Site icon
Harithalekhani

TB Damಗೆ ದೌಡಾಯಿಸಿ ಪರಿಶೀಲಿಸಿದ ಡಿಸಿಎಂ ಡಿಕೆ ಶಿವಕುಮಾರ್..!; ಆತಂಕ ಬೇಡವೆಂದು ರೈತರಿಗೆ ಅಭಯ

ಕೊಪ್ಪಳ, (ಆಗಸ್ಟ್ 11): ತುಂಗಭದ್ರಾ ಜಲಾಶಯ (TB Dam) ಕ್ರಸ್ಟ್ ಗೇಟ್ ಚೈನ್ ಕಿತ್ತು ಹೋದ ಹಿನ್ನಲೆ ಜಲಾಶಯಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK SHIVAKUMAR) ನೀಡಿ ಪರಿಶೀಲಿಸಿದರು.

ತುಂಗಭದ್ರಾ ಜಲಾಶಯದಲ್ಲಿ ಮೇಲೆ ನಿಂತು ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಿನ್ನೆ ರಾತ್ರಿ ಜಲಾಶಯದ (TB Dam) 10 ಗೇಟ್ ಓಪನ್ ಇದ್ದವು. ಏಕಾಏಕಿ ಜಲಾಶಯದ 19 ನೇ ಗೇಟ್ ಡ್ಯಾಮೇಜ್ ಹಿನ್ನೆಲೆ ಎಲ್ಲಾ ಗೇಟ್ ಓಪನ್ ಮಾಡಿ ಪ್ರೆಶರ್ ಕಡಿಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು‌.

ರಿಪೇರಿ ಮಾಡಲು ಉನ್ನತ ಅನುಭವವುಳ್ಳವರನ್ನು  ಕರೆಸುತ್ತಿದ್ದೇವೆ. ಅವರಿಗೆ ಈಗಾಗಲೇ ಡಿಸೈನ್ ನೀಡಲಾಗಿದೆ. ಇನ್ನು, ಕೂಡಲೇ ಕೆಲಸ ಮಾಡಲು ತಯಾರು ಮಾಡಲಾಗಿದೆ ಎಂದು ತಿಳಿಸಿದರು‌.

ಸದ್ಯ, ಜಲಾಶಯದಿಂದ 98 ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಡಲಾಗ್ತಿದೆ. 19ನೇ ಗೇಟ್ ಒಂದರಲ್ಲಿಯೇ 35 ಸಾವಿರ ಕ್ಯೂಸೆಕ್ ನೀರು ಹೋರ ಹೋಗುತ್ತಿದೆ ಎಂದರು.

ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಭಯಪಡುವ ಅವಶ್ಯಕತೆ ಇಲ್ಲ. ಜಲಾಶಯದಿಂದ 60 ಟಿಎಂಸಿ ನೀರು ಖಾಲಿ ಮಾಡಬೇಕಿದೆ. ಹೀಗಾಗಿ, ‌ನೀರು ಹೊರಗಡೆ ಬಿಡಲಾಗ್ತಿದೆ. ಆ.13 ರಂದು ನಾನು, ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮವಿತ್ತು. ಆದರೆ ಈಗ ಅದನ್ನು ಮುಂದೂಡಲಾಗಿದೆ ಎಂದರು.

ಇದು 60 ರಿಂದ 70 ವರ್ಷ ಹಳೆಯ ಜಲಾಶಯ. ಘಟನೆಗೆ ಸಂಬಂಧಿಸಿದಂತೆ ನಾನು ಯಾವ ಅಧಿಕಾರಿಗಳನ್ನೂ ದೂರುವುದಿಲ್ಲ ಡಿಸಿಎಂ ಡಿಕೆಶಿ ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version