ಚಾಮರಾಜನಗರ, (ಆಗಸ್ಟ್.19); ಸಾಲಬಾಧೆ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲದ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದ ಬೀದಿಯಲ್ಲಿ ವಾಸವಿದ್ದ 55 ವರ್ಷದ ಪಿ.ಆರ್. ನಾಗೇಶ್ ಹಾಗೂ 44 ವರ್ಷದ ಸತ್ಯಲಕ್ಷ್ಮೀ ಸಾಲಬಾಧೆ ತಾಳಲಾರದೆ ಭಾನುವಾರ ನಸುಕಿನಲ್ಲಿ ನೇಣಿಗೆ ಶರಣಾಗಿದ್ದಾರೆ.
ಸಾಯುವ ಮುನ್ನ ಮಗ ಗಣೇಶ್ ಮತ್ತು ಆತ್ಮೀಯರಿಗೆ ವಾಟ್ಸಪ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಕುರುಕುರೆ ಏಜೆನ್ಸಿ ಪಡೆದು ಕೊಂಡಿದ್ದ ನಾಗೇಶ್, ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಖಾಸಗಿ ಹಣಕಾಸು ಕಂಪನಿಯಲ್ಲಿ ಮನೆ ಅಡಮಾನವಿಟ್ಟು ಸಾಲ ಪಡೆದಿದ್ದರು. ಜೊತೆಗೆ ಕೈ ಸಾಲವಿತ್ತು ಎನ್ನಲಾಗಿದೆ.
ಕೊಳ್ಳೇಗಾಲ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಕುರಿತಂತೆ ನಾಗೇಶ್ ಅವರ ಪುತ್ರ ಗಣೇಶ್ ಕೊಳ್ಳೇಗಾಲ ಠಾಣೆಗೆ ದೂರು ಕೊಟ್ಟಿದ್ದು 13 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ಕಿರುಕುಳ ಕೊಟ್ಟು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ದೂರಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….