ಹರಿತಲೇಖನಿ ದಿನಕ್ಕೊಂದು ಕಥೆ: ಶಿಕ್ಷಣ ಹೇಗಿರಬೇಕು..?

ತರುಣರಿಗೆ ಕಡ್ಡಾಯವಾಗಿ ಸೈನ್ಯದ ತರಬೇತಿಯೊಂದಿಗೆ ಸಂತರ, ದೇಶಭಕ್ತರ ಹಾಗೂ ಕ್ರಾಂತಿಕಾರರ ಜೀವನ ಚರಿತ್ರೆಗಳನ್ನು ಅಧ್ಯಯನಕ್ಕಾಗಿ ನೀಡಿದಲ್ಲಿ ಅವರಿಗೆ ದೇಶಕ್ಕಾಗಿ ಜೀವಿಸಲು ಹಾಗೂ ಪ್ರಾಣಾರ್ಪಣೆ ಮಾಡಲು ಸ್ಪೂರ್ತಿ ದೊರೆಯುತ್ತದೆ.

ಶಿಕ್ಷಣವು ಹೇಗಿರಬೇಕು ಎಂಬುದರ ವಿಚಾರ ಹಾಗೂ ಪೂರಕ ಕೃತಿ ಅವಶ್ಯಕವಾಗಿದೆ. ಭಾರತದಲ್ಲಿ ಆಗಿಹೋದ ಕ್ರಾಂತಿಕಾರರು, ಸಂತರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಹುತಾತ್ಮರಾದ ದೇಶಭಕ್ತರು, ಶಾಸ್ತ್ರಜ್ಞರು, ಸಮಾಜೋದ್ಧಾರಕರು, ಸಮಾಜದ ಉತ್ಥಾನಕ್ಕಾಗಿ ಸಂಘಟನೆಯನ್ನು ನಿರ್ಮಿಸಲು ತಮ್ಮ ಜೀವನವನ್ನು ಸವೆಸಿದವರು, ಇವರೆಲ್ಲರ ಜೀವನ ಚರಿತ್ರೆಯು ಯುವಪೀಳಿಗೆಯ ಹಾಗೂ ಮಕ್ಕಳ ಪಠ್ಯಕ್ರಮದ ಭಾಗವಾಗಲೇಬೇಕು.

ಮಕ್ಕಳಿಗೆ ಕಡ್ಡಾಯವಾಗಿ 2 ವರ್ಷಗಳ ಸೈನ್ಯದ ತರಬೇತಿ ಇರಬೇಕು. ಸಂತರು ರಚಿಸಿದ ಗ್ರಂಥಗಳನ್ನು ಮಕ್ಕಳ ಅಧ್ಯಯನದಲ್ಲಿ ಸೇರಿಸಬೇಕು. ತರುಣರಿಗೆ ಭಗತಸಿಂಗ್, ರಾಜಗುರು, ಸುಖದೇವ, ವಾಸುದೇವ ಬಲವಂತ ಫಡಕೆ ಎಲ್ಲ ಕಥೆಗಳು ತಿಳಿದಿರಬೇಕು.

ಜೀವನವು ಶುದ್ಧ ಆಚರಣೆಯ, ಪ್ರಾಮಾಣಿಕ, ಪಾರದರ್ಶಕ, ಶ್ರಮಿಕ ಹಾಗೂ ದೇಶಭಕ್ತಿಯದ್ದಾಗಿರಬೇಕು. ದೇಶಕ್ಕಾಗಿ ಜೀವಿಸುವ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಪ್ರೇರಣೆಯನ್ನು ನೀಡುವ ಶಿಕ್ಷಣದಿಂದಲೇ ದೇಶವು ವೈಭವಶಾಲಿಯಾಗುವುದು.

ಇತ್ತೀಚಿನ ಮಕ್ಕಳು ಹಾಗೂ ತರುಣರಿಗೆ ಪಂಚತಂತ್ರ, ರಾಮಾಯಣ, ಮಹಾಭಾರತ ಹಾಗೂ ಕ್ರಾಂತಿವೀರರ ಕಥೆಗಳು ತಿಳಿದಿಲ್ಲ; ಏಕೆಂದರೆ ಅವರಿಗೆ ಈ ಬಗ್ಗೆ ಅವರ ಪಾಲಕರು ಹೇಳಿರುವುದಿಲ್ಲ. ಹ್ಯಾರಿ ಪಾಟರ ಓದಿ ಸಂಸ್ಕಾರಯುತ ಪೀಳಿಗೆ ನಿರ್ಮಾಣವಾಗುವುದಿಲ್ಲ. ಸ್ವಾತಂತ್ರ್ಯಾನಂತರದ ೬೦ ವರ್ಷಗಳಲ್ಲಿ ಸಂಸ್ಕಾರಯುತ ಪೀಳಿಗೆಯನ್ನು ನಿರ್ಮಿಸುವಲ್ಲಿ ವಿಫಲರಾಗಿರುವುದು ಒಂದು ಲಜ್ಜಾಸ್ಪದ ಸಂಗತಿಯಾಗಿದೆ. ಉಚ್ಛಶಿಕ್ಷಿತರಿರುವುದು ಹಾಗೂ ಸಂಸ್ಕಾರಯುತರಾಗಿರುವುದರ ನಡುವೆ ವ್ಯತ್ಯಾಸವಿದೆ !

