ಮುಂಬೈ, (ಆಗಸ್ಟ್.18); ಸಾಗರದ ಮೇಲಿನ ದೇಶದಲ್ಲೇ ಉದ್ದನೆಯ ಸೇತುವೆ ಎನಿಸಿಕೊಂಡಿರುವ ‘ಅಟಲ್ ಬಿಹಾರಿ ವಾಜಪೇಯಿ ಸ್ಮರಣೆಯ ಸೇತುವೆ’ ಮೇಲಿನಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಜೀನ್ಸ್ ಪ್ಯಾಂಟ್ ಧಾರಿ ಮಹಿಳೆಯನ್ನು (ಎಂಎಚ್02-ಎಫ್ ಕ್ಯಾಬ್ ಚಾಲಕ ಮತ್ತು ಸಂಚಾರಿ ಪೊಲೀಸರು ಸಕಾಲಿಕ ಕ್ರಮ ಕೈಗೊಂಡು ರಕ್ಷಿಸಿದ್ದಾರೆ.
ಆದರೆ, ಆ ಮಹಿಳೆ ನಾನು ಜಖಂಗೊಂಡಿದ್ದ ದೇವರ ಫೋಟೊ ವನ್ನು ಸಮುದ್ರಕ್ಕೆ ಎಸೆಯಲು ಯತ್ನಿಸಿದ್ದೆ ಅಷ್ಟೆ ಎಂದು ಸಮಜಾಯಿಷಿ ನೀಡಿದ್ದಾರೆ.
ಈ ಘಟನೆಯ ಕುರಿತು ಸೇತುವೆ ಮೇಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳು ಮಹಿಳೆ ಅಟಲ್ ಸೇತುವೆಯ ತಡೆಗೋಡೆ ದಾಟಿ ಸಮುದ್ರದ ಕಡೆಗೆ ಮುಖ ಮಾಡಿ ಜಿಗಿಯಲು ಸಿದ್ದವಾಗಿದ್ದನ್ನು ತೋರಿಸಿವೆ.
ಆಕೆ ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಕಂಡು ತಕ್ಷಣ ಕ್ಯಾಬ್ ನಿಲ್ಲಿಸಿ ಸೇತುವೆ ಮಗ್ಗಲಿಗೆ ಬಂದು ನಿಂತ ಚಾಲಕ, ಮಹಿಳೆ ಸಮುದ್ರಕ್ಕೆ ಜಿಗಿದ ಕ್ಷಣವೇ ಆಕೆಯ ಕೈಯನ್ನು ಥಟ್ಟನೆ ಹಿಡಿದುಕೊಂಡು ರಕ್ಷಿಸಿದ್ದಾರೆ. ಅದರ ಬೆನ್ನಲ್ಲೇ ಹೆದ್ದಾರಿ ಗಸ್ತು ಪೊಲೀಸರ ವಾಹನವೂ ಅದೇ ಮಾರ್ಗದಲ್ಲಿ ಬಂದಿದೆ.
ಶ್ವೇತ ಸಮವಸ್ತ್ರಧಾರಿ ಪೊಲೀಸರೂ ತಕ್ಷಣವೇ ಕಾರ್ಯೋನ್ಮುಖರಾಗಿ ಮಹಿಳೆಯ ಇನ್ನೊಂದು ಕೈಯನ್ನು ಹಿಡಿದು ಮೇಲಕ್ಕೆ ಎಳೆದು ಸೇತುವೆ ತಡೆಗೋಡೆಯಿಂದ ಈಚೆಗೆ ಕರೆ ತಂದಿದ್ದಾರೆ.
ಆ.16ರ ಶುಕ್ರವಾರ ಮಧ್ಯಾಹ್ನ 3ರ ವೇಳೆ ನಡೆದಿರುವ ಈ ಘಟನೆಯ ರೋಚಕ ವಿಡಿಯೋವನ್ನು ಮುಂಬೈ ಪೊಲೀಸ್ ಇಲಾಖೆ ಹಂಚಿಕೊಂಡಿದ್ದು, ವಿಡಿಯೊ ವೈರಲ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….