ ವ್ಯಕ್ತಿಯೊಬ್ಬರು ಓಲಾ ಶೋರೂಂನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ್ದರು. ಆದರೆ ಸ್ಕೂಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತಾಂತ್ರಿಕ ದೋಷದ ಪರಿಹಾರಕ್ಕಾಗಿ ಶೋರೂಂ ಅನ್ನು ಸಂಪರ್ಕಿಸಿದಾಗ ಸಮರ್ಪಕ ಪರಿಹಾರ ನೀಡಲು ವಿಫಲವಾಗಿತ್ತು. ಇದರಿಂದ ಬೇಸತ್ತ ವ್ಯಕ್ತಿ ಯಾರೂ ಊಹಿಸದ ರೀತಿಯಲ್ಲಿ ಶೋರೂಂ ಮುಂಭಾಗ ಪ್ರತಿಭಟನೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ!
ಓಲಾ ಎಲೆಕ್ನಿಕ್ ಕಂಪನಿಯ ಶೋರೂಂನ ಹೊರಗೆ ಮಾಲೀಕ ತನ್ನ ಸ್ಕೂಟರ್ ಅಣಕು ಶವಸಂಸ್ಕಾರ ಮಾಡಿ ವಿಶಿಷ್ಟವಾಗಿ ಪ್ರತಿಭಟಿಸಿದ ಘಟನೆ ನಡೆದಿದೆ.
ಈ ವಿಶಿಷ್ಟ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳಪೆ ಗುಣಮಟ್ಟದ ಸ್ಕೂಟರ್ ಮಾರಾಟ ಹಾಗೂ ಕಂಪನಿಯಿಂದ ಸರಿಯಾದ ಬೆಂಬಲ ಸಿಗದ ಬೆನ್ನಲ್ಲೇ ಮಾಲೀಕ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಓಲಾ ಎಲೆಕ್ನಿಕ್ ಸ್ಕೂಟರ್‌ನಲ್ಲಿ ಪದೇ ಪದೇ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ರೊಚ್ಚಿಗೆದ್ದ ಮಾಲೀಕ ಸ್ಕೂಟರ್ ಅನ್ನು ರಿಕ್ಷಾದ ಮೇಲೆ ಶೋರೂಮ್‌ಗೆ ತೆಗೆದುಕೊಂಡು ಬಂದಿದ್ದಾರೆ. ಅದಾದ ಬಳಿಕ ‘ಲುಟ್ ಗಯೇ’ ಎಂಬ ಬಾಲಿವುಡ್ ಹಾಡಿನ ರೀತಿಯಲ್ಲೇ ‘ಲುಟ್ ಗಯೇ ಹಮ್ ಓಲಾ ಲೇ ಕರ್ ಕೆ’ ಎಂದು ಹಾಡಿ ಪ್ರತಿಭಟನೆ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….