ಚಿಕ್ಕಬಳ್ಳಾಪುರ, (ಜುಲೈ.17); ಟೊಮೆಟೊ ತೋಟಕ್ಕೆ ದೃಷ್ಟಿಯಾಗುತ್ತೆ ಎಂದು ನಟಿ ರಚಿತಾ ರಾಮ್ ಹಾಗೂ ಸನ್ನಿ ಲಿಯೋನ್ ಫೋಟೋವನ್ನು ಹಾಕಿದ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಕೃಷಿ ತೋಟಗಳಲ್ಲಿ, ಗದ್ದೆಗಳಲ್ಲಿ ಬೆರ್ಚಪ್ಪ, ಬೆದುರು ಗೊಂಬೆಯನ್ನು ಇಡುತ್ತಾರೆ. ದೃಷ್ಟಿಯಾಗುತ್ತದೆ ಎಂಬ ನಂಬಿಕೆ ಆಧಾರದ ಮೇಲೆ ಮತ್ತು ಪ್ರಾಣಿ, ಪಕ್ಷಿಗಳು ಈ ಕಲಾಕೃತಿಯನ್ನು ಮನುಷ್ಯನೆಂದು ತಿಳಿದು ಹತ್ತಿರ ಸುಳಿಯದಂತಿರಲು ಈ ಪ್ಲಾನ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ರೈತ ವಿನೂತನ ಪ್ರಯೋಗ ಮಾಡಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ರೈತ ದೀಪಕ್ ಎಂಬುವವರು ತನ್ನ ತೋಟದಲ್ಲಿ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನ್ ಫೋಟೋ ಬಳಕೆ ಮಾಡಿದ್ದಾರೆ.
ಸದ್ಯ ಟೊಮೆಟೊ ಬೆಲೆ 4 ಸಾವಿರದಿಂದ 5 ಸಾವಿರ ರೂಪಾಯಿ ಗಡಿ ದಾಟಿದೆ. ಒಳ್ಳೆಯ ಫಸಲು ಬರುವ ನೀರೀಕ್ಷೆಯಲ್ಲಿದೆ.
ಹೀಗಾಗಿ ರೈತ ದೀಪಕ್ ಟೊಮೆಟೊ ಬೆಳೆಗೆ ಜನರ ದೃಷ್ಟಿ ತಾಗದಿರಲಿ ಅಂತ ನಟಿಯರ ಪೋಟೋಗಳನ್ನು ನೇತು ಹಾಕಿದ್ದಾರೆ.
ಮತ್ತೊಂದು ಸಂಗತಿ ಎಂದರೆ ಸನ್ನಿ ಲಿಯೋನ್ಗೆ ರಾಜ್ಯದಲ್ಲಿ ಅಭಿಮಾನಿಗಳು ಇದ್ದಾರೆ. ಅಭಿಮಾನಿ ಸಂಘಗಳು ಇವೆ. ಜಾತ್ರೆ ಹಾಗೂ ಹಬ್ಬಗಳಿಗೆ ಅವರ ಕಟೌಟ್ಗಳನ್ನು ಹಾಕಿದ ಉದಾಹರಣೆಗಳಿವೆ.
ಇನ್ನು ಕನ್ನಡದ ನಟಿ ರಚಿತಾ ರಾಮ್ ಕೂಡ ಕಡಿಮೆ ಏನಿಲ್ಲ. ಹಲವು ಸಿನಿಮಾಗಳ ಮೂಲಕ ಅನೇಕ ಮನಗೆದ್ದ ನಟಿಯಾಗಿದ್ದಾರೆ.
ಹೀಗಾಗಿ ಕೃಷಿ ಮತ್ತು ಟೊಮೆಟೊ ಮೇಲಿನ ಕಣ್ಣುಗಳು ಡಿಂಪಲ್ ಕ್ವೀನ್ ಫೋಟೋಗಳ ಮೇಲೆ ಬೀಳಲಿ ಎಂದು ಈ ರೈತ ಸಖತ್ ಉಪಾಯ ಮಾಡಿದ್ದಾರೆ. ದೀಪಕ್ ವಿನೂತನ ಐಡಿಯಾಗೆ ಸ್ಥಳೀಯರು ಫಿದಾ ಆಗಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….