ಬೆಂಗಳೂರು, (ಜುಲೈ.16); ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರು ವಾಟರ್ ಫಾಲ್ಸ್ ಬಳಿ ನಡೆದು ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ.
ದೀಪಿಕಾ ದಾಸ್ ಮುಗ್ಗರಿಸಿ ಬಿದ್ದಿರೋ ವಿಡಿಯೋವನ್ನು ಸ್ವತಃ ಅವರೇ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಾಟರ್ ಫಾಲ್ಸ್‌ನಲ್ಲಿ ಜಾಲಿಯಾಗಿ ವಿಡಿಯೋ ಮಾಡಿಸಿಕೊಳ್ಳುತ್ತಾ ಸಾಗುತ್ತಿದ್ದ ವೇಳೆ ದೀಪಿಕಾ ದಾಸ್ ಅವರ ಕಾಲು ಜಾರಿದ್ದು, ಮುಖದ ಎಡಭಾಗದಲ್ಲಿ ಸ್ವಲ್ಪ ಪೆಟ್ಟಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ದಾಸ್ ಅವರು ಕಾಲು ಜಾರಿ ಬಿದ್ದಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದೀಪಿಕಾ ದಾಸ್ ಫಾಲಿಂಗ್ ಡೌನ್ ವಿಡಿಯೋ ನೋಡಿದ ಕೆಲವ್ರು ನಟಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ರೀಲ್ಸ್ ಮಾಡೋಕೆ ಹೀಗೆ ಮಾಡಿರಬಹುದು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ದೀಪಿಕಾ ದಾಸ್ ಅವರು ಮುಖಕ್ಕೆ ಸ್ವಲ್ಪ ಪೆಟ್ಟಾಗಿದೆ. ಬಟ್, ಆರಾಮಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….