ದೊಡ್ಡಬಳ್ಳಾಪುರ, (ಆಗಸ್ಟ್.18): ಟೋಲ್ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಸರಣಿ ಅಪಘಾತ ಸಂಭವಿಸಿ ವಾಹನ ಸವಾರರು ಪರದಾಡುವಂತಾಗಿರುವ ಘಟನೆ ತಾಲೂಕಿನ ಬಾಶೆಟ್ಟಿಹಳ್ಳಿ ಬಳಿಯ ರೈಲ್ವೇ ಮೇಲ್ ಸೇತುವೆ ಬಳಿ ಸಂಭವಿಸಿದೆ.
ಇಂದು ಬೆಳಗ್ಗೆ ಏಕಾಏಕಿ ಯಾವುದೇ ಮುಂಜಾಗ್ರತೆ ಕ್ರಮಕೈಗೊಳ್ಳದೆ, ಮೇಲ್ ಸೇತುವೆ ಮೇಲೆ ಟೆಂಪೋ ನಿಲ್ಲಿಸಿಕೊಂಡು, ರಸ್ತೆ ಬದಿಗೆ ಸಿಮೆಂಟ್ ಬಳಿಯಲ್ಲು ಕಾರ್ಮಿಕರು ಮುಂದಾಗಿದ್ದು, ಈ ವೇಳೆ ತಿರುವಿನಲ್ಲಿ ವಾಹನ ನಿಂತಿರುವುದು ಕಾಣದೆ ಬೆಂಗಳೂರು ಕಡೆಯಿಂದ ಬಂದ ಕಾರು ದಿಢೀರನೆ ಬ್ರೆಕ್ ಹಾಕಿದ ಪರಿಣಾಮ ಸುಮಾರು ಐದಕ್ಕೂ ಹೆಚ್ಚು ಕಾರುಗಳು ಸರಣಿ ಅಪಘಾತಕ್ಕೆ ಒಳಗಾಗಿವೆ.
ಟೋಲ್ ಸಂಗ್ರಹಿಸುವುದನ್ನು ಬಿಟ್ಟು, ವಾಹನ ಸವಾರರ ಸುರಕ್ಷತೆಯ ಬಗ್ಗೆ ಕಿಂಚಿಂತು ಕಾಳಜಿವಹಿಸುತ್ತಿಲ್ಲ ಎಂಬ ಆರೋಪಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಕಾಮಗಾರಿ ನಡೆಸುವ ಮುನ್ನ ಬ್ಯಾರಿಕೇಟ್ ಅಳವಡಿಸುವುದು ಮುಂತಾದ ಮುಂಜಾಗ್ರತೆಯ ಕ್ರಮಕೈಗೊಳ್ಳದ ಏಕಾಏಕಿ ಕಾಮಗಾರಿಗೆ ಮುಂದಾಗಿರುವ ಪರಿಣಾಮ ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಣಿ ಅಪಘಾತದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲವಾಗಿದ್ದರು, ವಾಹನಗಳಿಗೆ ಹಾನಿಯಾಗಿದೆ.
ಘಟನೆಯಿಂದಾಗಿ, ಈ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ನೂರಾರು ವಾಹನಗಳು ಸಿಲುಕಿವೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….