ಇಂದಿನ ತರುಣ ವಿದ್ಯಾರ್ಥಿಗಳು ವಿನಾಶಕಾರಿಯಾಗಿದ್ದಾರೆ. ಅವರನ್ನು ದುಷ್ಟಪ್ರವೃತ್ತಗಳಿಂದ ಪರಾವೃತ್ತಗೊಳಿಸಲು ಜಗತ್ತಿನಾದ್ಯಂತ ಶಿಕ್ಷಣತಜ್ಞರು ಅಭ್ಯಾಸಕ್ರಮದಲ್ಲಿ ಮೌಲ್ಯಶಿಕ್ಷಣದ ಅವಶ್ಯಕತೆಯನ್ನು ಹೇಳಿದ್ದಾರೆ. ‘ಮೌಲ್ಯಶಿಕ್ಷಣದಿಂದ ಅವರಲ್ಲಿನ ಅಸುರೀ ಪ್ರವೃತ್ತಿಯ ನಾಶವಾಗಿ ಅವರು ಆದರ್ಶ ನಾಗರೀಕರಾಗುವರು’ ಎಂಬುದು ಶಿಕ್ಷಣತಜ್ಞರ ಅಭಿಪ್ರಾಯವಾಗಿದೆ.

ಜೀವನನಿರ್ಮಿತಿ, ಮಾನವನಿರ್ಮಿತಿ, ಶೀಲ ಹಾಗೂ ಚಾರಿತ್ರ್ಯದ ನಿರ್ಮಿತಿ ಹಾಗೂ ವಿಚಾರಗಳ ಏಕರೂಪತೆ ಈ ಐದು ವಿಷಯಗಳ ಬಗ್ಗೆ ಶಿಕ್ಷಣ ದೊರೆತು ಅದರ ಪಾಲನೆಯಾದರೆ ಆ ವ್ಯಕ್ತಿಯು ಆದರ್ಶ ವ್ಯಕ್ತಿಯಾಗುತ್ತಾನೆ. ಸದ್ಯದ ಶಿಕ್ಷಣವೆಂದರೆ ಮಾಹಿತಿಯನ್ನು ತಲೆಯಲ್ಲಿ ತುಂಬಿಸುವುದಾಗಿದೆ.

ತಲೆಯಲ್ಲಿ ಉಳಿದ ಈ ಮಾಹಿತಿಯು ಪಚನವಾಗದಿರುವುದರಿಂದ ಜೀವನದುದ್ದಕ್ಕೂ ಗೊಂದಲ ನಿರ್ಮಾಣವಾಗುತ್ತಿರುತ್ತದೆ. ನಮಗೆ ಜೀವನ, ಮಾನವ, ಶೀಲ ಹಾಗೂ ಚಾರಿತ್ರ್ಯವನ್ನು ನಿರ್ಮಿಸುವ ಹಾಗೂ ವಿಚಾರಗಳನ್ನು ಸಮ್ಮಿಲಿತಗೊಳಿಸುವ ಶಿಕ್ಷಣ ಬೇಕು. ನೀವು ಕೇವಲ ಈ ಐದು ವಿಷಯಗಳನ್ನು ಜೀರ್ಣಿಸಿ ಅದನ್ನು ಪಾಲಿಸಿದರೆ ನೀವು ಸಂಪೂರ್ಣ ಗ್ರಂಥಾಲಯವನ್ನು ಅರಗಿಸಿಕೊಂಡಿರುವ ವ್ಯಕ್ತಿಯಂತೆ ಹೆಚ್ಚು ಶಿಕ್ಷಿತರಾಗುವಿರಿ. ಈ ಶಿಕ್ಷಣವು ರಾಷ್ಟ್ರದ ಆದರ್ಶಗಳನ್ನು ಎತ್ತಿ ಹಿಡಿಯುವುದು ಹಾಗೂ ಬಹುತಾಂಶ ಅದು ಪ್ರಾಯೋಗಿಕವಾಗಿರುತ್ತದೆ.

