ಬೆಂಗಳೂರು, (ಜುಲೈ.16); ಎಸ್‌ಐಟಿ ತನಿಖೆ ಬಗ್ಗೆ ಮಾತನಾಡುತ್ತಾ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ನಿಧಾನ ತನಿಖೆ ಮಾಡುವ ಎಸ್‌ಐಟಿ, ರೇವಣ್ಣ ಹಾಗೂ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಟಿವ್ ಆಗಿ ಕೆಲಸ ಮಾಡುತ್ತದೆ ಎಂದು ಆರೋಪಿಸಿದರು. ಈ ವೇಳೆ ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಷದ್, ರೇವಣ್ಣ ಪ್ರಕರಣ ಈ ಪ್ರಕರಣಕ್ಕಿಂತ ಕಡಿಮೆನಾ..? ಪದೇ ಪದೇ ತುಲನೆ ಮಾಡ್ತಾ ಇದ್ದೀರಿ. ಮಹಿಳೆಯರ ಮಾನ ಹರಾಜಾಗಿರುವುದು ನಮಗ್ಯಾರಿಗೂ ಚಿಂತನೆ ಆಗ್ಬಾರ್ದಾ..? ಕಾನೂನು ಕೆಲಸ ಮಾಡ್ಬಾರ್ದಾ..? SIT ಕೆಲಸ ಮಾಡ್ಬಾರ್ದಾ..?
ನೀವ್ ಪದೇ ಪದೇ ಹೇಳ್ತಾ ಇದ್ದೀರಿ.. ರೇವಣ್ಣನಿಗೆ ಒಂದ್ ಕಾನೂನು, ಇಲ್ಲಿಗೊಂದ್ ಕಾನೂನು ಅಂತ.. ಅಂದರೆ ಈ ಪ್ರಕರಣಕ್ಕಿಂತ ರೇವಣ್ಣ ಪ್ರಕರಣ ಕಡಿಮೆನಾ..? ನೂರಾರು ಮಹಿಳೆಯರ ಜೊತೆ ಆಗಿದೆಯಲ್ಲ ಅದನ್ನ ಯಾರಿ ಸೀರಿಯಸ್ಸಾಗಿ ತಗೋಬಾರ್ದಾ..? ನಿಮ್ ಉದ್ದೇಶ ಏನು.. 10 ಸಾರಿ ವಿರೋಧ ಪಕ್ಷದ ನಾಯಕರು ರೇವಣ್ಣ ಪ್ರಕರಣದ ಬಗ್ಗೆ ಕಂಪೇರ್ ಮಾಡಿ ಮಾತಾಡ್ತಾ ಇದ್ದಾರೆ .. ಎರಡು ಪ್ರಕರಣ ಹೋಲಿಕೆ ಮಾಡುವುದು ಸರಿಯೇ? ಎಂದು ರಿಜ್ವಾನ್ ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ, ಹಣ ಹೋಗಿದೆ ಹಣ ಬರುತ್ತದೆ. ಆದರೆ ಮಾನ ಹೋದರೆ ವಾಪಸ್ ಬರುತ್ತಾ? ಹೆಣ್ಣುಮಕ್ಕಳಮಾನ ಕಾಪಾಡೋದು ಯಾರು? ಎಂದು ಪ್ರಶ್ನಿಸಿದರು
ಈ ವೇಳೆ ಎಚ್ ಡಿ ರೇವಣ್ಣ ಮಾತನಾಡಿ, ನನ್ನ ಮಗ ತಪ್ಪು ಮಾಡಿದರೆ ಗಲ್ಲಿಗೆ ಹಾಕಿ. ನಾ ಸಮರ್ಥನೆ ಮಾಡಲ್ಲ.. ನನ್ನ ಮೇಲೆ ಯಾರೋ ಹೆಣ್ಣು ಮಕ್ಕಳನ್ನು ಕರೆಸಿಕೊಂಡು ಡಿಜಿ ಕಚೇರಿಯಲ್ಲಿ ದೂರು ಬರೆಸಿಕೊಳ್ಳುತ್ತಾರೆ. ಡಿಜಿ ಆಗಲು ಯೋಗ್ಯನಾ ಅವನು? ಇದು ನೀಚ ಕೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….