ದಾವಣಗೆರೆ, (ಆಗಸ್ಟ್.16); ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಕಾಟೀಹಳ್ಳಿ ಗ್ರಾಮದ ಜಮೀನಿನಲ್ಲಿ ಗುರುವಾರ ಸಂಭವಿಸಿದ್ದು, ತಡವಾಗಿ ತಿಳಿದುಬಂದಿದೆ.
ಮೃತರನ್ನು ಲತಾ ಹಾಗೂ ನಾಗರಾಜ್ ದಂಪತಿ ಎಂದು ಗುರುತಿಸಲಾಗಿದೆ.
ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಟ್ರಾನ್ಸ್ಫಾರ್ಮರ್ನಿಂದ ವಿದ್ಯುತ್ ಗ್ರೌಂಡ್ ಆಗಿದ್ದನ್ನು ಗಮನಿಸಿದೆ ತೆರಳಿದ ಪರಿಣಾಮ ಶಾಕ್ ತಗುಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಾಗರಾಜ್ ಹಾಗೂ ಲತಾ ದಂಪತಿ ರೈತರಾಗಿದ್ದು, ದಿನನಿತ್ಯ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಮಳೆ ಹೆಚ್ಚಾಗಿದ್ದರಿಂದ ಮಳೆಯಿಂದ ಇಡೀ ಟ್ರಾನ್ಸ್‌ಫಾರ್ಮರ್ ಒದ್ದೆಯಾಗಿದ್ದು, ವಿದ್ಯುತ್ ಗ್ರೌಂಡ್ ಆಗಿದೆ. ಇದನ್ನು ಗಮನಿಸದ ಇಬ್ಬರೂ ಕೆಲಸ ಮಾಡುತ್ತಾ ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….