ಚಾರಿತ್ರ್ಯವಂತ ತರುಣ ಪೀಳಿಗೆಯ ನಿರ್ಮಿತಿಗಾಗಿ ತರುಣರಿಗೆ ಸತ್ಯ, ಪ್ರಾಮಾಣಿಕತೆಯಿರುವ ಹಾಗೂ ಪಾರದರ್ಶಕ ವ್ಯವಹಾರವಿರುವ ಶಿಕ್ಷಣ ದೊರೆತಾಗಲೇ ಆ ಪೀಳಿಗೆಯು ಸುಧಾರಿಸುತ್ತದೆ ಹಾಗೂ ದೇಶವು ವೈಭವಶಾಲಿಯಾಗುತ್ತದೆ.

ಇಂದು ದೇಶದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ, ಬೆಲೆ ಏರಿಕೆ, ಜನಸಂಖ್ಯಾಸ್ಫೋಟ, ನಿರುದ್ಯೋಗ ಹಾಗೂ ನೀರಿನ ಕೊರತೆಯಂತಹ ಸಮಸ್ಯೆಗಳು ಅರಾಜಕತೆಯನ್ನು ನಿರ್ಮಿಸಬಲ್ಲವು. ಈ ಸಮಸ್ಯೆಗಳಿಗೆ ಚಾರಿತ್ರ್ಯ ನಿರ್ಮಿಸುವ ಶಿಕ್ಷಣವೇ ಉತ್ತರವಾಗಿದೆ.

ನೈತಿಕ ಮೌಲ್ಯದ ಸಂವರ್ಧನೆಯಾಗಲು ಮೇಲು ಮೇಲಿನ ಉಪಾಯಯೋಜನೆಗಳು ಸಾಲದು. ಇದಕ್ಕಾಗಿ ಎಲ್ಲರಿಗೂ ಧರ್ಮಶಿಕ್ಷಣವನ್ನು ನೀಡುವುದು ಅವಶ್ಯಕವಾಗಿದೆ. ಧರ್ಮಪಾಲನೆಯಿಂದ ಸಮಾಜದ ಸತ್ತ್ವಗುಣವು ವೃದ್ಧಿಸುತ್ತದೆ. ಇದರಿಂದ ನೈತಿಕ ಮೌಲ್ಯಗಳನ್ನು ಜೋಪಾನ ಮಾಡಲು ಆತ್ಮಬಲ ದೊರೆಯುತ್ತದೆ. ಈ ಆತ್ಮಬಲವನ್ನು ಇಂದಿನ ಶಿಕ್ಷಣ ಪದ್ಧತಿಯ ನೀಡಲಾರದು. ಸಮಾಜದ ಸತ್ತ್ವಗುಣ ವೃದ್ಧಿಯಾಗುವುದರಿಂದಲೇ ಎಲ್ಲ ಕ್ಷೇತ್ರಗಳಲ್ಲಿ ಅಧಃಪತನವನ್ನು ನಿಲ್ಲಿಸಲು ಸಾಧ್ಯವಾಗುತ್ತದೆ.

ಕೃಪೆ: ಹಿಂದೂ ಜಾಗೃತಿ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣ..!| House construction

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣ..!| House construction

ವಾಸಿಸಲು ಮನೆ ಇಲ್ಲದ ಕಾರಣ ಧರ್ಮಸ್ಥಳದಿಂದ ಮನೆ ನಿರ್ಮಿಸಿಕೊಡಲಾಗುತ್ತಿದೆ House construction

[ccc_my_favorite_select_button post_id="99191"]
ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್ – VIDEO ನೋಡಿ

ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್

ಇತ್ತೀಚೆಗೆ ನೀತಾ ಅಂಬಾನಿ ಅವರು ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು. Video

[ccc_my_favorite_select_button post_id="99152"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ಮತ್ತೆ ದರ್ಶನ್ ಬೆನ್ನಿಗೆ ಬಿದ್ದ ಖಾಸಗಿ ಸುದ್ದಿ ವಾಹಿನಿಗಳು..!: ಸುಳ್ಳು ಸುದ್ದಿ ಮಾಡಬೇಡಿ ಎಂದು ಅಭಿಮಾನಿಗಳ ಆಕ್ರೋಶ| Darshan

ಮತ್ತೆ ದರ್ಶನ್ ಬೆನ್ನಿಗೆ ಬಿದ್ದ ಖಾಸಗಿ ಸುದ್ದಿ ವಾಹಿನಿಗಳು..!: ಸುಳ್ಳು ಸುದ್ದಿ ಮಾಡಬೇಡಿ

ಕೆಲ ಖಾಸಗಿ ಸುದ್ದಿವಾಹಿನಿಗಳ ಬಗ್ಗೆ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ, ಗೃಹಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ Darshan

[ccc_my_favorite_select_button post_id="99206"]
Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಈ ಸರಣಿ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತವಾಗಿದೆ. Accident

[ccc_my_favorite_select_button post_id="99186"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]