ಬೆಳ್ಳಂಬೆಳ್ಳಿಗ್ಗೆ ಗುಂಡಿನ ಸದ್ದು.. ರೌಡಿಶೀಟರ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ

ಮಂಡ್ಯ, (ಆಗಸ್ಟ್.11); ಬೆಳ್ಳಂಬೆಳ್ಳಿಗ್ಗೆ ಮಂಡ್ಯದಲ್ಲಿ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಡಕ್ಕ ಅಲಿಯಾಸ್ ಮುತ್ತುರಾಜ್‌ನ ಮೇಲೆ ಹಲಗೂರು ಠಾಣಾ ಸಿಪಿವೈ ಶ್ರೀಧರ್ ಗುಂಡು ಹೊಡೆದಿದ್ದಾರೆ.

ಜುಲೈ 30 ರಂದು ಕಾಂತರಾಜು ಎಂಬಾತನ ಕೊಲೆ ನಡೆದಿತ್ತು. ಆ ಕುರಿತಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸಿಪಿವೈ ಶ್ರೀಧ‌ರ್ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ನಡೆಸುತ್ತಿದ್ದರು.

ಕಾಂತರಾಜು ಕೊಲೆಗೆ ಮುತ್ತುರಾಜ ಅಲಿಯಾಸ್ ಡಕ್ಕ ಎಂಬಾತನಿಂದ ಸುಫಾರಿ ಬಗ್ಗೆ ಆರೋಪಿಗಳು ತನಿಖೆ ವೇಳೆ ಬಾಯ್ದಿಟ್ಟಿದ್ದರು. ಈತ ಡಕ್ಕ ಚಿಕ್ಕಮಲಗೂಡು ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.

ಡಕ್ಕ ಬೈಕ್ ನಲ್ಲಿ ಹೋಗುತ್ತಿರುವಾಗ ಆರೋಪಿಯನ್ನ ಹಿಡಿಯಲು ಸಿಪಿಐ ಶ್ರೀಧರ್ ಅಂಡ್ ಟೀಂ ಮುಂದಾಗಿತ್ತು. ಈ ವೇಳೆ ಬೈಕ್ ಬೀಳಿಸಿ ಡಕ್ಕ ಓಡಲು ಮುಂದಾಗಿದ್ದ ಈ ವೇಳೆ ಹಿಡಿಯಲು ಮುಂದಾದ ಪೇದೆ ಮೇಲೆ ಡ್ರಾಗನ್ ನಿಂದ ಹಲ್ಲೆ ನಡೆಸಿದ್ದ ಆರೋಪಿ ಡಕ್ಕ ಏರ್ ಫೈರ್ ವಾರ್ನಿಂಗ್ ಬಗ್ಗಲಿಲ್ಲ. ಕೊನೆಗೆ ತಮ್ಮ ಆತ್ಮರಕ್ಷಣೆಗಾಗಿ ಸಿಪಿವೈ ಶ್ರೀಧರ್ ರಿಂದ ಫೈರಿಂಗ್ ಮಾಡಿದ್ದಾರೆ.

ಡಕ್ಕನ ಬಲಗಾಲಿಗೆ ಗುಂಡೇಟು ತಗುಲಿದೆ. ಮುತ್ತುರಾಜ್ ಅಲಿಯಾಸ್ ಡಕ್ಕ 11 ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. 3 ಕೊಲೆ, 3 ಕೊಲೆಗೆ ಯತ್ನ 2 ರಾಬರಿ ಪ್ರಕರಣ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….