ನೆಲಮಂಗಲ, (ಆಗಸ್ಟ್.18); ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಾ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡುತ್ತಿದ್ದ ಪುಂಡರನ್ನು ಸಾರ್ವಜನಿಕರು ಅಡ್ಡಗಟ್ಟಿ ದ್ವಿಚಕ್ರವಾಹನಗಳನ್ನು ಜಖಂಗೊಳಿಸಿ, ಬುದ್ದಿ ಕಲಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ವಿವರ: ಆ.15ರಂದು ಸ್ವಾತಂತ್ರ ದಿನಾಚರಣೆಯಂದು ಬೆಂಗಳೂರು ಕಡೆಯಿಂದ ತುಮ ಕೂರು ಕಡೆಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಚಲಿ ಸುತ್ತಿದ್ದ ನಾಲ್ವರ ಪುಂಡರ ಗುಂಪು ವೀಲ್ಹಿಂಗ್ ಮಾಡುತ್ತಿದ್ದರು. ಹೆದ್ದಾರಿಯ ಅಡಕಮಾರನಹಳ್ಳಿ ಸಮೀಪ ಮೇತುವೆ ಬಳಿ ಇದನ್ನು ಗಮನಿಸಿದ ಪ್ರಯಾಣಿಕರು, ವೀಲ್ಹಿಂಗ್ ಮಾಡುತ್ತಿದ್ದ ಪುಂಡರನ್ನು ಅಡ್ಡಗಟ್ಟಿ ಪ್ರಶ್ನಿಸಿದ್ದಾರೆ.
ಈ ವೇಳೆ ಹೆದರಿದ ಪುಂಡರು ಪರಾರಿಯಾಗಿದ್ದು, ಪ್ರಯಾಣಿಕರು ಪುಂಡರಿಗೆ ಬುದ್ದಿ ಕಲಿಸುವ ಸಲುವಾಗಿ ಅವರು ಬಿಟ್ಟುಹೋಗಿದ್ದ ದ್ವಿಚಕ್ರ ವಾಹನಗಳನ್ನು ಹೆದ್ದಾರಿ ಮೆಲ್ಲೇತುವೆ ಮೇಲಿಂದ ಕೆಳಗೆಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಕಲಿ ನಂಬರ್‌ಪ್ಲೇಟ್: ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಪುಂಡರ ಹಾವಳಿ ಮಾಹಿತಿ ಪಡೆದುಕೊಂಡ ಡಿವೈಎಸ್ಪಿ ಜಗದೀಶ್ ಎಸೆದ ಬೈಕ್ ಗಳ ತನಿಖೆಗೆ ತಂಡ ರಚಿಸಿದ್ದು, ದ್ವಿಚಕ್ರವಾಹನಗಳಿಗೆ ಅಳವಡಿಸಿದ್ದ ನಂಬರ್‌ಪ್ಲೇಟ್‌ಗಳು ಬದಲಿಸಿ ನಕಲಿ ನಂಬರ್‌ಗಳನ್ನು ಅಳವಡಿಸಿಕೊಂಡು ಈ ಕೃತ್ಯಕ್ಕೆ ಮುಂದಾಗಿದ್ದರೆಂದು ತಿಳಿಸಿದ್ದಾರೆ.
ನೆಲಮಂಗಲ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರು ಹೆದ್ದಾರಿ ಮೇಲಿನಿಂದ ಕೆಳಗೆ ಎಸೆದಿದ್ದ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….