ಶ್ರೀನಗರ, (ಆಗಸ್ಟ್.16); ಕಳೆದ ಕೆಲ ತಿಂಗಳಿನಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ, ಗುಂಡಿನ ಚಕಮಕಿಯಿಂದಾಗಿ ಸಾವು ನೋವು ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸೇನೆ ಮತ್ತು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಉಗ್ರಗಾಮಿಗಳು ಸದೆ ಬಡೆಯಲು ಮುಂದಾಗಿದ್ದಾರೆ. ಆದರೆ ಈ ವೇಳೆ ವಿಶೇಷ ಕಾರ್ಯಾಚರಣೆ ತಂಡದೊಂದಿಗೆ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತೆಯೊಬ್ಬರು ತೆರಳಿ ಲೈವ್ ವರದಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಾನೂಕ್ರಮಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.
ಕಾರ್ಯಾಚರಣೆ ವೇಳೆ ಭದ್ರತಾ ಅಧಿಕಾರಿಗಳ ಜೀವವನ್ನು ಅಪಾಯಕ್ಕಿಟ್ಟು ಟಿಆರ್‌ಪಿಗಾಗಿ ವರದಿಗಾರ್ತಿ ಈ ಮಟ್ಟಕ್ಕೆ ಇಳಿದಿರುವ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಖಾಸಗಿ ಸುದ್ದಿವಾಹಿನಿಯ ವರದಿಗಾರ್ತಿ ಕೋಮಲ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಕಾರ್ಯಾಚರಣೆಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ಅವರ ವ್ಯಾನ್ ಹತ್ತಿ ಲೈವ್ ಗೌಂಡ್ ರಿಪೋರ್ಟ್ ನಡೆಸಿದ್ದಾರೆ.
ಆಕೆ ತಮ್ಮ ಲೈವ್ ಆಪರೇಷನ್ ಕವರೇಜ್ ಬಗ್ಗೆ ಹೆಮ್ಮೆ ಪಟ್ಟರೂ ಭದ್ರತಾ ಅಧಿಕಾರಿಗಳ ಪ್ರೋಟೋಕಾಲ್‌ಗಳ ನಿರ್ಲಕ್ಷ್ಯವಾಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ವರದಿಗಾರ್ತಿಯ ಉಪಸ್ಥಿತಿಯಿಂದ ಜಮ್ಮು ಮತ್ತು ಕಾಶ್ಮೀರ ಪೋಲೀಸ್ ಸಿಬ್ಬಂದಿಗೆ ಅನಾನುಕೂಲತೆ ಉಂಟಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಆಕೆಯನ್ನು ಪೊಲೀಸ್ ವಾಹನದಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರೂ ಆಕೆ ತನ್ನ ಸುತ್ತ ಮುತ್ತಲಿನ ಗಂಭೀರ ಸನ್ನಿವೇಶವನ್ನು ಮರೆತು ವರದಿ ಮಾಡುವುದನ್ನು ಮುಂದುವರಿಸಿದ್ದಾಳೆ.
ಪೊಲೀಸ್ ವ್ಯಾನ್‌ನ ಬಾಗಿಲಿನಲ್ಲೇ ಕುಳಿತು ವರದಿ ಮಾಡಿದ್ದರಿಂದ ಬಾಗಿಲು ಮುಚ್ಚಲಾಗದೆ ಸಿಬ್ಬಂದಿಯೊಬ್ಬರು ಗನ್ ಹಿಡಿದು ಬಾಗಿಲಿನಲ್ಲಿ ನೇತಾಡಿರುವುದು ಕಂಡುಬಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….