ದೊಡ್ಡಬಳ್ಳಾಪುರ,(ಆಗಸ್ಟ್.19); ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಇಂದು ಮಧ್ಯಾಹ್ನ ಮಳೆ ಸುರಿದಿದ್ದು, ಹಲವೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದೇ ನೀರು ರಸ್ತೆಯಲ್ಲೇ ಹರಿಯಿತ್ತಿದೆ.
ನಗರದಲ್ಲಿ ಸತತವಾಗಿ ಸುಮಾರು 45 ನಿಮಿಷಗಳ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಯಿತು.
ಗಾಂಧಿ ವೃತ್ತದಿಂದ ಡಿಕ್ರಾಸ್ಗೆ ಸಾಗುವ ರಸ್ತೆ, ಚೈತನ್ಯ ನಗರ, ತಾಲೂಕು ಕಚೇರಿ ಮುಂಭಾಗ. ರಂಗಪ್ಪ ಸರ್ಕಲ್, ಅರಳು ಮಲ್ಲಿಗೆ ಸರ್ಕಲ್ ಬಳಿ ಮಳೆ ನೀರು ಚರಂಡಿಗೆ ಸಾಗದೆ ರಸ್ತೆಯಲ್ಲಿಯೇ ನಿಂತು ವಾಹನ ಸವಾರರಿಗೆ ಅಡಚಣೆ ಉಂಟಾಗುತ್ತಿದೆ..
ನಗರದಲ್ಲಿ ಸುರಿಯುವ ಸಣ್ಣ ಮಟ್ಟದ ಮಳೆಗೆ ಹಲವೆಡೆ ಜನರು ತೊಂದರೆ ಎದುರಿಸುವ ಸನ್ನಿವೇಶ ಸೃಷ್ಟಿ ಸಾಗುತ್ತಿದೆ.
ತೇರಿನ ಬೀದಿ ರಾಜಕಾಲುವೆ ತುಂಬಿ ರಸ್ತೆಗೆ ತ್ಯಾಜ್ಯ ನೀರು ಹರಿದರೆ, ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್ನಲ್ಲಿ ನೀರು ನಿಲ್ಲುತ್ತಿದೆ, ಕುಚ್ಚಪ್ಪನ ಪೇಟೆ, ಸಂಜಯನಗರ, ರಂಗಪ್ಪ ಸರ್ಕಲ್, ತಾಲೂಕು ಕಚೇರಿ ಮುಂಭಾಗದ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಒಳಚರಂಡಿ ನೀರು ತುಂಬಿ ರಸ್ತೆ ಹರಿಯುವ ಕಾರಣ ನಗರವಾಸಿಗಳು ತೀವ್ರ ತೊಂದರೆ ಎದುರಿಸುವಂತಾಗಿದೆ.
ಇನ್ನೂ ಮಳೆಗಾಲದ ಮುನ್ನವೇ ಸೂಕ್ತ ಮುನ್ನೆಚ್ಚರಿಕೆ ಕ್ರಮವನ್ನು ನಗರಸಭೆ ಅಧಿಕಾರಿಗಳು ಕೈಗೊಳ್ಳದ ಕಾರಣ ನಗರದ ಜನತೆ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಅಧಿಕಾರಿಗಳು, ಜನಪ್ರತಿನಿದಿಗಳು ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ವೈರಲ್ ವಿಡಿಯೋಗಳನ್ನು ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….