ಬೆಂಗಳೂರು, (ಆಗಸ್ಟ್.21); ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ಪ್ರಾಸಿಕ್ಯೂಷನ್ ಟೆನ್ಷನ್ ಶುರುವಾಗಿದೆ. ಬಳ್ಳಾರಿಯಲ್ಲಿ ಗಣಿ ಗುತ್ತಿಗೆ ಅಕ್ರಮವಾಗಿ ನೀಡಿದ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ ಇಂದು 11ಗಂಟೆಗೆ ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ.
ಈ ಸಂಬಂಧ ಚಾರ್ಜ್‌ಶೀಟ್ ಸಲ್ಲಿಕೆಗೆ ಲೋಕಾಯುಕ್ತ ಎಸ್‌ಐಟಿ ರಾಜ್ಯಪಾಲರ ಅನುಮತಿ ಕೇಳಿದೆ. ಲೋಕಾಯುಕ್ತ ಎಸ್‌ಐಟಿ ನಡಯಿಂದ ಕುಮಾರಸ್ವಾಮಿ ಪುಲ್ ಟೆನ್ಶನ್ ಆಗಿದ್ದಾರೆ. ಪ್ರಕರಣದಿಂದ ಹೊರಬರೋದು ಹೇದೆ ಅಂತ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ಇಂದು ಕುಮಾರಸ್ವಾಮಿ ಅವರು ಜೆಡಿಎಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದಿರುವುದು ಕುತೂಹಲ ಕೆರಳಿಸಿದೆ.
ಕುಮಾರಸ್ವಾಮಿ ಅವರ ವಿರುದ್ಧದ ಹಳೆಯ ಪ್ರಕರಣ ಇದಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವ ಬೆನ್ನಲ್ಲೇ ಲೋಕಾಯುಕ್ತ 2ನೇ ಬಾರಿಗೆ ಎಚ್ ಡಿಕೆ ವಿರುದ್ಧ ಪ್ರಾಸಿಕ್ಯೂಷನ್ಗೆ ಪತ್ರ ಬರೆದಿದೆ.
ಕಾನೂನು ಬಹಿರವಾಗಿ ಗಣಿಗಾರಿಕೆ ಕಂಪನಿಯೊಂದಕ್ಕೆ ಜಮೀನು ನೀಡಿರುವ ಸಂಬಂಧ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಹಾಗೂ ಆ ಮೂಲಕ ಆರೋಪಪಟ್ಟಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಲೋಕಾಯುಕ್ತ ವಿಶೇಷ ತನಿಖಾದಳದ ಅಧಿಕಾರಿಗಳು ಮತ್ತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
2007ರಲ್ಲಿ ಸಿಎಂ ಆಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಗಣಿ ಕಂಪನಿಯೊಂದಕ್ಕೆ 550 ಎಕರೆ ಜಾಗ ನೀಡಿದ್ದರು. ಆದರೆ ಆ ಕಂಪನಿಯೇ ಅಸ್ತಿತ್ವದಲ್ಲೇ ಇಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಮೇಲೆ ಆರೋಪವಿದೆ, ಸಾಯಿವೆಂಕಟೇಶ್ವರ ಮಿನರಲ್ಸ್ ಗೆ ಗುತ್ತಿಗೆ ಕೊಟ್ಟಿದ್ದಾರೆ. 23/11/23 ರಂದು ಲೋಕಾಯುಕ್ತರು ಪ್ರಾಸಿಕ್ಯೂಷನ್ ಗೆ ಪರ್ಮಿಶನ್ ಕೇಳಿದ್ದರು, ಈಗ ಮತ್ತೆ ಅನುಮತಿ ಕೇಳಿದ್ದಾರೆ.
ಕಳೆದ ತಿಂಗಳು 26ರಂದು ನನ್ನಮೇಲೆ ಟಿ.ಜೆ. ಅಬ್ರಹಾಂ ಕೊಡ್ತಾರೆ, ಅಂದೇ ನನಗೆ ನನಗೆ ಶೋಕಾಸ್ ನೋಟಿಸ್ ಕೊಡ್ತಾರೆ. ಆದರೆ ಶಶಿಕಲಾ ಜೊಲ್ಲೆ ವಿರುದ್ಧ ದೂರಿದೆ, ನಿರಾಣಿ ಮೇಲೆ ಕೊಡಲಿಲ್ಲ, ಜನಾರ್ದನ ರೆಡ್ಡಿಮೇಲೆ ಪ್ರಾಸಿಕ್ಯೂಷನ್ಗೆ ಕೊಡಲಿಲ್ಲ. ರಾಜ್ಯಪಾಲರ ಪೋಸ್ಟ್ ಸಂವಿಧಾನದದ್ದು, ಅವರು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಕೆಲಸ ಮಾಡಲಿ. ಕೇಂದ್ರದ ಪ್ರತಿನಿಧಿಯಾಗಿ ಮಾಡಬಾರದು ಎಂದು ಕಿಡಿಕಾರಿದ್ದಾರೆ. (ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….