ದೊಡ್ಡಬಳ್ಳಾಪುರ, (ಆಗಸ್ಟ್.17); ಬೆಸ್ಕಾಂ ನಗರ ಉಪವಿಭಾಗ ವ್ಯಾಪ್ತಿಯ ಕೆಐಎಡಿಬಿ ಹಾಗೂ ಅಪೇರಲ್ ಪಾರ್ಕ್ ಉಪಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಈ ಭಾಗದ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ನಾಳೆ (ಆಗಸ್ಟ್.18) ಬೆಳಿಗ್ಗೆ 9 ಗಂಟೆ ಇಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಪಿ.ವಿನಯ್ ಮಾರ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ ಕೆಐಎಡಿಬಿ, ಕೆಎಸ್ಎಸ್ಐಡಿಸಿ, ಓಬದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಕೈಗಾರಿಕ ಪ್ರದೇಶಗಳು, ದೊಡ್ಡತುಮಕೂರು, ಹೊಸಹುಡ್ಯ, ಗೌಡಹಳ್ಳಿ, ಬಾಶೆಟ್ಟಿಹಳ್ಳಿ, ಅರಳುಮಲ್ಲಿಗೆ, ಎಸ್.ಎಂ.ಗೊಲ್ಲಹಳ್ಳಿ, ಜಿಂಕೆಬಚ್ಚಹಳ್ಳಿ, ಮಜರಾಹೊಸಹಳ್ಳಿ, ಚಿಕ್ಕತುಮಕೂರು, ವೀರಾಪುರ.
ಆಲಹಳ್ಳಿ, ಹಮಾಮ್, ಶಿವಪುರ, ದೇವನಹಳ್ಳಿ ರಸ್ತೆ, ಸಿದ್ದೇನಾಯಕನಹಳ್ಳಿ, ರೈಲ್ವೆ ಸ್ಟೇಷನ್, ವರದನಹಳ್ಳಿ, ಬಿನುವನಹಳ್ಳಿ.
ದೊಡ್ಡಬಳ್ಳಾಪುರ ನಗರದ ಖಾಸ್ ಬಾಗ್, ಶ್ರೀನಗರ, ಚಂದ್ರಶೇಕರಪುರ ಭುವನೇಶ್ವರಿ ನಗರ, ತೇರಿನ ಬೀದಿ, ರಂಗಪ್ಪ ಸರ್ಕಲ್, ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯ ರಸ್ತೆ, ಸಂಜಯನಗರ, ಚೈತನ್ಯನಗರ, ವಿದ್ಯಾನಗರ, ಕೆಸಿಪಿ ಸರ್ಕಲ್, ವೀರಭದ್ರನಪಾಳ್ಯ, ತೂಬಗೆರೆಪೇಟೆ, ಗಾಂಧಿನಗರ, ಕೆರೆ ಬಾಗಿಲು ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತವಾಗಲಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….